ಈ ಅಂಕಣ ರಾಜ್ಯೋತ್ಸವ ವಿಶೇಷ. ರಾಜ್ಯದ ಯುವ ಬರಹಗಾರರು ಒಂದು ಕನ್ನಡದ ಕೃತಿ ಕುರಿತು ಬರೆಯುತ್ತಾರೆ. ಇದು ಒಂದು ರೀತಿಯಲ್ಲಿ ಓದುವ ಪಂದ್ಯ.
ಆಧುನಿಕ ಕನ್ನಡ ಸಾಹಿತ್ಯದ ಹೆಸರಾಂತ ಲೇಖಕ, ಕಾದಂಬರಿಕಾರ ಡಾ| ಎಸ್. ಎಲ್. ಭೈರಪ್ಪ ಅವರ “ದೂರ ಸರಿದರು’ ಕಾದಂಬರಿ ಸಾಮಾನ್ಯ ಪ್ರೇಮ ಕಥೆಗಳಿಗಿಂತ ವಿಭಿನ್ನವಾಗಿ ಮೂಡಿಬಂದಿದೆ.
ಮೈಸೂರಿನ ಒಂದು ಕಾಲೇಜಿನ ಸಾಹಿತ್ಯ ಮತ್ತು ತಣ್ತೀಶಾಸ್ತ್ರ ಅಧ್ಯಯನದ ವಿದ್ಯಾರ್ಥಿಗಳ ಪ್ರೇಮದ ಕಥಾಹಂದರವನ್ನು ಲೇಖಕರು ಈ ಕಾದಂಬರಿಯಲ್ಲಿ ಅತ್ಯಂತ ಸೊಗಸಾಗಿ ಹೆಣೆದಿ¨ªಾರೆ. ಪ್ರಮುಖವಾಗಿ ವಾಸ್ತವ ಸಂಬಂಧಗಳಲ್ಲಿ ಸ್ತ್ರೀ- ಪುರುಷ ಸಮಾನತೆ, ಅವರ ಸಾಹಿತ್ಯಾಭಿರುಚಿ, ತಣ್ತೀ, ಮನೋವೈಫಲ್ಯ, ಬಲಾಡ್ಯ ಪುರುಷ ಹೀಗೆ ಹಲವಾರು ಅಂಶಗಳು ಈ ಕಾದಂಬರಿ ಯ ಕಥಾವಸ್ತುಗಳಾಗಿವೆ. ಸಾಹಿತ್ಯ ಮತ್ತು ತಣ್ತೀದ ಮನೋಭಾವವಿರುವ ಪ್ರೇಮಿಗಳು ಯಾವ ರೀತಿ ವಿಭಿನ್ನವಾಗಿ ಅವ ಲೋಕಿಸಿ ಪರಸ್ಪರ ಅರ್ಥೈಸಿಕೊಳ್ಳುತ್ತಾರೆ ಎಂಬುದು “ದೂರ ಸರಿದರು’ ಕಾದಂಬರಿಯಲ್ಲಿ ಪ್ರತಿಪಾದನೆಗೊಂಡಿದೆ.
ಕಾಲೇಜಿನಲ್ಲಿ ಸ್ನಾತಕ ಪದವಿಯಲ್ಲಿ ಅಧ್ಯಯನ ಮಾಡುತ್ತಿರುವ ಹಾಗೂ ಅತೀ ಹೆಚ್ಚು ಕಾಲ ಪುಸ್ತಕಗಳಿಗೆಂದೇ ಮೀಸಲಿಟ್ಟ ಸಚ್ಚಿದಾನಂದ ನಿಂದ ಕಥೆಯು ಆರಂಭವಾಗುತ್ತದೆ. ಸಾಹಿತ್ಯ ಪ್ರೇಮಿಯಾದ ಸಚ್ಚಿದಾನಂದನ ಹಲವು ಕವನ, ಕಥೆಗಳು ಪತ್ರಿಕೆಗಳಲ್ಲಿ ಪ್ರಕಟವಾಗಿರುತ್ತವೆ. ತರಗತಿಯಲ್ಲಿ ಬುದ್ಧಿವಂತನೆಂದು ಹೆಸರಾಗಿ ರುತ್ತಾನೆ. ಹಲವಾರು ಗೊಂದಲಗಳ ನಡುವೆ ಈತನಿಗೆ ಪರಿಚಯವಾದವಳು ಇವನದೇ ಅಭಿರುಚಿಯ ವಿನೀತಾ ಕುಮಾರಿ. ತಮ್ಮ ಬರಹಗಳಿಂದಲೂ ಇವರಿಬ್ಬರ ಸ್ನೇಹ ಬೆಳೆದಂತೆ ಕ್ರಮೇಣ ಪ್ರೀತಿಯಾಗಿ ಮಾರ್ಪಡುತ್ತದೆ. “ಹೆಸರು ಪ್ರಕಾಶಮಾನಕ್ಕೆ ಬರದಿದ್ದರೆ ನಾನು ಮುಳುಗಿ ಹೋಗಲ್ಲ, ಪ್ರಪಂಚವು ಮುಳುಗಲ್ಲ’ ಎಂಬುದು ಸಚ್ಚಿದಾನಂದನ ಮನೋಭಾವ. ಇನ್ನು ವಸಂತ ತಣ್ತೀಶಾಸ್ತ್ರದ ವಿದ್ಯಾರ್ಥಿ. ಈ ಎಲ್ಲ ಪಾತ್ರಗಳಿಗಿಂತ ಒಂದು ವರ್ಷ ಹಿರಿಯ ವನಾದವನು ಇವನು. ತಣ್ತೀಶಾಸ್ತ್ರದಲ್ಲಿ ಆಳ ವಾದ ಪರಿಚಯ ಮತ್ತು ದೃಷ್ಟಿಕೋನವುಳ್ಳ ಅಸಾಮಾನ್ಯ ವಿದ್ಯಾರ್ಥಿ ವಸಂತ. ಅವನ ಮನೋಭಾವಕ್ಕೆ ಒಪ್ಪುವ ಹೆಣ್ಣು ಉಮಾ. ಮನೆಯವರ ಹೇರಿಕೆಯಿಂದ ವಸಂತನು ಹಿರಿ ಯರ ಸಮ್ಮುಖದಲ್ಲಿಯೇ ವಿವಾಹ ನಿಷ್ಕರ್ಷೆ ಯಾದರೂ ಬೌದ್ಧಿಕ ಸಾಮ್ಯತೆ ಇಲ್ಲವೆಂಬ ಒಂದೇ ಕಾರಣಕ್ಕೆ ಮುರಿದು ಬೀಳುತ್ತದೆ. ಇನ್ನು ರಮಾ, ಸಚ್ಚಿದಾನಂದನ ಗೆಳತಿ, ಅವನ ಮೇಲೆ ಪ್ರೇಮವಿದ್ದರೂ ತನ್ನಲ್ಲೇ ಮುಚ್ಚಿಟ್ಟು ಪ್ರೇಮಿ ಸುವ ಒಂದು ಹೆಣ್ಣು.
ವಿನೀತಾ ಕುಮಾರಿ ಮನೆ ಯಲ್ಲಿ ಹುಸಿ ನುಡಿದು ಸಚ್ಚಿದಾನಂದನೊಂದಿಗೆ ತಲಕಾಡಿನಲ್ಲಿ ಪ್ರಕೃತಿಯ ನಡುವೆ ಒಂದು ಮರದ ಮೇಲೆ ತಮ್ಮ ತಮ್ಮ ಹೆಸರು ಗಳನ್ನು ಬರೆದು ಪ್ರಕೃತಿ ದೇವಿಯ ಆಶೀರ್ವಾದ ಪಡೆದು ಅಲ್ಲಿಯೇ ಮದುವೆ ಯಾಗಿ ಬಿಡುತ್ತಾರೆ. ದಿನಕಳೆ ದಂತೆ ವಿನೀತಾಳ ತಾಯಿಯ ಪ್ರೀತಿಯೇ ಆಕೆಗೆ ನೇಣಿನ ಕುಣಿಕೆಯಾಗಿ, ಮಾತೃ ಪ್ರೀತಿ ಯಲ್ಲಿ ಬಂದಿಯಾಗಿ ವಿನೀತಾ, ಮನೆಯ ಆರ್ಥಿಕ ಸ್ಥಿತಿಯ ಕುಸಿತದಿಂದ ತನ್ನ ಓದನ್ನು ನಿಲ್ಲಿಸಿ ಕೆಲಸಕ್ಕೆ ಸೇರಿ ಬಿಡುತ್ತಾಳೆ. ಮಿಕ್ಕವರೆಲ್ಲ ಎಂಎ ಪದವೀಧರರಾಗುತ್ತಾರೆ. ಅನಂತರ ಇವರ ಬಾಳಿನ ದಿಕ್ಕೇ ಬದಲಾಗಿ ವಿಧಿಯಾಟವೇ ಭಯಂಕರವಾಗಿ ಓದುಗರಲ್ಲಿ ರೋಮಾಂಚ ನದ ಅಲೆ ಎಬ್ಬಿಸುತ್ತದೆ. ಮತ್ತೂಬ್ಬರನ್ನು ನೋಯಿಸಿದ ನಮಗೂ ನೋವು ಉಂಟಾಗು ವುದು ತಪ್ಪಿದ್ದಲ್ಲ.
ಈ ಕಾದಂಬರಿಯ ಮುಖೇನ ನಾನು ಕಂಡಿ ದ್ದು, ನೋವಿನಿಂದಲೂ ಸಾಹಿತ್ಯದ ಹುಟ್ಟು ಆಗುತ್ತದೆ. ವಿಚಾರದಿಂದ ತಿಳಿಯುವುದು ಎಷ್ಟು ಸುಲಭವೋ, ಮನಸ್ಸನ್ನು ಗೆಲ್ಲುವುದು ಅದರ ದುಪ್ಪಟ್ಟು ಕಷ್ಟ. ಬಗೆಬಗೆಯ ಆಸೆ, ವ್ಯಾಮೋಹ, ಸತ್ಯ-ಸುಳ್ಳುಗಳ ನಡುವೆ ಸಿಲುಕಿ ರುವ ಮನುಷ್ಯನ ಮನಸ್ಸಿಗಿಂತಲೂ ಬೇರೆ ಒಂದು ವಿಚಿತ್ರ ವಸ್ತು ಇಲ್ಲ. ತೀರಾ ನಿರ್ಜೀವ ವಾದ ಶಕ್ತಿ ಮಾನವ ಪ್ರೇಮವೇ ಎಂಬುದು.
-ಸಹನಾ ವಿ. ತುಮಕೂರು