Advertisement

ಕೋಕೋ ಆಟದಲ್ಲಿ ಅರಳಿದ ಪ್ರೀತಿ

06:00 AM Jul 27, 2018 | |

ಕನ್ನಡದಲ್ಲಿ ಈಗಾಗಲೇ ಕ್ರೀಡೆ ಮತ್ತು ಪ್ರೀತಿ ಈ ವಿಷಯ ಕುರಿತ ಸಾಕಷ್ಟು ಚಿತ್ರಗಳು ಬಂದಿವೆ. ಆ ಸಾಲಿಗೆ ಈಗ ಹೊಸಬರ ಚಿತ್ರವೂ ಸೇರಿದೆ. “ಪುಟ್ಟರಾಜು ಲವ್ವರ್‌ ಆಫ್ ಶಶಿಕಲಾ’ ಚಿತ್ರ ಇದೀಗ ಸದ್ದಿಲ್ಲದೆಯೇ ಮುಗಿದು, ತೆರೆಗೆ ಬರಲು ಸಜ್ಜಾಗುತ್ತಿದೆ. ಈ ಚಿತ್ರವನ್ನು ಸಹದೇವ ನಿರ್ದೇಶಿಸಿದ್ದಾರೆ. ನಿರ್ದೇಶಕರ ಸಂಬಂಧಿಗಳಾದ ನಾಗರಾಜು, ರಾಜು ಬಾಲಕೃಷ್ಣ ಅವರು ನಿರ್ಮಾಣ ಮಾಡುವ ಮೂಲಕ ಸಾಥ್‌ ಕೊಟ್ಟಿದ್ದಾರೆ. ಇತ್ತೀಚೆಗೆ ಆಡಿಯೋ ಸಿಡಿ ಬಿಡುಗಡೆಯಾಗಿದೆ.

Advertisement

ಹೆಸರೇ ಹೇಳುವಂತೆ ಇದೊಂದು ಪಕ್ಕಾ ಲವ್‌ಸ್ಟೋರಿ ಚಿತ್ರ. ಇದು ನೈಜ ಘಟನೆಯೊಂದರ ಸುತ್ತ ಹೆಣೆದ ಕಥೆ. ಕಳೆದ 2001ರಲ್ಲಿ ತುಮಕೂರು ಸಮೀಪ ನಡೆದ ಒಂದು ಘಟನೆ ಚಿತ್ರಕ್ಕೆ ಸ್ಫೂರ್ತಿ ಎಂಬುದು ನಿರ್ದೇಶಕರ ಸಹದೇವ ಅವರ ಮಾತು. ಪ್ರೌಢಶಾಲೆಯ ವಿದ್ಯಾರ್ಥಿ, ವಿದ್ಯಾರ್ಥಿನಿ ನಡುವೆ ನಡೆಯೋ ಕಥೆಯಲ್ಲಿ ಕೋಕೋ ಆಟ ಪ್ರಧಾನವಾಗಿದೆಯಂತೆ. ಚಿತ್ರದ ನಾಯಕಿ ರಾಜ್ಯ ಕೋಕೋ ಆಟಗಾರ್ತಿ. ಅವಳ ಮೇಲೆ ಆ ಹುಡುಗನಿಗೆ ಮನಸ್ಸಾಗುತ್ತೆ. ಅವಳನ್ನು ಹೇಗಾದರೂ ಮಾಡಿ ಪಟಾಯಿಸಬೇಕು ಅಂತಾನೇ, ಕೋಕೋ ಆಟಕ್ಕೆ ಸೇರಿಕೊಳ್ಳುತ್ತಾನೆ. ಆದರೆ, ಅವನ ಕಳಪೆ ಆಟ ಪ್ರದರ್ಶನದಿಂದ ಆ ಕೋಕೋ ಆಟದಿಂದ ಹೊರಬರುತ್ತಾನೆ. ಆಮೇಲೆ ಏನಾಗುತ್ತೆ ಎಂಬುದು ಕಥೆ. ಇನ್ನೊಂದು ಕಡೆ, ನಾಯಕಿಯ ಅಜ್ಜಿ ಮತ್ತು ನಾಯಕನ ತಾತ ಇಬ್ಬರೂ ಆ ಹುಡುಗ, ಹುಡುಗಿಯ ಲವ್‌ ನಡುವೆ ಪ್ರವೇಶ ಮಾಡುತ್ತಾರೆ. ಅವರ ಮಧ್ಯೆ ಕ್ರಶ್‌ ಆಗಿಬಿಡುತ್ತೆ. ಆಮೇಲೆ ಏನು? ಅದೇ ಚಿತ್ರದ ಕಥೆ. ಇಲ್ಲಿ ಪ್ರೀತಿ ಮಾಡೋಕೆ ವಯಸ್ಸು ಮುಖ್ಯವಲ್ಲ, ಮನಸ್ಸು ಮುಖ್ಯ ಎಂಬ ಸಂದೇಶದ ಜೊತೆಗೆ ಒಂದಷ್ಟು ಅರಿವು ಮೂಡಿಸುವ ವಿಷಯಗಳಿವೆ ಎಂಬುದು ನಿರ್ದೇಶಕರ ಹೇಳಿಕೆ.

ಅಮಿತ್‌ ಚಿತ್ರದ ನಾಯಕರಾಗಿ ನಟಿಸಿದ್ದಾರೆ. ಹದಿ ಹರೆಯದ  ವಯಸ್ಸಲ್ಲಿ ಏನೆನೆಲ್ಲಾ ಅನುಭವಿಸಬಹುದು ಎಂಬ ಪಾತ್ರದಲ್ಲಿ ಅಮಿತ್‌ ಕಾಣಿಸಿಕೊಂಡರೆ, ಸುಶ್ಮಿತಾ ಸಿದ್ದಪ್ಪ ನಾಯಕಿಯಾಗಿ ನಟಿಸಿದ್ದಾರೆ. ಇವರೊಂದಿಗೆ “ಮಾರಿ ಮುತ್ತು’ ಖ್ಯಾತಿಯ ಸರೋಜಮ್ಮನ ಮೊಮ್ಮಗಳು ಜಯಶ್ರೀ ಆರಾಧ್ಯ ಕೂಡ ಇಲ್ಲಿ ಮತ್ತೂಬ್ಬ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಚಿತ್ರದಲ್ಲಿ ವಿಕ್ರಾಂತ್‌, ಕಾವ್ಯ, ರಂಗಭೂಮಿ ಕಲಾವಿದ ಮಹದೇವಮೂರ್ತಿ, ಡಾ.ರಮಾಮಣಿ ನಟಿಸಿದ್ದಾರೆ. ನಿರ್ದೇಶಕ ಸಹದೇವ್‌ ರಚಿಸಿರುವ ಮೂರು ಗೀತೆಗಳಿಗೆ ಶ್ರೀಮಾನ್‌ ಗಂಧರ್ವ ಸಂಗೀತವಿದೆ.

Advertisement

Udayavani is now on Telegram. Click here to join our channel and stay updated with the latest news.

Next