Advertisement

ಉತ್ತರ ತ್ರಿಪುರದಲ್ಲಿ ಲಘು ಭೂಕಂಪನ; ನಾಶ-ನಷ್ಟ, ಜೀವ ಹಾನಿ ಇಲ್ಲ

05:36 PM Feb 25, 2017 | Team Udayavani |

ಅಗರ್ತಲಾ : ತ್ರಿಪುರದಲ್ಲಿ ಇಂದು ಮಧ್ಯಾಹ್ನ ಲಘು ಭೂಕಂಪ ಸಂಭವಿಸಿದ್ದು ರಿಕ್ಟರ್‌ ಮಾಪಕದಲ್ಲಿ ಇದರ ತೀವ್ರತೆಯು 4.0 ಅಂಕಗಳಲ್ಲಿ ದಾಖಲಾಗಿದೆ.

Advertisement

ಉತ್ತರ ತ್ರಿಪುರ ಜಿಲ್ಲೆಯಲ್ಲಿ ಇಂದುಮಧ್ಯಾಹ್ನ 12.32ರ ಸುಮಾರಿಗೆ ಲಘು ಭೂಕಂಪನ ಸಂಭವಿಸಿದ್ದು ಸುಮಾರು ಆರರಿಂದ ಏಳು ಸೆಕೆಂಡುಗಳ ಕಾಲ ಭೂಮಿ ಕಂಪಿಸಿದೆ ಎಂದು ಅಗರ್ತಲಾದಲ್ಲಿನ ಹವಾಮಾನ ಇಲಾಖೆಯ ನಿರ್ದೇಶಕ ದಿಲೀಪ್‌ ಸಾಹಾ ತಿಳಿಸಿದ್ದಾರೆ.

ಭೂಕಂಪನವು ಲಘುವಾಗಿದ್ದುದರಿಂದ ಉ¤ರ ತ್ರಿಪುರ ಜಿಲ್ಲೆಯಲ್ಲಿ  ಯಾವುದೇ ನಾಶ ನಷ್ಟ, ಜೀವ ಹಾನಿ ಉಂಟಾಗಿಲ್ಲ ಎಂದು ತ್ರಿಪುರದ ಪ್ರಾಕೃತಿಕ ವಿಕೋಪ ನಿರ್ವಹಣಾ ಕೇಂದ್ರದ ಪ್ರಭಾರಾಧಿಕಾರಿ ಯಾಗಿರುವ ಸರಳ್‌ ದಾಸ್‌ ತಿಳಿಸಿದ್ದಾರೆ. 

ದೇಶದ ಈಶಾನ್ಯ ಭಾಗವು ಭೂಕಂಪಗ್ರಸ್ತ ವಲಯವಾಗಿರುವುದರಿಂದ ಇಲ್ಲಿ ಆಗೀಗ ಎಂಬಂತೆ ಭೂಕಂಪನ ಅಥವಾ ಭೂಕಂಪಗಳು ಸಂಭವಿಸುವುದು ಸಾಮಾನ್ಯವಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next