Advertisement
ದಾಖಲಾತಿ ಹೆಚ್ಚಿಸಲು ಸರಕಾರಿ ಪದವಿ ಕಾಲೇಜುಗಳಿಗೆ ಯಾವುದೇ ಸಮಸ್ಯೆ ಇಲ್ಲದಿದ್ದರೂ ಖಾಸಗಿ ಕಾಲೇಜುಗಳಿಗೆ ಸೀಟು ಹೆಚ್ಚಿಸಿಕೊಂಡರೂ ವಿ.ವಿ.ಯ ಕೆಲವು ಸೌಲಭ್ಯಗಳ ಕೊರತೆ ಸಮಸ್ಯೆಯಾಗಲಿದೆ. ಇನ್ನೊಂದೆಡೆ ಇದುವರೆಗೆ ದಾಖಲಾತಿ ಕಡಿಮೆ ಇರುವ ಪದವಿ ಕಾಲೇಜುಗಳಿಗೂ ಮರು ಜೀವ ಸಿಕ್ಕಂತಾಗುತ್ತದೆ. ಎಸೆಸೆಲ್ಸಿಯಲ್ಲಿಯೂ ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಪದವಿಪೂರ್ವ ಕಾಲೇಜಿನ ದಾಖಲಾತಿಗೆ ಯಾವುದೇ ಸಮಸ್ಯೆ ಇಲ್ಲವಾಗಿದೆ.
Related Articles
Advertisement
ಕೋರ್ಸ್‌ಗಳಿಗೂ ಹೆಚ್ಚಿದ ಬೇಡಿಕೆ :
ಈ ವರ್ಷ ಕೆಲವು ಕೋರ್ಸ್ ಗಳಿಗೆ ಭಾರೀ ಬೇಡಿಕೆ ಸೃಷ್ಟಿಯಾಗಿದೆ. ಆದರೆ ಕಾಲೇಜುಗಳ ಲಭ್ಯವಿರುವ ಮೂಲಸೌಕರ್ಯ ಹಾಗೂ ಬೋಧನ ಸಿಬಂದಿಗೆ ಅನುಗುಣವಾಗಿ ನಿರ್ದಿಷ್ಟ ಸಂಖ್ಯೆಯ ಸೀಟುಗಳನ್ನು ಮಾತ್ರ ಭರ್ತಿ ಮಾಡಿಕೊಳ್ಳಬೇಕಾಗಿರುವುದರಿಂದ, ಎಲ್ಲರಿಗೂ ಇಷ್ಟಪಟ್ಟ ಕೋರ್ಸ್ ಗಳಿಗೆ ಪ್ರವೇಶ ಸಿಗುವುದು ಕಷ್ಟ. ಇತ್ತೀಚಿನ ದಿನಗಳಲ್ಲಿ ಕೋರ್ಸ್ ಗಳತ್ತ ಹೆಚ್ಚಿನ ವಿದ್ಯಾರ್ಥಿಗಳು ಆಕರ್ಷಿತರಾಗುತ್ತಿರುವುದರಿಂದಲೂ ಪದವಿ ತರಗತಿಗಳಿಗೆ ದಾಖಲಾತಿ ಹೆಚ್ಚ ಳ ವಾಗಲು ಕಾರಣವಾಗುತ್ತಿದೆ.
ಶೇ.15ರಿಂದ 20ರಷ್ಟು ದಾಖಲಾತಿ ಹೆಚ್ಚಳ :
ಉಡುಪಿ ಹಾಗೂ ದ.ಕ. ಜಿಲ್ಲೆಗಳು ಪ್ರತೀ ವರ್ಷ ಪಿಯುಸಿ ಫಲಿತಾಂಶದಲ್ಲಿ ಮುಂಚೂಣಿಯಲ್ಲಿರುತ್ತವೆ. ಸಾಮಾನ್ಯವಾಗಿ ಶೇ. 80ರಿಂದ 85ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗುವುದರಿಂದ ಈ ವರ್ಷ ಪದವಿ ಕಾಲೇಜುಗಳಲ್ಲಿ ಶೇ. 15ರಿಂದ 20ರಷ್ಟು ದಾಖಲಾತಿ ಹೆಚ್ಚಾಗಬಹುದು. ಹೆಚ್ಚುವರಿಯಾಗಿರುವ ಶೇ. 15ರಿಂದ 20ರಷ್ಟು ವಿದ್ಯಾರ್ಥಿಗಳಲ್ಲಿ ಮೆಡಿಕಲ್, ಎಂಜಿನಿಯ ರಿಂಗ್, ಪಾಲಿಟಿಕ್ನಿಕ್ ಸೇರುವವರೂ ಇದ್ದಾರೆ.
