Advertisement

ಸದ್ದು ಮಾಡುತ್ತಿದೆ ‘ಪ್ರೇಮಂ ಪೂಜ್ಯಂ’ ಲವ್ಲಿ ಟೀಸರ್‌

09:28 AM Feb 16, 2021 | Team Udayavani |

ನೆನಪಿರಲಿ ಪ್ರೇಮ್‌ ಅಭಿನಯದ “ಪ್ರೇಮ ಪೂಜ್ಯಂ’ ಚಿತ್ರದ ಮೊದಲ ಟೀಸರ್‌ “ವ್ಯಾಲೆಂಟೈನ್ಸ್‌ ಡೇ’ ಪ್ರಯುಕ್ತ ಬಿಡುಗಡೆಯಾಗಿದೆ. “ಲೈಫ್ ಜೊತೆ ಒನ್‌ ಸೆಲ್ಫಿ’ ಚಿತ್ರದ ನಂತರ ಪ್ರೇಮ್‌ ಅಭಿನಯಿಸುತ್ತಿರುವ ಚಿತ್ರ ಇದಾಗಿದ್ದು, “ಪ್ರೇಮ ಪೂಜ್ಯಂ’ ಪ್ರೇಮ್‌ ಸಿನಿಮಾ ಕೆರಿಯರ್‌ನ 25ನೇ ಚಿತ್ರವಾಗಿದೆ. ಇನ್ನು “ಪ್ರೇಮಂ ಪೂಜ್ಯಂ’ ಟೀಸರ್‌ನಲ್ಲಿ ನಟ ಪ್ರೇಮ್‌ ಅವರ ಲುಕ್‌ ನೋಡುಗರ ಗಮನ ಸೆಳೆಯುತ್ತಿದೆ.

Advertisement

ಚಿತ್ರದ ಹೊಸ ಲುಕ್‌ನಲ್ಲಿ ಪ್ರೇಮ್‌ ಸಖತ್‌ ಯಂಗ್‌ ಆ್ಯಂಡ್‌ ಎನರ್ಜಿಟಿಕ್‌ ಆಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಪ್ರೇಮ್‌ ಅವರಿಗೆ ಬರೋಬ್ಬರಿ ಒಂಭತ್ತು ಡಿಫ‌ರೆಂಟ್‌ ಲುಕ್‌ ಇದೆಯಂತೆ! “ಪ್ರೇಮ ಪೂಜ್ಯಂ’ ಚಿತ್ರದ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿರುವ ನಟ ಪ್ರೇಮ್‌, ಈಗಿನ ಸಿನಿಪ್ರಿಯರಿಗೆ ಚಿತ್ರ ಖಂಡಿತಾ ಇಷ್ಟವಾಗುತ್ತದೆ ಎಂಬ ಭರವಸೆಯ ಮಾತುಗಳನ್ನಾಡುತ್ತಾರೆ.

ಇದನ್ನೂ ಓದಿ:ಇಂದು ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಬರ್ತ್‌ಡೇ

ಚಿತ್ರದ ಹೆಸರೇ ಹೇಳುವಂತೆ, “ಪ್ರೇಮಂ ಪೂಜ್ಯಂ’ ರೊಮ್ಯಾಂಟಿಕ್‌ ಲವ್‌ ಸ್ಟೋರಿ ಹೊಂದಿರುವ ಚಿತ್ರ. ಚಿತ್ರದಲ್ಲಿ ಪ್ರೀತಿಯ ಆರಾಧಕನಾಗಿ ಲವ್ಲೀ ಸ್ಟಾರ್‌ ಪ್ರೇಮ್‌ ಕಾಣಿಸಿಕೊಂಡರೆ, ನವ ನಾಯಕಿಯಾಗಿ ಬೃಂದಾ ಆಚಾರ್ಯ ಅಭಿನಯಿಸಿದ್ದಾರೆ.

ವೃತ್ತಿಯಲ್ಲಿ ವೈದ್ಯರಾಗಿರುವ ಡಾ. ರಾಘವೇಂದ್ರ ಬಿ.ಎಸ್ “ಪ್ರೇಮಂ ಪೂಜ್ಯಂ’ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಸ್ಯಾಂಡಲ್‌ವುಡ್‌ ಅಂಗಳಕ್ಕೆ ನಿರ್ದೇಶಕನಾಗಿ ಪರಿಚಯವಾಗುತ್ತಿದ್ದಾರೆ. “ಕೆಡಂಬಾಡಿ ಕ್ರಿಯೇಷನ್ಸ್‌’ ಬ್ಯಾನರ್‌ ಅಡಿಯಲ್ಲಿ ನಿರ್ಮಾಣವಾಗಿರುವ “ಪ್ರೇಮ ಪೂಜ್ಯಂ’ ಚಿತ್ರಕ್ಕೆ ಡಾ. ರಕ್ಷಿತ್‌ ಕೆಡಂಬಾಡಿ, ಡಾ. ರಾಜಕುಮಾರ್‌ ಜಾನಕಿರಾಮನ್‌, ಮನೋಜ್‌ ಕೃಷ್ಣನ್‌ ಬಂಡವಾಳ ಹೂಡಿದ್ದಾರೆ. ಚಿತ್ರಕ್ಕೆ ಮಾಧವ್‌ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ನವೀನ್‌ ಕುಮಾರ್‌ ಛಾಯಾಗ್ರಹಣ, ಹರೀಶ್‌ ಕೊಮ್ಮೆ ಸಂಕಲನವಿದೆ.

Advertisement

“ಪ್ರೇಮ ಪೂಜ್ಯಂ’ ಚಿತ್ರದಲ್ಲಿ ಪ್ರೇಮ್‌, ಬೃಂದಾ ಆಚಾರ್ಯ ಅವರೊಂದಿಗೆ ಐಂದ್ರಿತಾ ರೇ, ಮಾಸ್ಟರ್‌ ಆನಂದ್‌, ಸಾಧುಕೋಕಿಲ, ಅವಿನಾಶ್‌, ಮಾಳವಿಕಾ, ಅನು ಪ್ರಭಾಕರ್‌ ಹೀಗೆ ಅನೇಕ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಇದನ್ನೂ ಓದಿ: Curly Hair ಬ್ಯೂಟಿ ಮಲಯಾಳಂ ನಟಿ ನೂರಿನ್ ಶರೀಫ್ ಕ್ಯೂಟ್ ಲುಕ್ಸ್

ಸದ್ಯ “ಪ್ರೇಮಿಗಳ ದಿನ’ದಂದು ಹೊರಬಂದು ಸಿನಿ ಪ್ರೇಮಿಗಳ ಗಮನ ಸೆಳೆಯುತ್ತಿರುವ “ಪ್ರೇಮಂ ಪೂಜ್ಯಂ’ ಟೀಸರ್‌ಗೆ ಸೋಶಿಯಲ್‌ ಮೀಡಿಯಾಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಟೀಸರ್‌ ಬಿಡುಗಡೆಯಾದ ಕೇವಲ ಮೂರೇ ದಿನದಲ್ಲಿ ಹತ್ತು ಲಕ್ಷಕ್ಕೂ ಅಧಿಕ ವೀವ್ಸ್‌ ಪಡೆದುಕೊಂಡಿದೆ. ಒಟ್ಟಾರೆ ಟೀಸರ್‌ ಬಿಡುಗಡೆಯ ಮೂಲಕ ನಿಧಾನವಾಗಿ “ಪ್ರೇಮಂ ಪೂಜ್ಯಂ’ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇದೇ ವರ್ಷದ ಮಧ್ಯ ಭಾಗದಲ್ಲಿ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next