Advertisement
ಇದು ಹೊಸಬರೇ ಸೇರಿ ಮಾಡಿರುವ ಚಿತ್ರ. ಹಾಗಾಗಿ ಚಿಟಿಕೆಯಷ್ಟು ಹೊಸತನ ನಿರೀಕ್ಷಿಸಬಹುದು. ಬೊಗಸೆಯಷ್ಟು ಪ್ರೀತಿಯ ಅನುಭವ ಪಡೆಯಬಹುದು. ಮನಸ್ಸು ಹಿಡಿಯುವಷ್ಟು ಕನ್ನಡತನ ಸವಿಯಬಹುದು. ಒಟ್ಟಾರೆ, ಒಂದು ಫ್ರೆಶ್ ಎನಿಸುವ ಕಥೆ ಜೊತೆ ಸಣ್ಣದ್ದೊಂದು ಖುಷಿಯೊಂದಿಗೆ ಕನ್ನಡದ ತೇರಲ್ಲಿ ಪಯಣಿಸಬಹುದು. ಇಷ್ಟು ಹೇಳಿದ ಮೇಲೆ ಇದೊಂದು ಸಿನಿಮಾದೊಳಗಿನ ಸಿನಿಮಾ ಕಥೆ ಆನ್ನೋದು ಸ್ಪಷ್ಟ. ಇಲ್ಲಿ ಕಥೆ ಸರಳವಾಗಿದೆ.
Related Articles
Advertisement
ಆದರೆ, ನಿರ್ದೇಶಕ ಯಾವ ಕಥೆ ಮಾಡಬೇಕು ಎಂಬ ಗೊಂದಲಕ್ಕೀಡಾಗುತ್ತಾನೆ. ಕೊನೆಗೆ, ಒಂದು ಹುಡುಗಿಯನ್ನು ಹಿಂಬಾಲಿಸಿ, ಆಕೆಯ ಮುಂದೆ ತಮ್ಮ ಪ್ರೀತಿ ವ್ಯಕ್ತಪಡಿಸೋದು, ಆ ಕ್ಷಣದಿಂದ ಶುರುವಾಗುವ ಪ್ರತಿ ಚಿತ್ರಣವನ್ನೂ ಹಾಗೆಯೇ ಚಿತ್ರೀಕರಿಸಿ ಸಿನಿಮಾ ಮಾಡುವ ಬಗ್ಗೆ ಯೋಚಿಸುತ್ತಾನೆ. ಗೆಳೆಯರೆಲ್ಲರೂ ಸಾಥ್ ಕೊಡುತ್ತಾರೆ. ಅದರಂತೆ, ಆಟೋ ಓಡಿಸಿ, ಬದುಕು ಸವೆಸುವ ಸುಂದರ ಹುಡುಗಿಯೊಬ್ಬಳ ಹಿಂದೆ ನಿರ್ದೇಶಕ ಬೀಳುತ್ತಾನೆ. ಅಲ್ಲೊಂದು ರಿಯಲ್ ಲವ್‌ಸ್ಟೋರಿ ಹುಟ್ಟಿಕೊಳ್ಳುತ್ತೆ.
ಅಲ್ಲೊಂದಷ್ಟು ತಿರುವುಗಳೂ ಬಂದುಹೋಗುತ್ತವೆ. ಕ್ಲೈಮ್ಯಾಕ್ಸ್ ಏನಾಗುತ್ತೆ ಅನ್ನೋದೇ ಕಥೆ.ಮಂಜುನಾಥ್ ಇಲ್ಲಿ ಅಚ್ಚುಮೆಚ್ಚಿನ ಗೆಳೆಯನಾಗಿ, ಪ್ರೀತಿಸೋ ಹುಡುಗನಾಗಿ ಗಮನಸೆಳೆಯುತ್ತಾರೆ. ಶಾಲಿನಿ ಭಟ್ ನಿರ್ದೇಶಕರ ಸೂಚನೆಯಂತೆ ಅಭಿನಯಿಸಿದ್ದಾರೆ. ಉಳಿದಂತೆ ರಾಕ್‌ಲೈನ್ ಸುಧಾಕರ್, ಕಿರಣ್, ರೋಹಿತ್, ಕೆವಿನ್, ಹರೀಶ್, ಮೋಹನ್, ನಾಗಭೂಷಣ್ ಎಲ್ಲರೂ ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸುವ ಪ್ರಯತ್ನ ಮಾಡಿದ್ದಾರೆ. ಪವನ್ ಪಾರ್ಥ ಸಂಗೀತದ ಒಂದು ಹಾಡು ಪರವಾಗಿಲ್ಲ. ಹಿನ್ನೆಲೆ ಸಂಗೀತಕ್ಕಿನ್ನೂ ಸ್ವಾದ ಬೇಕಿತ್ತು. ಮಹಾದೇವ ಛಾಯಾಗ್ರಹಣ ಪರವಾಗಿಲ್ಲ.
ಚಿತ್ರ: ಸ್ಟಾರ್ ಕನ್ನಡಿಗನಿರ್ಮಾಣ: ಚನ್ನವೀರ, ಅರುಣ್, ಭೈರವ, ಹರೀಶ್ ಜೋಗಿ, ಮಂಜುನಾಥ್
ನಿರ್ದೇಶನ: ಕನ್ನಡಿಗ (ಮಂಜುನಾಥ್)
ತಾರಾಗಣ: ಮಂಜುನಾಥ್, ಶಾಲಿನಿ, ರಾಕ್‌ಲೈನ್ ಸುಧಾಕರ್, ಕಿರಣ್, ರೋಹಿತ್,ಕೆವಿನ್, ಹರೀಶ್, ಮೋಹನ್, ನಾಗಭೂಷಣ್ ಇತರರು. * ವಿಜಯ್ ಭರಮಸಾಗರ