Advertisement

ನಾಗ್ಪುರ : ಕುಟುಂಬ ಸದಸ್ಯದವರೊಂದಿಗೆ ಬಂದು ಮತ ಚಲಾಯಿಸಿದ ಸಚಿವ ಗಡ್ಕರಿ

09:45 AM Apr 12, 2019 | Sathish malya |

ನಾಗ್ಪುರ : ಮಹಾರಾಷ್ಟ್ರದ ನಾಗ್ಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರಿಂದು ಗುರುವಾರ ಬೆಳಗ್ಗೆ ತಮ್ಮ ಮತ ಚಲಾಯಿಸಿದರು.

Advertisement

ನಗರದ ಮಹಲ್‌ ಪ್ರದೇಶದ ಟೌನ್‌ ಹಾಲ್‌ ನಲ್ಲಿನ ಮತಗಟ್ಟೆಗೆ ಬೆಳಗ್ಗೆ 10 ಗಂಟೆಯ ಹೊತ್ತಿಗೆ ಗಡ್ಕರಿ ಅವರು ತಮ್ಮ ಕುಟುಂಬ ಸದಸ್ಯರೊಂದಿಗೆ ಆಗಮಿಸಿದರು.

ಮತ ಚಲಾಯಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗಡ್ಕರಿ, ಜನರು ಭಾರೀ ಸಂಖ್ಯೆಯಲ್ಲಿ ಮತ ಚಲಾಯಿಸಲು ಬರುತ್ತಿರುವುದನ್ನು ಕಂಡು ಸಂತಸವಾಯಿತು ಎಂದು ಹೇಳಿದರು.

ಗಡ್ಕರಿ ವಿರುದ್ಧ ಕಣದಲ್ಲಿ ಸೆಣಸುತ್ತಿರುವವರು ಕಾಂಗ್ರೆಸ್‌ ಅಭ್ಯರ್ಥಿ ನಾನಾ ಪಟೋಳೆ. ಇವರು ಮಾಜಿ ಬಿಜೆಪಿ ಸಂಸದ.

ಇಂದು ಬೆಳಗ್ಗೆ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಮತ್ತು ಪ್ರಧಾನ ಕಾರ್ಯದರ್ಶಿ ಭಯ್ನಾಜಿ ಜೋಗಿ ಅವರು ಕೂಡ ಮತ ಚಲಾಯಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next