ಮಂಗಳೂರು: ದೇವರು ಪ್ರೀತಿ ಸ್ವರೂಪನಾಗಿದ್ದು, ದೇವರ ಮಕ್ಕಳಾದ ಮಾನವರು ಪರಸ್ಪರ ಪ್ರೀತಿ, ದಯೆ, ಗೌರವ, ಸೇವಾ ಮನೋಭಾವನೆ ಹಾಗೂ ಸೌಹಾರ್ದದಿಂದ ಜೀವನ ನಡೆಸ ಬೇಕು ಎಂದು ಬಳ್ಳಾರಿಯ ಬಿಷಪ್ ರೆ| ಡಾ| ಹೆನ್ರಿ ಡಿ’ಸೋಜಾ ಹೇಳಿದರು.
ಅವರು ಬಿಕರ್ನಕಟ್ಟೆಯ ಬಾಲ ಯೇಸು ಪುಣ್ಯಕ್ಷೇತ್ರದಲ್ಲಿ ಶನಿವಾರ ನಡೆದ ವಾರ್ಷಿಕ ಮಹೋತ್ಸವದ ಸಂಭ್ರಮದ ಬಲಿಪೂಜೆಯ ನೇತೃತ್ವ ವಹಿಸಿ ಪ್ರವಚನ ನೀಡಿದರು.
ಮಕ್ಕಳು ಮತ್ತು ಹೆಮ್ಮಕ್ಕಳ ಶೋಷಣೆ, ಅತ್ಯಾಚಾರ ಅನಾಚಾರಗಳನ್ನು ಉಲ್ಲೇ ಖೀಸಿದ ಅವರು ಇಂತಹ ಘಟನೆಗಳಿಗೆ ಅವಕಾಶವಾಗ ದಂತೆ ನೋಡಿಕೊಳ್ಳಬೇಕು. ಮಕ್ಕಳು ದೇವರಿಗೆ ಸಮಾನ; ಅವರನ್ನು ಯಾವತ್ತೂ ನಿಷೂuರತೆ ಯಿಂದ ನಡೆಸಿಕೊಳ್ಳಬಾರದು. ಯುವಜನರಿಗೆ ಹಿರಿಯರು ಸೂಕ್ತ ಮಾರ್ಗದರ್ಶನ ನೀಡಬೇಕು. ನಮ್ಮ ಸಾಂಸ್ಕೃತಿಕ ಮೌಲ್ಯಗಳನ್ನು ಕಾಯ್ದುಕೊಂಡು ಬರ ಬೇಕೆಂದರು.
ಬಾಲ ಯೇಸು ಪುಣ್ಯಕ್ಷೇತ್ರದ ನಿರ್ದೇಶಕ ಫಾ| ಎಲಿಯಾಸ್ ಡಿ’ಸೋಜಾ, ಕಾರ್ಮೆಲ್ ಸಂಸ್ಥೆಯ ಮಠಾಧಿಪತಿ ಫಾ| ಜೋ ತಾವ್ರೊ, ಫಾ| ಪಿಯುಸ್ ಜೇಮ್ಸ್ ಡಿ’ಸೋಜಾ, ಫಾ| ಪ್ರಕಾಶ್ ಡಿ’ಕುನ್ಹಾ, ಫಾ| ಆ್ಯಂಡ್ರು ಡಿ’ಸೋಜಾ ಸೇರಿದಂತೆ 25ಕ್ಕೂ ಮಿಕ್ಕಿ ಧರ್ಮಗುರುಗಳು ಬಲಿಪೂಜೆಯಲ್ಲಿ ಸಹ ಭಾಗಿಗಳಾದರು.
ಶಾಸಕ ಜೆ .ಆರ್. ಲೋಬೊ, ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿ’ಸೋಜಾ, ಕಾರ್ಪೊರೇಟರ್‌ಗಳಾದ ಸಬಿತಾ ಮಿಸ್ಕಿತ್, ಕೇಶವ ಮರೋಳಿ ಉಪಸ್ಥಿತರಿದ್ದರು. ಕ್ಷೇತ್ರಕ್ಕೆ ಆಗಮಿಸಿದ ಭಕ್ತರು ಮೋಂಬತ್ತಿಗಳನ್ನು ಉರಿಸಿ ಪ್ರಾರ್ಥಿಸಿದರು.