Advertisement
ಪಶ್ಚಿಮ ಬಂಗಾಲ, ಮಣಿಪುರ, ಛತ್ತೀಸ್‌ಗಢ ಹೊರತುಪಡಿಸಿ ಉಳಿದ ಕಡೆ ಬಹುತೇಕ ಚುನಾ ವಣೆಯು ಶಾಂತಯುತವಾಗಿ ನಡೆಯಿತು. ಶುಕ್ರವಾರ ಬೆಳಗ್ಗೆ 7 ಗಂಟೆಗೆ ಆರಂಭವಾದ ಮತದಾನವು ಸಂಜೆ 6 ಗಂಟೆಯವರೆಗೂ ನಡೆಯಿತು. ಬಹುತೇಕ ಕಡೆ ಮೊದಲ ಬಾರಿಗೆ ಹಕ್ಕು ಚಲಾವಣೆ ಮಾಡಿದ್ದಾರೆ. ಹೊಸ ದಾಗಿ ಮದುವೆಯಾದ ಜೋಡಿ, ಅಂಗವಿಕಲರು ಸೇರಿದಂತೆ ಎಲ್ಲರೂ ಹುರುಪಿನಿಂದ ಬಂದು ಮತದಾನ ಮಾಡಿದರೆ, ಹಿರಿಯ ನಾಗರಿಕರೂ ಅತ್ಯುತ್ಸಾಹದಿಂದ ಈ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು. ತಮಿಳುನಾಡು, ಅರುಣಾಚಲ ಪ್ರದೇಶ, ಅಂಡಮಾನ್ ಮತ್ತು ನಿಕೋಬಾರ್ ಹಾಗೂ ಅಸ್ಸಾಂನ ಕೆಲವು ಮತದಾನ ಕೇಂದ್ರಗಳಲ್ಲಿ ಇವಿಎಂಗಳು ಕೈ ಕೊಟ್ಟಿವೆ.
Related Articles
ಚೆನ್ನೈ: ಮೊದಲ ಹಂತದ ಚುನಾವಣೆಯಲ್ಲಿ ತಮಿಳುನಾಡಿನ ಎಲ್ಲ 39 ಲೋಕಸಭೆ ಕ್ಷೇತ್ರಗಳಿಗೆ ಮತದಾನ ನಡೆಯಿತು. ಒಟ್ಟು ಶೇ.72.09 ಮತದಾನವಾಗಿದ್ದು, 2019ರಲ್ಲಿ ಶೇ.74ರಷ್ಟು ಮತ ಚಲಾವಣೆಯಾಗಿದ್ದವು. ಈ ಹಿಂದಿನ ಚುನಾವಣೆಯಲ್ಲಿ ಎರಡನೇ ಹಂತದಲ್ಲಿ ತಮಿಳುನಾಡು ಮತದಾನ ಎದುರಿಸಿತ್ತು. ಡಿಎಂಕೆ ಮತ್ತು ಕಾಂಗ್ರೆಸ್, ಎಐಎಡಿಎಂಕೆ ಮತ್ತು ಬಿಜೆಪಿ ಹಲವು ಕ್ಷೇತ್ರಗಳಲ್ಲಿ ಮುಖಾಮುಖೀಯಾಗಿವೆ. ಹಾಗಾಗಿ, ಚುನಾವಣೆಯ ಭಾರೀ ತುರಿಸಿನಿಂದ ಕೂಡಿತ್ತು. ಬಿಜೆಪಿಯ ಈ ಬಾರಿ ತಮಿಳುನಾಡಿನಲ್ಲಿ ಹೆಚ್ಚು ಸಂಖ್ಯೆಯಲ್ಲಿ ಸ್ಥಾನ ಗೆಲ್ಲುವ ವಿಶ್ವಾಸ ಹೊಂದಿದ್ದರೆ, ಡಿಎಂಕೆ ತನ್ನ ಪಾರಮ್ಯವನ್ನು ಕಾಯ್ದುಕೊಳ್ಳುವ ಪ್ರಯತ್ನ ಮಾಡಿದೆ. ತಮಿಳುನಾಡಿನಲ್ಲಿ ಒಟ್ಟು 950 ಅಭ್ಯರ್ಥಿಗಳು ಕಣದಲ್ಲಿದ್ದರು.
