Advertisement
544 ಸ್ಥಾನಗಳ ಘೋಷಣೆ ಏಕೆ?ಲೋಕಸಭೆಯಲ್ಲಿ 543 ಸ್ಥಾನಗಳಿದ್ದರೂ ಸಹ 544 ಸ್ಥಾನಗಳಿಗೆ ಕೇಂದ್ರ ಚುನಾವಣ ಆಯೋಗ ಚುನಾವಣೆ ಘೋಷಣೆ ಮಾಡಿರುವುದು ಗೊಂದಲಕ್ಕೆ ಕಾರಣವಾಗಿದೆ. ಇತ್ತೀಚಿನ ದಿನಗಳಲ್ಲಿ ಮಣಿಪುರದಲ್ಲಿ ಸಾಕಷ್ಟು ಹಿಂಸಾಚಾರ ನಡೆದಿದ್ದ ಕಾರಣ, ಇಲ್ಲಿನ 1 ಲೋಕಸಭೆ ಕ್ಷೇತ್ರದಲ್ಲಿ 2 ಬಾರಿ ಚುನಾವಣೆ ನಡೆಸಲು ನಿರ್ಧರಿಸಲಾಗಿದೆ. ಒಂದೇ ಕ್ಷೇತ್ರದಲ್ಲಿ 2 ಬಾರಿ ಚುನಾವಣೆ ನಡೆಯುವುದರಿಂದ ಅಂಕಿಗಳ ಆಧಾರದಲ್ಲಿ 1 ಸ್ಥಾನ ಹೆಚ್ಚಾಗಿದೆ. ಯಾವುದೇ ಹೆಚ್ಚುವರಿ ಸ್ಥಾನಗಳು ಸೇರ್ಪಡೆಯಾಗಿಲ್ಲ ಎಂದು ರಾಜೀವ್ ಕುಮಾರ್ ತಿಳಿಸಿದ್ದಾರೆ.
Related Articles
ಚುನಾವಣೆ ಘೋಷಣೆಬೆನ್ನಲ್ಲೇ ಮಾದರಿ ನೀತಿ ಸಂಹಿತೆ ಜಾರಿಯಾಗಿದೆ. ಉಲ್ಲಂ ಸುವವರ ವಿರುದ್ಧ ಆಯೋಗ ಕಠಿನ ಕ್ರಮ ಕೈಗೊಳ್ಳಲಿದೆ. ಚುನಾವಣೆ ಪ್ರಚಾರಗಳು, ವೆಚ್ಚ, ಅಕ್ರಮ ಶಸ್ತ್ರಾಸ್ತ್ರ ಸಾಗಣೆ, ಮದ್ಯ ಸಾಗಣೆ ಮೇಲೆ ಕಣ್ಣಿಡಲು ಫ್ಲೈಯಿಂಗ್ ಸ್ಕ್ವಾಡ್ ನಿಯೋಜಿಸಲಾಗಿದೆ.
Advertisement
ಮನೆಯಿಂದ ಮತದಾನ85 ವರ್ಷ ಮೇಲ್ಪಟ್ಟವರು ಹಾಗೂ ಶೇ.40ರಷ್ಟು ವಿಕಲತೆ ಹೊಂದಿರುವವರಿಗೆ ಇದೇ ಮೊದಲ ಬಾರಿ ಮನೆಯಿಂದಲೇ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಈವರೆಗೆ ಸುಮಾರು 81 ಲಕ್ಷ ಹಿರಿಯ ನಾಗರಿಕರು ನೋಂದಾಯಿಸಿಕೊಂಡಿದ್ದಾರೆ. ವೈಯಕ್ತಿಕ ದಾಳಿ ಬೇಡ
ಪ್ರಚಾರದ ವೇಳೆ ವೈಯಕ್ತಿಕ ದಾಳಿ, ಕೆಟ್ಟ ಭಾಷೆ ಬಳಕೆ ಮಾಡದಂತೆ ರಾಜಕೀಯ ಪಕ್ಷಗಳ ನಾಯಕರಿಗೆ ಆಯೋಗ ಸೂಚಿಸಿದೆ. ಇದು ಡಿಜಿಟಲ್ ಯುಗ. ನೀವು ಏನೇ ಹೇಳಿದರೂ, ಅದು ಸಾವಿರಾರು ವರ್ಷಗಳ ಕಾಲ ದಾಖಲೆಯಾಗಿ ಉಳಿಯುತ್ತದೆ. ಕೆಟ್ಟ ಪದಗಳು ಬೇಡ. ಚುನಾವಣೆ ವೇಳೆ ಸಭ್ಯತೆ, ಘನತೆಯಿಂದ ವರ್ತಿಸಿ ಎಂದೂ ಹೇಳಿದೆ. 4 ರಾಜ್ಯಗಳಲ್ಲಿ ರಂಗೇರಿದ “ವಿಧಾನ’ ಕಣ
ಆಂಧ್ರಪ್ರದೇಶ, ಅರುಣಾಚಲ, ಸಿಕ್ಕಿಂ, ಒಡಿಶಾದಲ್ಲಿ ಅಸೆಂಬ್ಲಿ ಚುನಾವಣೆ
