Advertisement

ಕೋವಿಡ್ ನಿಂದ ದೇಗುಲಗಳಿಗೂ ಆರ್ಥಿಕ ಸಂಕಷ್ಟ: ಶ್ರೀಮಂತ ದೇವಸ್ಥಾನ ಕುಕ್ಕೆಯಲ್ಲೂ ಕಡಿಮೆ ಆದಾಯ

09:28 PM Dec 20, 2020 | mahesh |

ಬೆಂಗಳೂರು: ವಿಶ್ವವನ್ನೇ ಆರ್ಥಿಕ ಸಂಕಷ್ಟಕ್ಕೆ ತಳ್ಳಿರುವ ಕೋವಿಡ್ ದೇವಾಲಯಗಳನ್ನೂ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿದೆ. ರಾಜ್ಯದ ಶ್ರೀಮಂತ ದೇವಸ್ಥಾನಗಳೂ ಕೋಟ್ಯಂತರ ರೂಪಾಯಿ ಆದಾಯ ಕೊರತೆ ಎದುರಿಸುವಂತಾಗಿದೆ.

Advertisement

ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿ 34,556 ದೇವಸ್ಥಾನಗಳಿದ್ದು, ವಾರ್ಷಿಕ 25 ಲಕ್ಷ ರೂ.ಗಿಂತ ಹೆಚ್ಚು ಆದಾಯ ತರುವವುಗಳನ್ನು ಎ ಗ್ರೇಡ್‌ ಎಂದು ಗುರುತಿಸಲಾಗಿದೆ. ಈ ಬಾರಿ ಇವುಗಳಿಗೂ ಆದಾಯ ಖೋತಾ ಆಗಿದ್ದು, ಶೇ.25ರಷ್ಟು ಮಾತ್ರ ಸಂಗ್ರಹವಾಗಿದೆ.

ಮಾರ್ಚ್‌ ಕೊನೆಯ ವಾರದಲ್ಲಿ ಕೊರೊನಾ ಆರಂಭವಾದ ಬಳಿಕ ಬಾಗಿಲು ಮುಚ್ಚಿದ್ದ ದೇವಸ್ಥಾನಗಳನ್ನು ಆಗಸ್ಟ್‌ನಲ್ಲಿ ತೆರೆಯಲಾಗಿತ್ತು. ಕೊರೊನಾ ಹಾವಳಿ ಪೂರ್ತಿ ಕಡಿಮೆಯಾಗದ್ದರಿಂದ ಭಕ್ತರು ವಾಡಿಕೆಯ ಪ್ರಮಾಣದಲ್ಲಿ ಭೇಟಿ ನೀಡುತ್ತಿಲ್ಲ. ಇದರಿಂದ ಪ್ರಮುಖ ದೇವಸ್ಥಾನಗಳ ಆದಾಯದ ಮೇಲೆ ಹೊಡೆತ ಬಿದ್ದಿದೆ.

ಪ್ರತೀ ವರ್ಷ ಕೋಟ್ಯಂತರ ರೂ. ಆದಾಯ ಗಳಿಸುತ್ತಿದ್ದ ರಾಜ್ಯದ ಪ್ರಮುಖ 20 ದೇಗುಲಗಳ ಆದಾಯದಲ್ಲಿ ಭಾರೀ ಇಳಿಕೆಯಾಗಿದ್ದು, ಬಿ ಮತ್ತು ಸಿ ದರ್ಜೆಯ ದೇವಾಲಯಗಳ ನಿರ್ವಹಣೆಗೆ ಹಣ ಒದಗಿಸುವುದು ಇಲಾಖೆಗೆ ಕಷ್ಟವಾಗಿದೆ ಎಂದು ತಿಳಿದು ಬಂದಿದೆ. ವಾರ್ಷಿಕ 100 ಕೋ.ರೂ.ಗಿಂತ ಅಧಿಕ ಆದಾಯ ಸಂಗ್ರಹವಾಗುತ್ತಿದ್ದ ಕುಕ್ಕೆ ಸುಬ್ರಹ್ಮಣ್ಯ ದೇಗುಲ ಈ ಬಾರಿ ಇದುವರೆಗೆ ಕೇವಲ 4.28 ಕೋ.ರೂ. ಆದಾಯ ಗಳಿಸಿದೆ.

ಎಲ್ಲಿ ಎಷ್ಟು ಆದಾಯ ಸಂಗ್ರಹ?
ದೇವಾಲಯ                                 ನಿರೀಕ್ಷೆ(ರೂ.ಈ ಬಾರಿ (ರೂ.)
1. ಕುಕ್ಕೆ ಸುಬ್ರಹ್ಮಣ್ಯ                            100 ಕೋ. 4.28 ಕೋ.
2. ಕೊಲ್ಲೂರು ಮೂಕಾಂಬಿಕಾ               50 ಕೋ. 4. 51 ಕೋ.
3. ಮೈಸೂರು ಚಾಮುಂಡೇಶ್ವರಿ            35 ಕೋ. 74.05 ಲ.
4. ಕಟೀಲು ದುರ್ಗಾಪರಮೇಶ್ವರಿ           25 ಕೋ. 1.05 ಕೋ.
5. ನಂಜನಗೂಡಿನ ಶ್ರೀಕಂಠೇಶ್ವರ        20 ಕೋ. 12.06 ಲಕ್ಷ
6. ಸವದತ್ತಿಯ ರೇಣುಕಾ ಎಲ್ಲಮ್ಮ        16 ಕೋ. 1.64 ಕೋ.
7. ಮಂದಾರ್ತಿ ದುರ್ಗಾಪರಮೇಶ್ವರಿ       11.43 ಕೋ. 1.02 ಕೋ.

Advertisement

ಲಾಕ್‌ಡೌನ್‌ನಿಂದ ಬಾಗಿಲು ಮುಚ್ಚಿದ್ದ ದೇವಸ್ಥಾನಗಳು ಈಗ ಬಾಗಿಲು ತೆರೆದಿದ್ದರೂ ಶೇ. 40ರಷ್ಟು ಭಕ್ತರು ಮಾತ್ರ ಬರುತ್ತಿದ್ದಾರೆ. ಈ ವರ್ಷ ವಾಡಿಕೆಗಿಂತ ಶೇ. 40ರಷ್ಟು ಆದಾಯ ಕಡಿಮೆಯಾಗುವ ಸಾಧ್ಯತೆ ಇದೆ.
ಕೋಟ ಶ್ರೀನಿವಾಸ ಪೂಜಾರಿ, ಮುಜರಾಯಿ ಸಚಿವರು.

Advertisement

Udayavani is now on Telegram. Click here to join our channel and stay updated with the latest news.

Next