ಬೆಂಗಳೂರು: ಪ್ರೇಮಿಗಳ ದಿಚಾರಣೆಯಂದು ಪ್ರೇಮಿಗಳು ಪರಸ್ಪರ ಗಿಫ್ಟ್ ಕೊಡುವುದು ಸಾಮಾನ್ಯ.ಅದು ದುಬಾರಿಯಾಗಿರಲಿ,ಅಗ್ಗದ ವಸ್ತುವಾಗಿರಲಿ ಅಲ್ಲಿ ಪ್ರೀತಿಯ ಕಾಣಿಕೆ ನೀಡಬೇಕಾದದ್ದು ಮಹತ್ವ. ಆದರೆ ಇಲ್ಲೊಬ್ಬ ನಯವಂಚಕ ವಿಕೃತ ಪ್ರಿಯಕರನೊಬ್ಬ ಪ್ರೇಯಸಿಗೆ ಒಳ ಉಡುಪನ್ನು ಗಿಫ್ಟ್ ನೀಡಿ ಬ್ಲ್ಯಾಕ್ ಮೇಲ್ ಮಾಡಿ ಪವಿತ್ರ ಪ್ರೇಮಕ್ಕೆ ಕಳಂಕ ತಂದಿಡುವ ಕೆಲಸ ಮಾಡಿದ್ದಾನೆ.
ನಡೆದಿದ್ದೇನು?
ಕಲ್ಯಾಣನಗರದಲ್ಲಿ ಆಟೋ ಚಾಲಕನಾಗಿರುವ ಗುರುಪ್ರಸಾದ್ ಜೋಶಿ ಎಂಬಾತ ತನ್ನ ಪ್ರೇಯಸಿಗೆ ಪ್ರೇಮಿಗಳ ದಿನಚಾರಣೆಯ ಗಿಫ್ಟ್ ಆಗಿ ಒಳ ಉಡುಪುಗಳನ್ನು ನೀಡಿದ್ದಾನೆ. ಬಳಿಕ ಅವುಗಳನ್ನು ಧರಿಸಿ ವಿಡಿಯೋ ಕಳುಹಿಸುವಂತೆ ಹೇಳಿದ್ದಾನೆ. ಭಾವಿ ಪತಿ ಎಂಬ ಅಮಿತ ವಿಶ್ವಾಸದಲ್ಲಿ ಅಂತೆಯೇ ಮಾಡಿದ ಪ್ರೇಯಸಿ ಇದೀಗ ಆತನ ನಿಜ ಬಣ್ಣವನ್ನು ಕಂಡುಕೊಂಡಿದ್ದಾಳೆ.
ಇಬ್ಬರೂ 3 ವರ್ಷಗಳಿಂದ ಪ್ರೀತಿಸುತ್ತಿದ್ದು, ಗುರುಪ್ರಸಾದ್ ವಿಡಿಯೋವನ್ನು ಬಂಡವಾಳವನ್ನಾಗಿಸಿಕೊಂಡು ಯುವತಿಯ ತಂದೆಗೆ ಕರೆ ಮಾಡಿ 15 ಲಕ್ಷ ರೂಪಾಯಿ ನೀಡುವಂತೆ ಬ್ಲ್ಯಾಕ್‌ಮೇಲ್ ಮಾಡಿದ್ದಾನೆ. ಹಣ ನೀಡದೇ ಹೋದರೆ ಸಾಮಾಜಿಕ ತಾಣಗಳಲ್ಲಿ ಹಾಕುವುದಾಗಿ ಬೆದರಿಸಿದ್ದಾನೆ.
ಇದೀಗ ಯುವತಿಯ ಪೋಷಕರು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದು,ಆರೋಪಿ ಜೋಶಿ ಪರಾರಿಯಾಗಿದ್ದಾನೆ.