2024ರ ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆಯ ನಡುವೆಯೇ ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಸಿಕ್ಕಿಂ ಮತ್ತು ಒಡಿಶಾಗಳ ವಿಧಾನಸಭೆ ಚುನಾವಣೆಗಳಿಗೂ ದಿನಾಂಕ ಘೋಷಣೆ ಮಾಡಲಾಗಿದೆ. ಚುನಾವಣೆಯ ಹೊಸ್ತಿಲಲ್ಲಿರುವ ಈ 4 ರಾಜ್ಯಗಳ ಕುರಿತಾದ ಕಿರು ಮಾಹಿತಿ ಇಲ್ಲಿದೆ. ಆಂಧ್ರಪ್ರದೇಶ
ಚುನಾವಣೆ ಘೋಷಣೆಯಾಗುವ ಮೊದಲೇ ಭಾರೀ ರಂಗೇರಿದ್ದ ಆಂಧ್ರಪ್ರದೇಶದ 175 ಕ್ಷೇತ್ರಗಳಿಗೆ ಮೇ 13ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯ ಲಿದೆ. ಪ್ರಸ್ತುತ ವೈಎಸ್‌ಆರ್ ಕಾಂಗ್ರೆಸ್ ಅಧಿಕಾರದಲ್ಲಿದ್ದು, ಜಗನ್‌ಮೋಹನ್ ರೆಡ್ಡಿ ಮುಖ್ಯಮಂತ್ರಿಯಾಗಿದ್ದಾರೆ. ರಾಜ್ಯದ ಪ್ರಮುಖ ವಿಪಕ್ಷವಾಗಿರುವ ಟಿಡಿಪಿ ಹಾಗೂ ವೈಎಸ್‌ಆರ್ ಕಾಂಗ್ರೆಸ್ ಭರ್ಜರಿ ಯಾಗಿ ಈಗಾಗಲೇ ಪ್ರಚಾರ ಆರಂಭಿಸಿವೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಟಿಡಿಪಿ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಂಡಿವೆ. ಹೀಗಾಗಿ ರಾಜ್ಯ ಚುನಾವಣ ಕಣ ಮತ್ತಷ್ಟು ರಂಗೇರಿದೆ. ಕಳೆದ ಚುನಾವಣೆಯಲ್ಲಿ 151 ಸ್ಥಾನಗಳಲ್ಲಿ ಗೆದ್ದಿದ್ದ ಜಗನ್ ಈ ಸ್ಥಾನಗಳನ್ನು ಉಳಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ. ಅರುಣಾಚಲ ಪ್ರದೇಶ
ಅರುಣಾಚಲ ಪ್ರದೇಶದ 60 ಸ್ಥಾನಗಳಿಗೆ ಎ.19ಕ್ಕೆ ಚುನಾವಣೆ ನಡೆಯಲಿದ್ದು, ಜೂ.4ರಂದು ಫಲಿತಾಂಶ ಪ್ರಕಟವಾಗಲಿದೆ. ಪ್ರಸ್ತುತ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದು, ಪೆಮಾ ಖಂಡು ಮುಖ್ಯಮಂತ್ರಿಯಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಕೇವಲ 4 ಸ್ಥಾನಗಳನ್ನು ಮಾತ್ರ ಗೆದ್ದಿದ್ದ ಕಾಂಗ್ರೆಸ್ ಇಂಡಿಯಾ ಮೈತ್ರಿಕೂಟ ಕಟ್ಟಿಕೊಂಡು ಈ ಬಾರಿ ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ ಹೊಂದಿತ್ತು. ಆದರೆ ಕಳೆದ ಬಾರಿ 7 ಸ್ಥಾನಗಳನ್ನು ಗೆದ್ದಿದ್ದ ಜೆಡಿಯು ಇದೀಗ ಬಿಜೆಪಿ ಜತೆ ಸೇರ್ಪಡೆಯಾಗಿರುವುದು ಈಶಾನ್ಯ ರಾಜ್ಯದಲ್ಲಿ ಅಧಿ ಕಾರಕ್ಕೇರುವ ಕಾಂಗ್ರೆಸ್ ಆಸೆ ಹಾಗೆಯೇ ಉಳಿದುಕೊ ಳ್ಳಲಿದೆ ಎಂಬ ವಿಶ್ಲೇಷಣೆಗಳು ಕೇಳಿಬಂದಿವೆ. ಸಿಕ್ಕಿಂ
