ಹೀಗೆ ಕಾಲ ಕಳೆಯಿತು. ಏಳನೆಯ ತರಗತಿಯಲ್ಲಿ ಇರಬೇಕಾದರೆ ನನ್ನ ಪ್ರೀತಿಯ ವಿಜ್ಞಾನ ಮೇಷ್ಟ್ರು ಬೇರೆ ಕಡೆ ವರ್ಗಾವಣೆ ಆಗುತ್ತಾರೆ ಎಂಬ ಮಾಹಿತಿ ತಿಳಿಯಿತು. ಅವರು ನಮ್ಮ ಶಾಲೆಯಿಂದ ಬಿಟ್ಟು ಹೋಗುವ ದಿನ ನಾವು ಅತ್ತಿದ್ದೆ ಅತ್ತಿದ್ದು. ಆ ದಿನ ನಮ್ಮೊಟ್ಟಿಗೆ ಅವರು ಫೋಟೋ ತೆಗೆಸಿಕೊಂಡು ಹೋಗಿದ್ದರು. ಏಳನೆಯ ತರಗತಿಗೆ ಕಲಿಕೆಯಲ್ಲಿ ಪ್ರಥಮ ಸ್ಥಾನವನ್ನು ಆವಾಗ ಪಡೆದಿದ್ದೆ.
Advertisement
ಇನ್ನೇನು, ಹೈಸ್ಕೂಲ್. ನಮ್ಮ ಹಳ್ಳಿಯಲ್ಲಿ ಏಳನೇ ತರಗತಿಯವರೆಗೆ ಮಾತ್ರ ಇದ್ದದ್ದು. ಇದಕ್ಕಾಗಿ ಬಸ್ಸಿನಲ್ಲಿ ಹೋಗಬೇಕಾಯಿತು. ಮೊದಲು ಭಯವಾದರೂ ನಂತರ ಅಷ್ಟೇನೂ ಗೊತ್ತಾಗಲಿಲ್ಲ. ಆದರೆ ಪ್ರೈಮರಿ ಶಾಲೆಯಲ್ಲಿ ಸರ್ ಹೇಳಿದ ಒಂದು ಮಾತು ಪದೇ ಪದೇ ನೆನಪಿಗೆ ಬರುತ್ತ ಇತ್ತು. ನೀವು ಯಾವುದೇ ಸಂಸ್ಥೆಗೆ ಹೋಗುವಾಗ ಸಾಮಾನ್ಯ ವಿದ್ಯಾರ್ಥಿಗಳಂತೆ ಹೋದ ನೀವು ಆ ಸಂಸ್ಥೆಯಿಂದ ಹೊರ ಹೋಗುವಾಗ ಆ ಸಾಮಾನ್ಯದ ಹಿಂದೆ ಎಕ್ಸಾಎಂಬ ಪದವನ್ನು ಸೇರಿಸಿಕೊಂಡರೆ (ಎಕ್ಸ್‌ಟ್ರಾರ್ಡಿನರಿ) ಆ ಸಂಸ್ಥೆಗೆ ಕೊಡುವ ದೊಡ್ಡ ಗೌರವ. ಹೈಸ್ಕೂಲಿನಲ್ಲಿ ವಿಜ್ಞಾನ ವಿಷಯ ನನ್ನ ಫೇವರೇಟ್ ಆಯಿತು. ಎಷ್ಟು ಅಂತ ಹೇಳಿದರೆ ನಮ್ಮ ಕ್ಲಾಸಿನಲ್ಲಿ ವಿಜ್ಞಾನ ವಿಷಯದ ಯಾವುದೇ ಪ್ರಯೋಗಗಳು ನಡೆಯಬೇಕಾದರೆ ಅದಕ್ಕೆ ಬೇಕಾದ ಮೆಟೀರಿಯಲ್ ಅನ್ನು ತರಲು ನನ್ನನ್ನೇ ಮೇಡಮ್ ಕರೆಯುತ್ತಿದ್ದರು. ವಿಜ್ಞಾನದ ವಿಷಯದಲ್ಲಿ ಅಧಿಕ ಅಂಕ ಬರುತ್ತಿದ್ದರೂ ಉಳಿದ ವಿಷಯದಲ್ಲಿ ಕಡಿಮೆ ಅಂಕ ಬರುತ್ತಿತ್ತು. ಅಂತೂ ಹತ್ತನೆಯ ತರಗತಿಗೆ ಬಂದಾಗ ಎಲ್ಲ ವಿಷಯಗಳು ಮುಖ್ಯವಾದವು. ಹತ್ತನೇ ತರಗತಿಯಲ್ಲಿ ತಿಂದ ಪೆಟ್ಟುಗಳಿಗೆ ಲೆಕ್ಕವೇ ಇಲ್ಲ. ಆ ಪೆಟ್ಟಿನ ಮಹತ್ವ ತಿಳಿದದ್ದು ಹತ್ತನೆಯ ತರಗತಿಯ ಫಲಿತಾಂಶ ಬಂದಾಗ. ನಾನು ತರಗತಿಗೆ ಎರಡನೆಯ ಸ್ಥಾನ ಪಡೆದಿದ್ದೆ.
Related Articles
ಪತ್ರಿಕೋದ್ಯಮ ವಿಭಾಗ
ಎಸ್‌ಡಿಎಂ ಕಾಲೇಜು, ಉಜಿರೆ
Advertisement