ಬ್ಯಾಚ್ ಸಂಖ್ಯೆ ಹೆಚ್ಚಳ ಸಾಧ್ಯತೆ : ಪ್ರತೀ ವರ್ಷ ಜಿಲ್ಲೆಯ ಸರಕಾರಿ ಪದವಿ ಕಾಲೇಜುಗಳಲ್ಲಿ ವಾಣಿಜ್ಯ ಹೊರತುಪಡಿಸಿ ಕಲಾ ಹಾಗೂ ವಿಜ್ಞಾನ ಕೋರ್ಸ್‌ಗಳ ಸೀಟುಗಳು ಉಳಿಯುತ್ತಿತ್ತು. ಈ ವರ್ಷ ಎಲ್ಲ ಸೀಟುಗಳು ಭರ್ತಿಯಾಗಬಹುದು ಎಂಬ ನಿರೀಕ್ಷೆಗಳಿವೆ. ಸಹಜವಾಗಿ ಬಿಸಿಎ ಹಾಗೂ ಬಿಕಾಂಗೆ ಹೆಚ್ಚು ಬೇಡಿಕೆಯಿದ್ದು, ಈ ವರ್ಷ ವಾಣಿಜ್ಯ ಕೋರ್ಸ್‌ಗೆ ಬ್ಯಾಚ್ ಸಂಖ್ಯೆ ಹೆಚ್ಚಿಸುವ ಸಾಧ್ಯತೆಗಳೂ ಹೆಚ್ಚಿವೆ.
ದ್ವಿತೀಯ ಪಿಯುಸಿಗೆ ದಾಖಲಾತಿ ಆರಂಭಗೊಂಡಿದೆ. ಎಲ್ಲ ಬ್ಯಾಚ್‌ಗಳಲ್ಲಿಯೂ ಶೇ.80 ರಷ್ಟು ದಾಖಲಾತಿಗೆ ಅವಕಾಶ ಕಲ್ಪಿಸಲಾಗಿದೆ. ಎಸೆಸೆಲ್ಸಿಯಲ್ಲಿ ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣರಾಗಿರುವುದರಿಂದ ದಾಖಲಾತಿ ಹೆಚ್ಚಳವಾಗಿದೆ. ಸರಕಾರಿ ಸಹಿತ ಖಾಸಗಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಬೇಕಿರುವ ಎಲ್ಲ ರೀತಿಯ ಮೂಲಸೌಕರ್ಯಗಳು ಲಭ್ಯವಿವೆ.-ಮಾರುತಿ, ಡಿಡಿಪಿಯು, ಉಡುಪಿ
ಪದವಿ ಕಾಲೇಜುಗಳಲ್ಲಿ ಲಭ್ಯವಿರುವ ಸೀಟುಗಳು ಭರ್ತಿಯಾಗಬಹುದು. ಸೀಟು ಸಿಗಲಾರದ ಸಮಸ್ಯೆ ಉದ್ಭವವಾಗುವ ಸಾಧ್ಯತೆಗಳು ಕಡಿಮೆ. -ಡಾ| ಗಣನಾಥ ಎಕ್ಕಾರು, ಜಿಲ್ಲೆಯ ಲೀಡ್ (ತೆಂಕನಿಡಿಯೂರು ಸರಕಾರಿ ಪದವಿ ಕಾಲೇಜು) ಕಾಲೇಜು ಪ್ರಾಂಶುಪಾಲ