Advertisement
ಮೊದಲ ಹಂತದ ಲೋಕಸಭೆ ಚುನಾವಣೆಗೆ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ. ಮತದಾನ ಮಾಡಿದವರಿಗೆ ವಂದನೆಗಳು. ದೇಶಾದ್ಯಂತ ಜನರು ಎನ್‌ಡಿಎಗೆ ದಾಖಲೆ ಮಟ್ಟದಲ್ಲಿ ಮತ ನೀಡಿರುವುದು ನಮಗೆ ಸ್ಪಷ್ಟವಾಗಿದೆ.-ನರೇಂದ್ರ ಮೋದಿ, ಪ್ರಧಾನಿ 2019ರ 1ನೇ ಹಂತದಲ್ಲಿ ಶೇ.69.43 ಮತದಾನ
2019ರ ಚುನಾವಣೆಯ ಮೊದಲ ಹಂತದಲ್ಲಿ ಶೇ.69.93ರಷ್ಟು ಮತದಾನವಾಗಿತ್ತು. ಆದರೆ ಆಗ ಮೊದಲ ಹಂತದಲ್ಲಿ 91 ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. 2024ರ ಚುನಾವಣೆಯಲ್ಲಿ 1ನೇ ಹಂತದಲ್ಲಿ 102 ಕ್ಷೇತ್ರಗಳಿಗೆ ಮತದಾನ ನಡೆದಿದೆ ಎಂದು ಕೇಂದ್ರ ಚುನಾವಣ ಆಯೋಗವು ತಿಳಿಸಿದೆ. ನಾಗಾಲ್ಯಾಂಡ್‌ನ 6 ಜಿಲ್ಲೆಗಳಲ್ಲಿ ಮತದಾನ ಬಹಿಷ್ಕಾರ
ನಾಗಾಲ್ಯಾಂಡ್‌ನ ಪೂರ್ವ ಭಾಗದ ಜಿಲ್ಲೆಗಳಲ್ಲಿ ಶುಕ್ರ ವಾರ ಶೂನ್ಯ ಮತದಾನವಾಗಿದೆ. ಮತಗಟ್ಟೆಗಳಲ್ಲಿ ಅಧಿಕಾರಿಗಳು, ಸಿಬಂದಿ 9 ಗಂಟೆ ಕಾಲ ಮತದಾರರಿಗಾಗಿ ಕಾದು ಕುಳಿತದ್ದೇ ಬಂತು. ಆದರೆ 4 ಲಕ್ಷ ಮತದಾರರ ಪೈಕಿ ಯಾರೂ ಹಕ್ಕು ಚಲಾವಣೆ ಮಾಡಲು ಆಗಮಿ ಸಲಿಲ್ಲ. ಆಡಳಿತಾತ್ಮಕವಾಗಿ ಪ್ರತ್ಯೇಕ ವಿಭಾಗ ರಚನೆ ಮಾಡಬೇಕು ಎಂದು ಪೂರ್ವ ನಾಗಾಲ್ಯಾಂಡ್ ಜನರ ಒಕ್ಕೂಟ ಆಗ್ರಹಿಸಿತ್ತು. ಜತೆಗೆ ಮತದಾನ ಬಹಿಷ್ಕರಿ ಸಲೂ ಒತ್ತಾಯಿಸಿತ್ತು. ಪ್ರಮುಖ ಜಿಲ್ಲೆಗಳಲ್ಲಿ ಮತದಾ ರರು ಮನೆಯಿಂದಲೇ ಹೊರಗೆ ಬರಲಿಲ್ಲ. ಜತೆಗೆ ವಾಹನಗಳ ಸಂಚಾರವೂ ಇರಲಿಲ್ಲ ಎಂದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮತದಾನ ಬಹಿಷ್ಕಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ನೆಪ್ಯೂ ರಿಯೋ ಅವರ ಬೇಡಿಕೆಗಳನ್ನು ಗೌರವಿಸುವುದಾಗಿ ತಿಳಿಸಿದ್ದಾರೆ. ಮತ ಚಲಾಯಿಸಿದ ಜಗತ್ತಿನ ಅತ್ಯಂತ ಕುಳ್ಳಿ ಜ್ಯೋತಿ
