Advertisement
ಲವ್ ಮೊಕ್ಟೈಲ್ ಚಿತ್ರದ ಒಂದಷ್ಟು ವೆರಿ ಇಂಟ್ರಸ್ಟಿಂಗ್ ಅಂಶಗಳು ಇಲ್ಲಿವೆ. ಲವ್ ಮೊಕ್ಟೈಲ್ ಚಿತ್ರ ಇಷ್ಟು ರೆಸ್ಪಾನ್ಸ್ ಪಡೆದುಕೊಂಡಿದೆ ಅಂದ್ರೆ ಅದ್ರ ಎಲ್ಲಾ ಕ್ರೆಡಿಟ್ಸ್ ಡಾರ್ಲಿಂಗ್ ಕೃಷ್ಣ ಹಾಗೂ ನಟಿ ಮಿಲನ ನಾಗರಾಜ್ ಅವ್ರಿಗೆ ಸಲ್ಲಬೇಕು. ಸಿನಿಮಾ ಮೇಲಿನ ಇವ್ರ ಪ್ಯಾಶನ್ ಹಾಗೂ ಕೆಲಸದಲ್ಲಿನ ಡೆಡಿಕೇಶನ್ ಇಂದು ಲವ್ ಮೊಕ್ಟೈಲ್ ಸಿನಿಮಾ ಆಗೋಕೆ ಕಾರಣ.ಡಾರ್ಲಿಂಗ್ ಕೃಷ್ಣ ಬೆಂಗಳೂರಿನಿಂದ ಮೈಸೂರಿಗೆ ಪಯಣ ಬೆಳೆಸುವಾಗ ಹೊಳೆದ ಚಿಕ್ಕ ಸ್ಟೋರಿ ಲೈನ್ ಇಂದು ಲವ್ ಮೊಕ್ಟೈಲ್ ಚಿತ್ರವಾಗಿ ಸಿದ್ದವಾಗಿದೆ. ನಂತರ ನಟಿ ಮಿಲನಾ ನಾಗರಾಜ್, ಡಾರ್ಲಿಂಗ್ ಕೃಷ್ಣ ಇಬ್ಬರು ಕೂತು ಇಡೀ ಕಥೆ ಹೆಣೆದಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಎಲ್ಲ್ಲವನ್ನು ಮಾಡಿ ಮುಗಿಸಲು ತೆಗೆದುಕೊಂಡಿದ್ದು ಕೇವಲ ಇಪ್ಪತ್ತು ದಿವಸ.
ಲವ್ ಮೊಕ್ಟೈಲ್ ಚಿತ್ರದ ವೆರಿ ಇಂಟ್ರಸ್ಟಿಂಗ್ ಸಂಗತಿಯೊಂದಿದೆ ಅದನ್ನು ಕೇಳಿದ್ರೆ ನೀವು ಶಾಕ್ ಆಗೋದು ಗ್ಯಾರಂಟಿ. ಹೌದು, ಈ ಚಿತ್ರಕ್ಕೆ ಯಾವುದೇ ಮೇಕಪ್ ಮ್ಯಾನ್ ಇಲ್ಲ, ಕಾಸ್ಟ್ಯೂಮ್ ಡಿಸೈನರ್ ಇಲ್ಲ. ಎಲ್ಲವನ್ನು ಡಾರ್ಲಿಂಗ್ ಕೃಷ್ಣ, ಮಿಲನ ನಾಗರಾಜ್ ಇಬ್ಬರೇ ನಿಭಾಯಿಸಿದ್ದಾರೆ. ಮಿಲನ ನಾಗರಾಜ್ ತಮ್ಮ ಮೇಕಪ್ ಮಾಡಿಕೊಳ್ಳುವುದರ ಜೊತೆ ಎಲ್ಲಾ ಆರ್ಟಿಸ್ಟ್ಗಳಿಗೂ ಚಿತ್ರದುದ್ದಕ್ಕೂ ತಾವೇ ಮೇಕಪ್ ಮಾಡಿದ್ದಾರೆ. ಕಾಸ್ಟ್ಯೂಮ್ ಜವಾಬ್ದಾರಿ ಕೂಡ ಇವರಿಬ್ಬರದ್ದೇ.