Advertisement

90 ನಿಮಿಷ ಅವಧಿಯಲ್ಲಿ ಆಕ್ಸಿಜನ್‌ ಸಿಗದೇ 7 ಸಾವು

07:40 AM Jun 01, 2020 | Hari Prasad |

ಮುಂಬಯಿ: ಮುಂಬಯಿಯ ಜೋಗೇಶ್ವರಿ ಆಸ್ಪತ್ರೆಯಲ್ಲಿ 90 ನಿಮಿಷಗಳ ಅವಧಿಯಲ್ಲಿ ಆಕ್ಸಿಜನ್‌ ಕೊರತೆಯಿಂದ 7 ಕೋವಿಡ್ ಸೋಂಕಿತರು ಮೃತಪಟ್ಟಿದ್ದಾರೆ.

Advertisement

ಈ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಶನಿವಾರ ಇಬ್ಬರು ಎಂಬಿಬಿಎಸ್‌ ಪದವೀಧರರು, ಇಬ್ಬರು ನರ್ಸ್‌ಗಳು ಕರ್ತವ್ಯದಲ್ಲಿದ್ದರು. ಅನಾರೋಗ್ಯ ಕಾರಣ ಇಬ್ಬರು ಹಿರಿಯ ವೈದ್ಯರು ಗೈರಾಗಿದ್ದರು.

ಈ ವೇಳೆ ಸಮರ್ಪಕವಾಗಿ ಆಕ್ಸಿಜನ್‌ ಲಭಿಸದ ಕಾರಣ ರೋಗಿಗಳು ಪರದಾಡುತ್ತಿದ್ದರು. ಇದನ್ನು ಗಮನಿಸಿದ ನರ್ಸ್‌ಗಳು, ಬೇರೆ ವಾರ್ಡ್‌ನಲ್ಲಿದ್ದ ಹಿರಿಯ ವೈದ್ಯರನ್ನು ಸಂಪರ್ಕಿಸಿದ್ದಾರೆ.

ಕೂಡಲೇ ತಜ್ಞವೈದ್ಯರು, ತಾಂತ್ರಿಕ ಸಿಬಂದಿ ತುರ್ತು ಚಿಕಿತ್ಸಾ ಘಟಕಕ್ಕೆ ಧಾವಿಸಿ, ಆಕ್ಸಿಜನ್‌ ವ್ಯವಸ್ಥೆಯನ್ನು ಸರಿಪಡಿಸುವಷ್ಟರಲ್ಲಿ 7 ರೋಗಿಗಳು ಮೃತಪಟ್ಟಿದ್ದಾರೆ.

ಈ ಆಸ್ಪತ್ರೆಯಲ್ಲಿ ಕಳೆದ 2 ವಾರಗಳ ಅವಧಿಯಲ್ಲಿ ಸುಮಾರು 20 ಸೋಂಕಿತರು ಸಾವನ್ನಪ್ಪಿದ್ದಾರೆ. ಆಸ್ಪತ್ರೆಯ ಅಸಮರ್ಪಕ ವೈದ್ಯಕೀಯ ವ್ಯವಸ್ಥೆ ಕುರಿತು ತನಿಖೆ ನಡೆಸಲಾಗುತ್ತಿದೆ.

Advertisement

ಚೇತರಿಕೆ ಪ್ರಮಾಣ ವೃದ್ಧಿ: ಮಹಾರಾಷ್ಟ್ರದಲ್ಲಿ ಹೊಸ ಡಿಸ್ಚಾರ್ಜ್‌ ನೀತಿಯಿಂದ ರೋಗಿಗಳ ಚೇತರಿಕೆ ಪ್ರಮಾಣ ಏರಿಕೆಯಾಗಿದೆ. ಶೇ.50ರಷ್ಟು ಮಂದಿ ಡಿಸ್ಚಾರ್ಜ್‌ ಆಗಿದ್ದಾರೆ.

ರಾಜ್ಯದಲ್ಲಿ ಸೋಂಕಿತರ ಪೈಕಿ ಶೇ.83ರಷ್ಟು ಮಂದಿ ರೋಗ ಲಕ್ಷಣ ಇಲ್ಲದವರಾಗಿದ್ದಾರೆ. ಶೇ.16ರಷ್ಟು ಮಂದಿಗೆ ಸೌಮ್ಯ ಸೋಂಕಿನ ಲಕ್ಷಣಗಳು ಕಂಡುಬಂದಿವೆ. ಶೇ.1.5ರಷ್ಟು ರೋಗಿಗಳು ಮಾತ್ರ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next