ಸುತ್ತಲಿನ ವಾತಾವರಣ ಹಾಗೂ ವ್ಯವಸ್ಥೆ ಇತ್ತು. ಸಾಮಾನ್ಯ ವಾಗಿ ಗುರುಪ್ರಸಾದ್ ಸಿನಿಮಾಗಳ ಮುಹೂರ್ತ ಸಿಂಪಲ್ಲಾಗಿ ಆಗುತ್ತಿತ್ತು. ಆದರೆ, ಈ ಬಾರಿ ಅವರ ಹೊಸ ಚಿತ್ರ “ಅದೇಮಾ’ ಮುಹೂರ್ತವನ್ನು ಅದ್ಧೂರಿಯಾಗಿ ಮಾಡಿ ದ್ದರು. ಕಂಠೀರವ ಸ್ಟುಡಿಯೋದ ಹೊಸ ಫ್ಲೋರ್ ಅನ್ನು ಮದುವೆ ಛತ್ರದಂತೆ ಸಿಂಗರಿಸಿದ್ದರು. ಹೊಸದಾಗಿ ಬಂದವರಿಗೆ ಯಾವುದೋ ರೆಸಾರ್ಟ್‌ನಲ್ಲಿ ನಡೆಯುತ್ತಿರುವ ರಿಸೆಪ್ಷನ್‌ಗೆ ಬಂದಂತೆ ಭಾಸವಾಗು ವಂತಿತ್ತು. ಅಲ್ಲಿಗೆ ಗುರು ಅವರ “ಬದಲಾದ’ ಮಾತಿನಲ್ಲಿ ಸತ್ಯ ಕಾಣುತ್ತಿತ್ತು. ಗುರುಪ್ರಸಾದ್ “ಅದೇಮಾ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗದ 80 ವರ್ಷಗಳ ಇತಿಹಾಸದಲ್ಲಿ ಬಾರದಿರುವಂತಹ ಒಂದು ವಿಭಿನ್ನ ಕಥೆಯನ್ನು ಹೇಳಲಿದ್ದಾರಂತೆ.
Advertisement
ಅವರ ಈ ವಿಭಿನ್ನ ಕಥೆಗೆ ಅನೂಪ್ ಸಾ.ರಾ.ಗೋವಿಂದು ನಾಯಕ. “ಕಥೆ ತುಂಬಾ ಭಿನ್ನವಾಗಿದೆ. ಕನ್ನಡ ಚಿತ್ರರಂಗದ 80 ವರ್ಷಗಳ ಇತಿಹಾಸದಲ್ಲೇ ಇಂತಹ ಸಿನಿಮಾ ಬಂದಿಲ್ಲ. ಈ ತರಹದ್ದೊಂದು ಕಥೆಯನ್ನು ಯಾರೂ ಟಚ್ ಮಾಡಿಲ್ಲ. ಆ ಪ್ರಯತ್ನವನ್ನು ನಾನೀಗ ಮಾಡುತ್ತಿದ್ದೇನೆ’ ಎಂದು ವಿಶ್ವಾಸದಿಂದ ಹೇಳಿಕೊಂಡರು ಗುರುಪ್ರಸಾದ್. ಒಂಭತ್ತು ವರ್ಷಗಳ ಹಿಂದೆ ಗುರುಪ್ರಸಾದ್ ಮಾಡಿಕೊಂಡಿರುವ ಕಥೆ ಇದಂತೆ. ಹಾಗಂತ ಕಥೆ ಒಂಭತ್ತು ವರ್ಷ ಹಳೆಯದಾಗಿಲ್ಲ. ಅದನ್ನು ಕಾಲಕ್ಕೆ ತಕ್ಕಂತೆ ಅಪ್‌ಡೇಟ್ ಮಾಡಿಕೊಂಡು ಬಂದಿದ್ದಾರಂತೆ. ಒಂಭತ್ತು ವರ್ಷಗಳ ಕಥೆ ಯಾಕೆ ಈಗ ಸಿನಿಮಾವಾಗುತ್ತಿದೆ ಎಂದರೆ, “ನಿರ್ಮಾಪಕರು ಧೈರ್ಯಮಾಡಲಿಲ್ಲ’ ಎಂಬ ಉತ್ತರ ಗುರುವಿನಿಂದ ಬರುತ್ತದೆ. ಈ ಹಿಂದೆ ಈ ತರಹದ ಒಂದು ಲೈನ್ ಇದೆ, ಸಿನಿಮಾ ಮಾಡುವ ಎಂದು ಕೆಲವು ನಿರ್ಮಾಪಕರಿಗೆ ಹೇಳಿದಾಗ “ಇದು ವಕೌìಟ್ ಆಗುತ್ತಾ, ಜನ ಇದನ್ನು ಸ್ವೀಕರಿಸು ತ್ತಾರಾ’ ಎಂದು ಸಂದೇಹ ವ್ಯಕ್ತಪಡಿಸಿದರಂತೆ. ಹಾಗಾಗಿ, ಒಂಭತ್ತು ವರ್ಷ ಗುರು ತಲೆಯ ಲಾಕರ್‌ನಲ್ಲೇ ಇತ್ತು “ಅದೇಮಾ’. ಈಗ ನಿರ್ಮಾಪಕ ಶ್ರೀಧರ್ ರೆಡ್ಡಿ ಸಿನಿಮಾ ಮಾಡಲು
ಮುಂದೆ ಬಂದಿದ್ದಾಗಿ ಹೇಳಿಕೊಂಡರು ಗುರು. “ಅದೇಮಾ’ ಟೈಟಲ್‌ನ ಅರ್ಥವೇನು, ಆ ಟೈಟಲ್ ಏನು ಸೂಚಿಸುತ್ತದೆ ಎಂಬುದನ್ನು ಈಗಲೇ ಬಿಟ್ಟುಕೊಡಲು ಗುರುಪ್ರಸಾದ್ ರೆಡಿಯಿಲ್ಲ. ಮುಂದಿನ ದಿನಗಳಲ್ಲಿ “ಅದೇಮಾ’ ಅಂದ ರೇನು, ಅದರ ಹಿಂದಿನ ಅರ್ಥವೇನು ಎಂಬುದನ್ನು ಹೇಳುತ್ತಾರಂತೆ.
ಮುಗಿಸುತ್ತಿದ್ದ ನಾನು ಈ ಸಿನಿಮಾವನ್ನು ಸಂಪೂರ್ಣ ಔಟ್‌ಡೋರ್‌ನಲ್ಲಿ ಮಾಡುತ್ತಿ ದ್ದೇನೆ. ಈ ಹಿಂದೆ ನೋಡಿರದಂತಹ ಕರ್ನಾಟಕದ
ಲೊಕೇಶನ್ ಗಳಲ್ಲಿ ಚಿತ್ರೀಕರಣ ಮಾಡುತ್ತೇನೆ. ಜೊತೆಗೆ ತಾರಾಬಳಗವೂ ದೊಡ್ಡದಿರುತ್ತದೆ. ಈ ಹಿಂದೆ ಲಕ್ಷದಲ್ಲಿ ಸಿನಿಮಾ ಮುಗಿಸುತ್ತಿದ್ದ ನಾನು ಈಗ ಕೋಟಿಯಲ್ಲಿ ಸಿನಿಮಾ ಮಾಡುತ್ತಿದ್ದೇನೆ’ ಎನ್ನುವ ಗುರು, ಕ್ಲೋಸಪ್ ಶಾಟ್‌ನಿಂದ ವೈಡ್‌ಗೆ