ಶುಕ್ರವಾರ ಆರಂಭಗೊಂಡ ಮೊದಲ ಹಂತದ ಲೋಕಸಭೆ ಚುನಾವಣೆಯಲ್ಲಿ ಜಗತ್ತಿನ ಅತ್ಯಂತ ಕುಬj ವ್ಯಕ್ತಿಯಾಗಿರುವ ಜ್ಯೋತಿ ಕಿಶಂಜಿ ಆಮ್ಗೆ ಮತ ಚಲಾಯಿಸಿದ್ದಾರೆ. ಮಹಾರಾಷ್ಟ್ರದ ನಾಗಪುರ ಲೋಕಸಭಾ ಕ್ಷೇತ್ರದಲ್ಲಿ ಕುಟುಂಬಸ್ಥರೊಂದಿಗೆ ಮತಗಟ್ಟೆಗೆ ತೆರಳಿ ಜ್ಯೋತಿ ಮತ ಚಲಾಯಿಸಿ, ಮತದಾನ ಪ್ರತಿಯೊಬ್ಬರ ಕರ್ತವ್ಯ ಎಂದೂ ಹೇಳಿದ್ದಾರೆ. ಕೆಂಪು ಬಣ್ಣದ ಬಾರ್ಬಿ ಡ್ರೆಸ್ ಧರಿಸಿ ಮತಗಟ್ಟೆಗೆ ತೆರಳಿದ್ದ ಜ್ಯೋತಿ ಅಲ್ಲಿದ್ದ ಎಲ್ಲರ ಗಮನಸೆಳೆದಿದ್ದಾರೆ. ಮತಚಲಾಯಿಸಿ ಬಳಿಕ ಮಾತನಾಡಿ, ಇದು 2ನೇ ಬಾರಿಗೆ ಲೋಕಸಭೆ ಚುನಾವಣೆಯಲ್ಲಿ ನಾನು ಮತದಾನ ಮಾಡುತ್ತಿದ್ದೇನೆ. ಮತದಾನ ಮಾಡುವುದು ನನ್ನ ದೇಶಕ್ಕೆ ನಾನು ಸಲ್ಲಿಸುವ ಸೇವೆಯಾಗಿದೆ ಎಂದು ಹೇಳಿದ್ದಾರೆ. ಇದಕ್ಕೂ ಮುನ್ನ ಮತದಾನದಲ್ಲಿ ಭಾಗಿಯಾಗುವಂತೆ ಚುನಾವಣೆ ಆಯೋಗದ ಪರವಾಗಿಯೂ ಜ್ಯೋತಿ ಜನರಿಗೆ ಕರೆ ನೀಡಿದ್ದರು. ಬಂಗಾಲ, ಮಣಿಪುರ, ಛತ್ತೀಸ್‌ಗಢದಲ್ಲಿ ಹಿಂಸಾಚಾರ: ಸಿಆರ್‌ಪಿಎಫ್ ಯೋಧ ಸಾವು ಹೊಸದಿಲ್ಲಿ: ತಮಿಳುನಾಡು ಸೇರಿದಂತೆ ದೇಶದ 21 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಶುಕ್ರವಾರ ಮೊದಲ ಹಂತದ ಮತದಾನ ನಡೆದಿದೆ. ಪಶ್ಚಿಮ ಬಂಗಾಲ, ಛತ್ತೀಸ್‌ಗಢ, ಮಣಿಪುರಗಳಲ್ಲಿ ಹಿಂಸಾತ್ಮಕ ಘಟನೆಗಳು ನಡೆದಿದೆ. ಛತ್ತೀಸ್‌ಗಢದ ನಕ್ಸಲ್ ಪೀಡಿತ ಲೋಕಸಭಾ ಕ್ಷೇತ್ರ ಬಸ್ತಾರ್‌ನಲ್ಲಿ ಗ್ರೆನೇಡ್ ಸ್ಫೋಟಗೊಂಡು ಸಿಆರ್‌ಪಿಎಫ್ನ ಒಬ್ಬ ಯೋಧ ಹುತಾತ್ಮರಾಗಿದ್ದಾರೆ. ಆ ರಾಜ್ಯದ ಬಿಜಾಪುರದಿಂದ 55 ಕಿ.