ಬೆಂಗಳೂರು: ಐಷಾರಾಮಿ ಜೀವನಕ್ಕಾಗಿ ಕಾಲೇಜು ವಿದ್ಯಾರ್ಥಿಗಳನ್ನು ಡ್ರಗ್ಸ್ ದಂಧೆಯಲ್ಲಿ ತೊಡಗಿಸುತ್ತಿದ್ದ ಕೇರಳ ಪ್ರೇಮಿಗಳನ್ನು ಹುಳಿಮಾವು ಪೊಲೀಸರು ಬಂಧಿಸಿದ್ದಾರೆ.
ಕೆಲ ದಿನಗಳ ಹಿಂದೆ ಕೇರಳ ಮೂಲದ ಸಿಗಿಲ್ ವರ್ಗೀಸ್ ಮತ್ತು ವಿಷ್ಣುಪ್ರಿಯಾ ಎಂಬವರನ್ನು ಬಂಧಿಸಲಾಗಿದೆ.
ಆರೋಪಿಗಳಿಂದ 8 ಕೋಟಿ ರೂ. ಮೌಲ್ಯದ ಹ್ಯಾಶಿಸ್ ಆಯಿಲ್, ಗಾಂಜಾ ವಶಕ್ಕೆ ಪಡೆಯಲಾಗಿದೆ. ವಿಷ್ಣುಪ್ರಿಯಾ ಕೇರಳದಿಂದ ಕೊಯಮತ್ತೂರಿಗೆ ಸ್ಥಳಾಂತರಗೊಂಡಿದ್ದರು. ಹೀಗಾಗಿ ವಿದ್ಯಾಭ್ಯಾಸವನ್ನು ಕೊಯಮತ್ತೂರಿನಲ್ಲಿ ನಡೆಸಿದ್ದಳು.
ಇನ್ನು ಪಿಯುಸಿ ಮುಗಿದ ಬಳಿಕ ಸಿಗಿಲ್ ಕೂಡ ಕೊಯಮತ್ತೂರಿಗೆ ಹೋಗಿದ್ದ. ಈ ವೇಳೆ ಇಬ್ಬರೂ ಪರಸ್ಪರ ಭೇಟಿಯಾಗಿದ್ದು, ಆತ್ಮೀಯತೆ ಹೆಚ್ಚಾಗಿ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ.
ನಂತರ ಇಬ್ಬರು ಕಾಲೇಜು ದಿನಗಳಿಂದಲೇ ಡ್ರಗ್ಸ್ ವ್ಯಸನಿಗಳಾಗಿದ್ದು, ಆಗಲೇ ಐಷಾರಾಮಿ ಜೀವನಕ್ಕಾಗಿ ಡ್ರಗ್ಸ್ ಪೆಡ್ಲರ್‌ಗಳಾಗಿ ಕೆಲಸ ಮಾಡುತ್ತಿದ್ದರು. ಮೂರು ತಿಂಗಳ ಹಿಂದೆ ಬೆಂಗಳೂರಿಗೆ ಸ್ಥಳಾಂತರಗೊಂಡಿದ್ದರು. ಈ ವೇಳೆ ಸಿಗಿಲ್ ಕೇರಳದಿಂದ ಬರುವ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಕೆಲ ಕಾಲೇಜುಗಳಲ್ಲಿ ಸೀಟುಗಳನ್ನು ಕೊಡಿಸುತ್ತಿದ್ದ. ವಿಷ್ಣುಪ್ರಿಯಾ ಟ್ಯಾಟು ಆರ್ಟಿಸ್ಟ್ ಆಗಿದ್ದಳು. ಹೀಗಾಗಿ ಕಾಲೇಜಿಗೆ ಸೇರುವ ವಿದ್ಯಾರ್ಥಿಗಳ ಜತೆ ಸಂಪರ್ಕ ಹೊಂದಿದ್ದು, ಅವರನ್ನು ಡ್ರಗ್ಸ್ ವ್ಯಸನಿಗಳನ್ನಾಗಿ ಮಾಡುತ್ತಿದ್ದರು ಎಂದರು.
ಇಬ್ಬರು ಪ್ರೇಮಿಗಳು ಮನೆಯಲ್ಲೇ ಡ್ರಗ್ಸ್ ನಶೆ ಏರಿಸಿಕೊಳ್ಳುತ್ತಿದ್ದರು. ಈ ವೇಳೆ ಮನೆಯಲ್ಲಲೈಟ್‌ಗಳನ್ನು ಆಫ್ ಮಾಡಿ, ಕಲರ್‌ಲೈಟ್‌ಗಳನ್ನುಹಾಕಿಕೊಂಡು ಇನ್ನಷ್ಟು ಡ್ರಗ್ಸ್ ಸೇವಿಸುತ್ತಿದ್ದರುಎಂದು ಆರೋಪಿಗಳು ವಿಚಾರಣೆ ವೇಳೆ ತಿಳಸಿದ್ದಾರೆಂದು ಪೊಲೀಸರು ಹೇಳಿದರು.