ನಿರಂಜನ್‌ಕುಮಾರ್ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಈತ ಮಾಂಡವ್ಯ ಎಕ್ಸಲೆನ್ಸ್ ಕಾಲೇಜಿನ ವಿದ್ಯಾರ್ಥಿ ನಿಲಯದಲ್ಲಿದ್ದುಕೊಂಡು ದ್ವಿತೀಯ ಪಿಯು ವಿಜ್ಞಾನ ವಿಷಯ (ಪಿಸಿಎಂಬಿ)ದಲ್ಲಿ ವ್ಯಾಸಂಗ ಮಾಡುತ್ತಿದ್ದ. ಎಸ್ಸೆಸ್ಸೆಲ್ಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣನಾಗಿದ್ದ ನಿರಂಜನ್
ಕುಮಾರ್ ಓದಿನಲ್ಲಿ ಮುಂದಿದ್ದನು. ಪ್ರತಿ ತಿಂಗಳು ನಡೆಯುವ ಟೆಸ್ಟ್‌ಗಳಲ್ಲೂ ಹೆಚ್ಚು ಅಂಕ ಗಳಿಸುತ್ತಿದ್ದನು ಎನ್ನಲಾಗಿದೆ. ಆದರೆ, ಇತ್ತೀಚೆಗೆ ನಡೆದ ಟೆಸ್ಟ್‌ನಲ್ಲಿ ಗಣಿತ ವಿಷಯದಲ್ಲಿ ಈತನಿಗೆ ಕಡಿಮೆ ಅಂಕ ಬಂದಿತ್ತು. ಇದರಿಂದ ಮನನೊಂದು ಶಾಲಾ ಕೊಠಡಿಯ ಕಿಟಕಿಗೆ ಸೊಳ್ಳೆ ಪರದೆಯಿಂದ ನೇಣು
ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
Advertisement