ಮೀ. ದೂರದಲ್ಲಿರುವ ಗಾಲ್ಗಾಂ ಎಂಬ ಮತಗಟ್ಟೆಯಿಂದ 500 ಮೀಟರ್ ದೂರದಲ್ಲಿ ಈ ಘಟನೆ ನಡೆದಿದೆ. ಯೋಧ ದೇವೇಂದ್ರ ಕುಮಾರ್ (32) ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಪಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಮತ್ತೂಂದು ಘಟನೆಯಲ್ಲಿ ಚಿಹಾಕಾ ಎಂಬ ನಗರದಲ್ಲಿ ಐಇಡಿ ಸ್ಫೋಟಗೊಂಡು ಹಲವು ಯೋಧರು ಗಾಯಗೊಂಡಿದ್ದಾರೆ. ಈ ಪೈಕಿ ಯೋಧರೊಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ. ಬಂಗಾಲದಲ್ಲಿ ಟಿಎಂಸಿ- ಬಿಜೆಪಿ ಘರ್ಷಣೆ ಪಶ್ಚಿಮ ಬಂಗಾಲದ 3 ಕ್ಷೇತ್ರಗಳಲ್ಲಿ ಮತದಾನ ನಡೆದಿದ್ದರೂ, ಭಾರೀ ಪ್ರಮಾಣದಲ್ಲಿ ಹಿಂಸಾತ್ಮಕ ಘಟನೆಗಳು ನಡೆದಿವೆ. ಟಿಎಂಸಿ ಹಾಗೂ ಬಿಜೆಪಿ ಕ್ರಮವಾಗಿ 100 ಮತ್ತು 50 ಕೇಸುಗಳನ್ನು ಪರಸ್ಪರ ನೀಡಿವೆ. ಕೂಚ್ ಬೆಹಾರ್ ಜಿಲ್ಲೆಯ ಫಲಿಮಾರಿ ಗ್ರಾಮದ ಮತಗಟ್ಟೆಯಿಂದ 200 ಮೀಟರ್ ದೂರದಲ್ಲಿ 9 ಸ್ಫೋಟಕಗಳನ್ನು ಪತ್ತೆ ಹಚ್ಚಲಾಗಿದೆ. ಅಲ್ಲಲ್ಲಿ ಆಯಾ ಪಕ್ಷಗಳ ಪ್ರತಿನಿಧಿಗಳನ್ನು ಬೆದರಿಸಿದ ಘಟನೆ, ಬಡಿದಾಟಗಳು ನಡೆದಿವೆ. ಸಿತಾಲ್‌ಕುಚಿ, ಮತಭಂಗ, ಚಾಂದ್‌ಮರಿ ಪ್ರದೇಶಗಳಲ್ಲಿ ಮಾತ್ರವಲ್ಲದೇ, ಅಲಿಪುರ್‌ದುರಾಸ್‌ನಲ್ಲಿ ಬಿಜೆಪಿ ಮತ್ತು ಸಿಆರ್‌ಪಿಎಫ್ ಸಿಬಂದಿ ಮತದಾರರನ್ನು ಬೆದರಿಸಿದ್ದಾರೆಂದು ಟಿಎಂಸಿ ಆರೋಪಿಸಿದೆ. ಇದರ ಹೊರತಾಗಿಯೂ ಭಾರೀ ಪ್ರಮಾಣದಲ್ಲಿ ಮತದಾನವಾಗಿದೆ. ಮಣಿಪುರದಲ್ಲಿ ಗುಂಡು ಹಾರಾಟ; ಇವಿಎಂ ಧ್ವಂಸ: ಮಣಿಪುರದ ಇನ್ನರ್ ಮಣಿಪುರ ಕ್ಷೇತ್ರದ ವಿವಿಧ ಭಾಗಗಳಲ್ಲಿ ಘರ್ಷಣೆಗಳು ನಡೆದಿವೆ. ವಿವಿಧ ಭಾಗ ಗಳಲ್ಲಿ 4 ಇವಿಎಂಗಳನ್ನು ಅಪರಿಚಿತರು ಧ್ವಂಸಗೊಳಿ ಸಿದ್ದಾರೆ. ಮೊಯರಾಂಗ್ ಕ್ಷೇತ್ರದ ಥಮನಪೋಕ್‌ಪಿ, ಇಂಫಾಲ ಪಶ್ಚಿಮ ಜಿಲ್ಲೆಯ ಉರಿಪೋಕ್, ಇರಿಯೋಶೆಂಬಾ ಹಾಗೂ ಇಂಫಾಲ ಪೂರ್ವ ಜಿಲ್ಲೆಯ ಕೀರಾವೋ ಕ್ಷೇತ್ರದ ಕಿಯಾಮ್‌ಗೆàಯಲ್ಲಿ ಶಸ್ತ್ರಧಾರಿಗಳು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಈ ಮೂಲಕ ಜನರನ್ನು ಬೆದರಿಸುವ ಪ್ರಯತ್ನ ಮಾಡಿದ್ದಾರೆ.