ಬಂದಿರುವುದಾಗಿ ಹೇಳಲು ಮರೆಯಲಿಲ್ಲ. ನಾಯಕಿ ಗಾಗಿ ಹುಡುಕಾಟ ನಡೆಸುತ್ತಿದ್ದು, ಆಡಿ ಷನ್ ಮೂಲಕ ಆಯ್ಕೆ ಮಾಡಲಾಗುತ್ತದೆಯಂತೆ. ಇನ್ನು, ನಾಯಕ ಅನೂಪ್ ಅವರನ್ನು ಗುರು “ಡವ್’ ಸಿನಿಮಾ ಸಮಯದಿಂದಲೇ ಗಮನಿಸು
ತ್ತಿದ್ದರಂತೆ. ಆ ಚಿತ್ರದ ನಿರ್ದೇಶಕ ಸಂತುವಿನಲ್ಲೂ ಅನೂಪ್ ಬಗ್ಗೆ ವಿಚಾರಿಸಿದ್ದರಂತೆ ಗುರು. ಎಲ್ಲಾ ಕಡೆಯಿಂದ ಪಾಸಿಟಿವ್ ರಿಪೋರ್ಟ್. ಹಾಗಾಗಿ, “ಅದೇಮಾ’ಕ್ಕೆ ಅನೂಪ್ ಆಯ್ಕೆಯಾಗಿದ್ದಾಗಿ ಹೇಳುವ ಗುರು, ಈ ಸಿನಿಮಾ ಮೂಲಕ ಅನೂಪ್
ಅವರನ್ನು ಇನ್ನೊಂದು ರೇಂಜ್‌ಗೆ ತೆಗೆದುಕೊಂಡು ಹೋಗುವುದಾಗಿ ಹೇಳುತ್ತಾರೆ. ಗುರುಪ್ರಸಾದ್ ನಿರ್ದೇಶನದಲ್ಲಿ ನಟಿಸುತ್ತಿರುವ ಅನೂಪ್‌ಗೆ ಒಳ್ಳೆಯ ಗರಡಿ ಸೇರಿದ ಖುಷಿ. ಯಾವುದೇ ಸಿನಿಮಾಕ್ಕೂ ಹೋಲಿಸಲಾಗದ ಲವ್‌ಸ್ಟೋರಿಯನ್ನು ಗುರು ಮಾಡಿಕೊಂಡಿರುವು ದಾಗಿ ಖುಷಿಯಿಂದ ಹೇಳಿದರು ಅನೂಪ್. ನಿರ್ಮಾಪಕ ಶ್ರೀಧರ್ ರೆಡ್ಡಿ ಚೆನ್ನಾಗಿ ಸಿನಿಮಾ ಮಾಡಿ ಗೆಲ್ಲಿಸಿಕೊಟ್ಟರೆ ಮುಂದೆ ಸಿನಿಮಾ ಮಾಡುತ್ತೇನೆ, ಇಲ್ಲವಾದರೆ ಚಿತ್ರರಂಗ ಬಿಟ್ಟು ಓಡುತ್ತೇನೆ ಎಂಬ ಎಚ್ಚರಿಕೆಯನ್ನು ಗುರುಗೆ ಮೊದಲೇ ಕೊಟ್ಟಿದ್ದಾರಂತೆ. ಮಗ ನಾಯಕನಾ ಗಿರುವ ಚಿತ್ರಕ್ಕೆ ಶುಭ ಕೋರಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು ಕೂಡಾ ಬಂದಿದ್ದರು. ಯಾವತ್ತಿಗೂ ನಿರ್ಮಾಪಕರ ಪರ
ವಾಗಿ ನಿಲ್ಲುವಂತೆ ತಮ್ಮ ಮಗನಿಗೆ ಕಿವಿಮಾತು ಹೇಳಿದರು. ಚಿತ್ರಕ್ಕೆ ಶ್ರೀಧರ್ ವಿ ಸಂಭ್ರಮ್ ಸಂಗೀತವಿದೆ.