ಬೆಂಗಳೂರು: ಮದುವೆ ಆಗುವುದಾಗಿ ನಂಬಿಸಿದ್ದ ಪ್ರಿಯಕರನೋರ್ವ ಮತ್ತೂಬ್ಬಳನ್ನು ಮದುವೆಯಾಗುವುದಾಗಿ ತಿಳಿಸಿದ್ದರಿಂದ ಮನನೊಂದ ನರ್ಸಿಂಗ್ ವಿದ್ಯಾರ್ಥಿನಿ, ಡೆತ್‌ನೋಟ್ ಬರೆದಿಟ್ಟು ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬನಶಂಕರಿ 3ನೇ ಹಂತದ ಮಂಜುನಾಥ್ ಕಾಲೋನಿ ನಿವಾಸಿ ಲಾವಣ್ಯ ಕೆ.(23) ಮೃತರು. ಪ್ರೀತಿಸುತ್ತಿದ್ದ ಕಿರಣ್ ಸೇರಿದಂತೆ ಆತನ ಪೋಷಕರ ಜಾತಿ ನಿಂದನೆ, ಜೀವ ಬೆದರಿಕೆಯೇ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಎಂದು ಆರೋಪಿಸಿ ಲಾವಣ್ಯ ತಾಯಿ ಪದ್ಮಾ ಚನ್ನಮ್ಮನ ಅಚ್ಚುಕಟ್ಟು ಠಾಣೆಗೆ ದೂರು ನೀಡಿದ್ದಾರೆ.
ಈ ದೂರು ಹಾಗೂ ಲಾವಣ್ಯ ಸಾವಿಗೂ ಮುನ್ನ ಬರೆದಿಟ್ಟ ಡೆತ್‌ನೋಟ್ ಆಧರಿಸಿ ಕಿರಣ್ ಹಾಗೂ ಆತನ ತಂದೆ ಶ್ರೀಧರ್, ತಾಯಿ ಪ್ರಫುಲ್ಲಾ ವಿರುದ್ಧ ಜಾತಿ ನಿಂದನೆ, ಆತ್ಮಹತ್ಯೆಗೆ ಪ್ರಚೋಧನೆ ಯಡಿ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಪ್ರಕರಣದ ಆರೋಪಿ ಕಿರಣ್ (23)ನನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳ ಬಂಧನಕ್ಕೂ ಕ್ರಮ ವಹಿಸಲಾಗಿದ್ದು ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರುತಿಳಿಸಿದ್ದಾರೆ.
ಖಾಸಗಿ ಕಾಲೇಜಿನಲ್ಲಿ ನರ್ಸಿಂಗ್ ವಿದ್ಯಾಭ್ಯಾಸ ಮಾಡುವ ವೇಳೆ 2 ವರ್ಷಗಳಿಂದ ಕಿರಣ್ ಹಾಗೂ ಲಾವಣ್ಯ ಪರಸ್ಪರ ಪ್ರೀತಿಸುತ್ತಿದ್ದರು. ಕಿರಣ್ ಕೂಡ ಲಾವಣ್ಯ ಮನೆಗೆ ಬಂದು ಪೋಷಕರನ್ನು ಒಪ್ಪಿಸಿ ಮದುವೆ ಆಗುವುದಾಗಿ ಹೇಳಿದ್ದ. ಈ ಮಧ್ಯೆ ಇಬ್ಬರ ಪ್ರೀತಿ ವಿಚಾರ,ಕಿರಣ್ ಪೋಷಕರಿಗೆ ಗೊತ್ತಾಗಿ ಅವರು ಕಾಲೇಜಿನ ಬಳಿಯೇ ಬಂದು ಲಾವಣ್ಯಳಿಗೆ ಅವಾಚ್ಯ ಶಬ್ಧ ಗಳಿಂದ ನಿಂದಿಸಿದ್ದರು.
ಇದಾದ ಬಳಿಕ ಕಿರಣ್ ಖಾಸಗಿ ಆಸ್ಪತ್ರೆಯೊಂದರಲ್ಲಿ ಲ್ಯಾಬ್ ಟೆಕ್ನೀಷಿ ಯನ್ ಆಗಿ ಕೆಲಸಕ್ಕೆ ಸೇರಿದ್ದ. ಲಾವಣ್ಯ ವಿದ್ಯಾಭ್ಯಾಸ ಮುಂದುವರಿಸಿದ್ದಳು. ಆಕೆಯನ್ನು ಇತ್ತೀಚೆಗೆ ದೂರ ಮಾಡುತ್ತಿದ್ದ ಕಿರಣ್, ಫೆ.11ರಂದು ಆಕೆ ಕಾಲೇಜಿನ ಬಳಿ ಮತ್ತೋರ್ವ ಹುಡುಗಿಯನ್ನು ಕರೆದೊಯ್ದು, ತಾನು ಆಕೆಯನ್ನೇ ಮದುವೆ ಆಗುವುದಾಗಿ ಲಾವಣ್ಯಳಿಗೆ ತಿಳಿಸಿದ್ದಾನೆ. ಇದರಿಂದ ನೊಂದಿದ್ದ ಲಾವಣ್ಯ, ಮದುವೆ ಆಗುವುದಾಗಿ ದೈಹಿಕ ಸಂಬಂಧ ಬೆಳೆಸಿ ಕಿರಣ್ ಮೋಸ ಮಾಡಿರುವ ಬಗ್ಗೆ ಹೇಳಿಕೊಂಡು ಅತ್ತಿದ್ದಳು ಎಂದು ದೂರುದಾರೆ ಪದ್ಮಾ ತಿಳಿಸಿದ್ದಾರೆ.
ಫೆ.12ರ ಬೆಳಗ್ಗೆ ಪದ್ಮಾ ಅವರು ಎಂದಿನಂತೆ ಕೆಲಸಕ್ಕೆ ಹೋಗಿದ್ದು ಲಾವಣ್ಯ ಮನೆಯಲ್ಲಿಯೇ ಇದ್ದರು. ಈ ವೇಳೆ ಡೆತ್‌ನೋಟ್ ಬರೆದಿಟ್ಟು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಧ್ಯಾಹ್ನ 2 ಗಂಟೆ ಸುಮಾರಿಗೆ ಪದ್ಮಾ ಅವರು ಮನೆಗೆ ಬಂದಾಗ ಮಗಳು ಆತ್ಮಹತ್ಯೆ ಮಾಡಿಕೊಂಡಿ ರುವುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.