Advertisement

ಮುಂಗುರುಳ ಜೋಕಾಲಿಯಾಗ…

12:54 PM Apr 28, 2020 | mahesh |

ನನ್ನ ಮನಸಾಗಿನ್‌ ಮಾತ್‌ ಹೇಳಾಕ ನಿನ್‌ ಹೃದಯದ್‌ ಬಾಗಿಲಾಗ ಗುಲಾಬಿ ಹಿಡ್ಕೊಂಡ್‌ ನಿಂತೀನಿ… ಮುಂಗುರುಳ ಜೋಕಾಲಿಯಾಗ ಜೀಕೋ ಆಸಿಯಾಗೈತಿ… ಕಿಟಕ್ಯಾಗ ತಣ್ಣಗ ಗಾಳಿ ಬೀಸೋವಾಗ, ಪದೀ ಪದಿ ನಿನ್‌ ಕೆನ್ನಿಗ ಮುತ್ತಕೊಡೋಕ ಬರೋ ಆ ಮುಂಗುರುಳನ್ನ ಕೈನಾಗ ಕಿವಿ ಹಿಂದ ಸರಸಾಕತ್ತಿದ್ದನ್ನ ನೋಡಿದಾಕ್ಷಣ, ನಿನ್‌ ಮ್ಯಾಗ ಪ್ರೀತಿ ಆಗೈತಿ. ಯಾಕಾರ ನಾನ್‌ ಆ ನಿನ್‌ ಮುಂಗುರುಳ ಆಗಿಲ್ಲ ಅಂತ ಅನಿಸೈತಿ. ನನ್‌ ಬದುಕಾಗಿನ್‌ ಅಷ್ಟೂ ದಿವಸದಾಗ, ಮೊದಲ್‌ ನೋಟದಾಗ ಪ್ರೀತಿ ಆಗಿತ್‌ನೋಡ.

Advertisement

ಹುಣ್ಣಿಮಿಯಾಗ ಆ ಚಂದ್ರಕೂಡ, ನಮ್ಮನಿ ಅಂಗಳಕ್ಕ ಬಂದಾನ. ಯಾಕಂದ್ರ, ನನ್‌ ಪ್ರೀತಿ ಆಗಿರೋ ನಿಂಗ ಜೋಗುಳ ಹಾಡಾಕ. ಅವಂಗೂ ನಿನ್‌ ಮ್ಯಾಗ ಅಷ್ಟೇ ಕಾಳಜಿ ಐತಿ. ಆ ಚಂದ್ರನ ಬೆಳದಿಂಗಳಂಗ, ನನ್‌ ಪ್ರೀತಿ ನಿನ್‌ ಕೈಯಾಗ್‌ಇಡೋ ಆಸಿ ಐತಿ. ಅದನ್ನ ನೀ ಇಷ್ಟ ಪಟ್ಟಿಯಂದ್ರ ನಾ ಅದೃಷ್ಟವಂತ. ಮಳಿ ಬಂದು ನಿಂತಾಗಿಂದ, ನಿನ್‌ ನೆನಪೇ ನಿಲ್ಲವಲ್ದು.

ಮರದಾಗಿನ್‌ ಮಳಿಹನಿಯಂಗ. ಆ ಚಂದ್ರ ಬಂದು ಬೆಳಗುದ್ರೂನು, ಅವನ್‌ ಬೆಳದಿಂಗಳಂಗ ನಿನ್‌ ನೆನಪು ಸರಿವಲ್ದು. ನನ್ನಮನಸಾಗಿನ್‌ ಮಾತ್‌ ಹೇಳಾಕ, ನಿನ್‌ ಹೃದಯದ್‌ ಬಾಗಿಲಾಗ ಗುಲಾಬಿ ಹಿಡ್ಕೊಂಡ್‌ ನಿಂತೀನಿ. ಅದ್ಯಾವಗ್‌ ಪ್ರೀತಿ ಬಂದು ಸೇರ್‌ಕೊಂತೋ ಗೊತ್ತಿಲ್ಲ. ನಿನ್‌ ನೆನಪಾ ಹೋಗವಲ್ದು ಎದೆಯಾಗಿನ್‌ ಬಡಿತದಂಗ. ನೀ ಬಂದು ನನ್‌ ಮನಸಾಗ್‌ ಕೂತಾಗಿಂದ, ಬರೀ ನಿಂದಾ ನೆನಪಿನ್‌ ಪ್ರೀತಿ ಮಳಿ ಸುರಿಯಾಕತ್ತೈತಿ. ಒಮ್ಯಾರ ನೀ ನನ್‌ ಎದಿಯಾಗ ಇಳಿದ್‌ ನೋಡ. ಅದರಾಗಿನ್‌ ಪ್ರೀತಿಗಮ್ಮತ್‌ ಎಷ್ಟಂತ, ನಿಂಗಾ ತಿಳಿತೈತಿ. ಮಲ್ಲಿಗಿಯಂಥ ಹೃದಯ ತಂದ್‌ ಅದರಾಗ ಪ್ರೀತಿ ತುಂಬ್ಸಿ ನಿನ್‌ಕೈನಾಗ್‌ ಇಡಾಕ ಕಾದುಕುಂತೀನಿ. ನಿನ್‌ ನೆನಪಾಗ ಕಾಯ್ಲಿಕ್ಕತ್ತಿರೋ ಹುಡುಗ…

ಲಕ್ಷ್ಮೀಕಾಂತ್‌ ಎಲ್ ವಿ.

Advertisement

Udayavani is now on Telegram. Click here to join our channel and stay updated with the latest news.

Next