ರಾಜಸ್ಥಾನ: ಹಣದುಬ್ಬರದ ಸಂಕಷ್ಟದ ನಡುವೆ ರಾಜಸ್ಥಾನದ ಜನತೆಗೆ ಶುಭ ಸುದ್ದಿ ಸಿಗುವ ಮುನ್ಸೂಚನೆಯನ್ನು ರಾಜಸ್ಥಾನ ಸರಕಾರ ನೀಡಿದೆ.
ರಾಜಸ್ಥಾನದಲ್ಲಿ ಏಪ್ರಿಲ್ 1 ರಿಂದ ಎಲ್ ಪಿಜಿ ಸಿಲಿಂಡರ್ ಬೆಲೆ 500 ರೂಗೆ ಇಳಿಸುವುದಾಗಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಘೋಷಿಸಿದ್ದಾರೆ.
ರಾಜ್ಯದಲ್ಲಿ ಬೆಲೆ ಏರಿಕೆ ಸಮಸ್ಯೆ ಗಂಭೀರವಾಗಿದೆ. ಮುಂದಿನ ವರ್ಷ ಏಪ್ರಿಲ್ 1ರ ನಂತರ ಬಿಪಿಎಲ್ ಕುಟುಂಬಗಳಿಗೆ ತಲಾ 500 ರೂಪಾಯಿಯಂತೆ ವರ್ಷದಲ್ಲಿ 12 ಗ್ಯಾಸ್ ಸಿಲಿಂಡರ್ ನೀಡುತ್ತೇವೆ. ಸರ್ಕಾರದ ಕಲ್ಯಾಣ ಯೋಜನೆಗಳಿಂದ ಯಾರೂ ವಂಚಿತರಾಗಬಾರದು ಎಂದು ಹೇಳಿದ ಅವರು ಸದ್ಯ, ನಾನು ಒಂದೇ ಒಂದು ವಿಷಯ ಹೇಳಲು ಬಯಸುತ್ತೇನೆ, ಉಜ್ವಲಾ ಯೋಜನೆಯಡಿ ಪ್ರಧಾನಿ ನರೇಂದ್ರ ಮೋದಿ ಅವರು ಬಡವರಿಗೆ ಎಲ್ ಪಿಜಿ ಸಂಪರ್ಕ ಮತ್ತು ಗ್ಯಾಸ್ ಸ್ಟೌವ್ ಗಳನ್ನು ನೀಡುತ್ತಿದ್ದಾರೆ, ಸಿಲಿಂಡರ್ ಖಾಲಿಯಾದರೆ ಅದನ್ನು ಕೊಳ್ಳುವ ಪರಿಸ್ಥಿತಿ ಜನರಲ್ಲಿಲ್ಲ ಏಕೆಂದರೆ ಅದರ ಬೆಲೆ ಈಗ 1,040ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಸರಕಾರದ ವಿರುದ್ಧ ಕಿಡಿಕಾರಿದ್ದಾರೆ.
ಇದನ್ನೂ ಓದಿ: ವಿಡಿಯೋ… ಉದ್ಘಾಟನೆಗೂ ಮುನ್ನವೇ ಕುಸಿದು ಬಿತ್ತು 13 ಕೋ. ರೂ ವೆಚ್ಚದ ಸೇತುವೆ