Advertisement

2021ರಿಂದ ಅಡುಗೆ ಅನಿಲ ದರ ಪ್ರತಿ ವಾರ ಪರಿಷ್ಕರಣೆ?

07:36 PM Dec 24, 2020 | sudhir |

ನವದೆಹಲಿ: ಎಲ್‌ಪಿಜಿ ದರವನ್ನು ನಿಗದಿ ಮಾಡುವ ಇಂಡಿಯನ್‌ ಆಯಿಲ್‌ ಕಂಪನೀಸ್‌ (ಐಓಸಿ) 2021ರಿಂದ ಎಲ್‌ಪಿಜಿ ಸಿಲಿಂಡರುಗಳ ಬೆಲೆಯನ್ನು ವಾರಕ್ಕೊಮ್ಮೆ ಪರಿಷ್ಕರಿಸುವ ಕುರಿತು ಚಿಂತನೆ ನಡೆಸಿದೆ.

Advertisement

ಪ್ರಸಕ್ತ ತಿಂಗಳಿಗೊಮ್ಮೆ ಅನಿಲ ದರವನ್ನು ಪರಿಷ್ಕರಿಸಲಾಗುತ್ತದೆ. ಪ್ರಸಕ್ತ ತೈಲ ಮಾರುಕಟ್ಟೆ ಕಂಪನಿಗಳು ಪೆಟ್ರೋಲ್‌ ಮತ್ತು ಡೀಸೆಲ್‌ ದರವನ್ನು ಪ್ರತಿನಿತ್ಯ ಪರಿಷ್ಕರಿಸುತ್ತಿದ್ದು, ಪೆಟ್ರೋಲಿಯಂ ಉತ್ಪನ್ನಗಳಲ್ಲಿ ದಿನವೂ ಆಗುತ್ತಿರುವ ಈ ಬದಲಾವಣೆಗೆ ಹೊಂದಿಕೊಳ್ಳಲು ಎಲ್‌ಪಿಜಿ ಸಿಲೆಂಡರ್‌ಗಳ ಬೆಲೆಯನ್ನೂ 7 ದಿನಗಳಿಗೊಮ್ಮೆ ಬದಲಿಸಲು ಐಓಸಿ ಯೋಚಿಸುತ್ತಿದೆ ಎನ್ನಲಾಗಿದೆ.

ಒಂದೆಡೆ ಸಬ್ಸಿಡಿ ಹೊಂದಿರುವ ಎಲ್‌ಪಿಜಿಗಳ ಬೆಲೆ ಕಳೆದ ಆರು ತಿಂಗಳಿಂದ ಪರಿಷ್ಕರಣೆಯಾಗಿಲ್ಲವಾದರೂ, ಸಬ್ಸಿಡಿಯೇತರ ಎಲ್‌ಪಿಜಿಗಳ ದರ ಏರಿಕೆಯಾಗುತ್ತಲೇ ಇದೆ. ಇನ್ನೊಂದೆಡೆ ಕಮರ್ಷಿಯಲ್‌ ಎಲ್ ಪಿಜಿ ಸಿಲಿಂಡರುಗಳ ಬೆಲೆ ಮೆಟ್ರೋ ನಗರಿಗಳಲ್ಲಿ ಭಾರೀ ಏರಿಕೆ ಕಾಣುತ್ತಿದೆ.

ಅಡುಗೆ ಅನಿಲದ ಬೆಲೆ ಪ್ರತಿ ವಾರವೂ ಪರಿಷ್ಕರಣೆಯಾಗಬಹುದೆಂಬ ವರದಿಯ ಕುರಿತು ನೆಟ್ಟಿಗರು ಆಸಮಾಧಾನ ವ್ಯಕ್ತಪಡಿಸಲಾರಂಭಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next