ನವದೆಹಲಿ: ಗ್ರಾಹಕರಿಗೆ ದೊಡ್ಡ ಪ್ರಮಾಣದಲ್ಲಿ ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿ) ವಾಣಿಜ್ಯ ಬಳಕೆಗಾಗಿ ಉಪಯೋಗಿಸುವ ಪೆಟ್ರೋಲಿಯಂ ಗ್ಯಾಸ್ (ಎಲ್‌ಪಿಜಿ) ಸಿಲಿಂಡರ್‌ಗಳ ಬೆಲೆಯನ್ನು ಕಡಿತಗೊಳಿಸಿವೆ.
ವರದಿಗಳ ಪ್ರಕಾರ, ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಬಳಕೆಗಾಗಿ 19-ಕೆಜಿ ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು 91.50 ರೂಪಾಯಿಗಳಷ್ಟು ಕಡಿಮೆ ಮಾಡಿದೆ, ಇದು ಇಂದಿನಿಂದ ಅಂದರೆ, ಸೆಪ್ಟೆಂಬರ್ 1, 2022 ರಿಂದ ಜಾರಿಗೆ ಬರುತ್ತದೆ.
ಪ್ರಕಟಣೆಯ ಪ್ರಕಾರ, 19 ಕೆಜಿ ವಾಣಿಜ್ಯ ಇಂಧನ ಗ್ಯಾಸ್ ಸಿಲಿಂಡರ್ ನ ಬೆಲೆ 1885 ರೂ.ಗಳಾಗಿರುತ್ತದೆ, ಹಳೆಯ ಬೆಲೆ 1976 07 ರೂಪಾಯಿಗಳಾಗಿತ್ತು.
ಅದೇ ರೀತಿ, ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಕೋಲ್ಕತ್ತಾದಲ್ಲಿ ರೂ 2095.50 ರ ಬದಲಿಗೆ 1995.50 ರೂಪಾಯಿಗೆ, ರೂ 1936.50 ರ ಬದಲು 1844 ರೂಪಾಯಿಗೆ ಹಾಗು ಮುಂಬೈನಲ್ಲಿ, ಮತ್ತು ಚೆನ್ನೈನಲ್ಲಿ 2141 ರೂ ಬದಲಿಗೆ 2045 ರೂ. ಸಿಗಲಿದೆ.
19 ಕೆಜಿ ಸಿಲಿಂಡರ್‌ನ ಅತಿದೊಡ್ಡ ಬಳಕೆದಾರರ ವಿಭಾಗವಾಗಿರುವ ರೆಸ್ಟೋರೆಂಟ್‌ಗಳು, ತಿನಿಸುಗಳು ಮತ್ತು ಟೀ ಸ್ಟಾಲ್‌ಗಳಿಗೆ ಬೆಲೆಯಲ್ಲಿನ ಕಡಿತವು ಸ್ವಲ್ಪ ನಿರಾಳತೆಯನ್ನು ನೀಡುತ್ತದೆ.
ಆದರೆ, ಸದ್ಯಕ್ಕೆ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. OMC ಗಳು ತಿಂಗಳಿಗೆ ಎರಡು ಬಾರಿ LPG ಬೆಲೆ ಬದಲಾವಣೆಗಳನ್ನು ಘೋಷಿಸುತ್ತವೆ, ತಿಂಗಳ ಆರಂಭದಲ್ಲಿ ಒಮ್ಮೆ ಮತ್ತು ತಿಂಗಳ ಮಧ್ಯದಲ್ಲಿ ಒಮ್ಮೆ ಎಂದು ವರದಿ ತಿಳಿಸಿದೆ.