ಸಿಕ್ಕಿಂನ 32 ವಿಧಾನಸಭಾ ಸ್ಥಾನಗಳಿಗೆ ಎ.19ರಂದು ಚುನಾವಣೆ ನಡೆಯಲಿದೆ. ಪ್ರಸ್ತುತ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ ಪಕ್ಷದ ನೇತೃತ್ವದ ಸರಕಾರ ಅಧಿಕಾರದಲ್ಲಿದ್ದು, ಪ್ರೇಮ್‌ಸಿಂಗ್ ತಮಂಗ್ ಮುಖ್ಯಮಂತ್ರಿ ಯಾಗಿದ್ದಾರೆ. ಸಿಕ್ಕಿ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷಗಳು ರಾಜಕೀಯವಾಗಿ ಸಾಕಷ್ಟು ಪ್ರಬಲವಾಗಿದ್ದು, ಮತ್ತೂಮ್ಮೆ ಆಡಳಿತದಲ್ಲಿರುವ ಎಸ್‌ಕೆಎಂ ಅಥವಾ ವಿಪಕ್ಷದಲ್ಲಿರುವ ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ ಅಧಿಕಾರಕ್ಕೆ ಬರಬಹುದು ಎನ್ನಲಾಗಿದೆ. ಕಳೆದ ಚುನಾವಣೆಯಲ್ಲಿ ಎಸ್‌ಕೆಎಂ 17 ಮತ್ತು ಎಸ್‌ಡಿಎಫ್ 15 ಸ್ಥಾನಗಳಲ್ಲಿ ಜಯಗಳಿಸಿದ್ದವು. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಕಳೆದ ಚುನಾವಣೆಯಲ್ಲಿ ಇಲ್ಲಿ ಖಾತೆ ತೆರೆದಿರಲಿಲ್ಲ. ಒಡಿಶಾ
ಪ್ರಸ್ತುತ ಒಡಿಶಾದಲ್ಲಿ ಬಿಜು ಜನತಾದಳದ ನೇತೃತ್ವದ ಸರಕಾರ ಅಧಿಕಾರದಲ್ಲಿದ್ದು, ನವೀನ್ ಪಟ್ನಾಯಕ್ ಮುಖ್ಯಮಂತ್ರಿಯಾಗಿದ್ದಾರೆ. ರಾಜ್ಯದ 147 ಸ್ಥಾನ ಗಳಿಗೆ ಮೇ 13 ಮತ್ತು 20 ರಂದು 2 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಚುನಾವಣೆ ಹಿನ್ನೆಲೆಯಲ್ಲಿ ಮೈತ್ರಿ ಮಾಡಿಕೊ ಳ್ಳಲು ಬಿಜೆಪಿ ಹಾಗೂ ಬಿಜೆಡಿ ಮುಂದಾಗಿದ್ದರೂ ಸೀಟು ಹಂಚಿಕೆ ವಿಚಾರಕ್ಕೆ ಈ ಮೈತ್ರಿ ಮುರಿದು ಬಿದ್ದಿತ್ತು. ಹೀಗಾಗಿ ರಾಜ್ಯ ವಿಧಾನಸಭೆ ಚುನಾವಣೆ ಸಾಕಷ್ಟು ಕುತೂಹಲ ಮೂಡಿಸಿದೆ. ಕಳೆದ ಚುನಾವಣೆಯಲ್ಲಿ ಬಿಜೆಡಿ ಬರೋಬ್ಬರಿ 112 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು.