Advertisement

ಲವ್ ಸ್ಟೋರಿ ಜೊತೆ ಟೈಮ್ ಟ್ರಾವೆಲ್: ಝೈದ್‌ ಖಾನ್‌ ನಟನೆಯ ‘ಬನಾರಸ್’

03:50 PM Sep 30, 2022 | Team Udayavani |

ಝೈದ್‌ ಖಾನ್‌ ನಾಯಕರಾಗಿ ನಟಿಸಿರುವ “ಬನಾರಸ್‌’ ಚಿತ್ರದ ಟ್ರೇಲರ್‌ ಇತ್ತೀಚೆಗೆ ಬಿಡುಗಡೆಯಾಗಿದೆ. ಇದು ಪ್ಯಾನ್‌ ಇಂಡಿಯಾ ಸಿನಿಮಾವಾಗಿದ್ದು, ಕನ್ನಡ, ತೆಲುಗು, ಹಿಂದಿ, ತಮಿಳು ಹಾಗೂ ಮಲಯಾಳಂನಲ್ಲಿ ಟ್ರೇಲರ್‌ ಏಕಕಾಲಕ್ಕೆ ಬಿಡುಗಡೆಯಾಯಿತು. ಕ್ರೇಜಿಸ್ಟಾರ್‌ ರವಿಚಂದ್ರನ್‌ ಹಾಗೂ ಬಾಲಿವುಡ್‌ ನಟ ಅರ್ಬಾಜ್‌ ಖಾನ್‌ ಚಿತ್ರದ ಟ್ರೇಲರ್‌ ರಿಲೀಸ್‌ ಮಾಡಿ, ಶುಭಕೋರಿದರು. ಈ ಚಿತ್ರವನ್ನು ಜಯತೀರ್ಥ ನಿರ್ದೇಶಿಸಿದ್ದಾರೆ.

Advertisement

ಚಿತ್ರದ ಬಗ್ಗೆ ಮಾತನಾಡುವ ನಾಯಕ ಝೈದ್‌ ಖಾನ್‌, “ಸಿನಿಮಾಕ್ಕೆ ಬರಬೇ ಕೆಂಬುದು ನನ್ನ ಬಾಲ್ಯದ ಕನಸು. ಆ ನಿಟ್ಟಿನಲ್ಲಿ ಸಾಕಷ್ಟು ಕಷ್ಟಪಟ್ಟಿದ್ದೀನಿ. ನಾನು ಸಿನಿಮಾಕ್ಕೆ ಬರೋದು ನನ್ನ ಕುಟುಂಬಕ್ಕೆ ಇಷ್ಟವಿರಲಿಲ್ಲ. ಈಗ ಹೇಗೋ ಬಂದಿದ್ದೀನಿ.

ತುಂಬಾ ಇಷ್ಟಪಟ್ಟ ಕಥೆ ಇದು. ರೆಗ್ಯುಲರ್‌ ಶೈಲಿಯ ಸಿನಿಮಾ ಮೂಲಕ ಲಾಂಚ್‌ ಆಗಲು ನನಗೆ ಇಷ್ಟವಿರಲಿಲ್ಲ. ಆ ಹುಡುಕಾಟದಲ್ಲಿದ್ದಾಗ ನನಗೆ ಸಿಕ್ಕ ಕಥೆ ಇದು. ನಮ್ಮ ಕುಟುಂಬದ ಆಪ್ತರಾದ ತಿಲಕ್‌ ರಾಜ್‌ ಅವರು ಈ ಸಿನಿಮಾವನ್ನು ಅದ್ಧೂರಿಯಾಗಿ ನಿರ್ಮಿಸಿದ್ದಾರೆ’ ಎಂದರು.

ಇದನ್ನೂ ಓದಿ:ಪಿಎಫ್ ಐ ನಿಷೇಧದ ಬಳಿಕ ಉತ್ತರಪ್ರದೇಶದಾದ್ಯಂತ ಹೈಅಲರ್ಟ್, ಪೊಲೀಸ್ ಪಥಸಂಚಲನ

ನಿರ್ದೇಶಕ ಜಯತೀರ್ಥ ಅವರು ಇಲ್ಲಿ ಲವ್‌ಸ್ಟೋರಿ ಜೊತೆಗೆ ಟೈಮ್‌ ಟ್ರಾವೆಲ್‌ ಕಾನ್ಸೆಪ್ಟ್ ಅನ್ನು ಸೇರಿಸಿ, ಹೊಸ ಬಗೆಯ ಕಥೆ ಮಾಡಿದ್ದಾರಂತೆ. ಜೊತೆಗೆ ಇಡೀ ಸಿನಿಮಾ ಬನಾರಸ್‌ ಸುತ್ತಮುತ್ತ ಚಿತ್ರೀಕರಣವಾಗಿದ್ದು, ಪ್ರೇಕ್ಷಕರಿಗೆ ಒಂದು ಹೊಸ ಅನುಭವ ನೀಡಲಿದೆ ಎಂಬ ವಿಶ್ವಾಸ ಜಯತೀರ್ಥ ಅವರದು.

Advertisement

ನಿರ್ಮಾಪಕ ತಿಲಕ್‌ ರಾಜ್‌ ಬಲ್ಲಾಳ್‌ ಅವರಿಗೆ ಈ ಸಿನಿಮಾ ದೊಡ್ಡ ಹಿಟ್‌ ಆಗುವ ಜೊತೆಗೆ ಝೈದ್‌ ಖಾನ್‌ ಚಿತ್ರರಂಗದಲ್ಲಿ ಗಟ್ಟಿನೆಲೆಯೂರುವ ವಿಶ್ವಾಸವಿದೆ.

ಚಿತ್ರದಲ್ಲಿ ಸೋನಾಲ್‌ ಮೊಂತೆರೋ ನಾಯಕಿಯಾಗಿ ನಟಿಸಿದ್ದು, ಧ್ವನಿ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಸುಜಯ್‌ ಶಾಸ್ತ್ರಿ, ಸಪ್ನಾ, ಅಚ್ಯುತ್‌ ಕುಮಾರ್‌ ಸೇರಿದಂತೆ ಅನೇಕರು ನಟಿಸಿದ್ದಾರೆ. ಚಿತ್ರಕ್ಕೆ ಅಜನೀಶ್‌ ಲೋಕನಾಥ್‌ ಸಂಗೀತ, ಅದ್ವೈತ್‌ ಛಾಯಾಗ್ರಹಣವಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next