Advertisement

ಲವ್‌ ಜೆಹಾದ್‌ ತನಿಖೆಯಾಗಲಿ: ಸುಪ್ರೀಂಗೆ ಕೇರಳ ಮಹಿಳೆ ಅರ್ಜಿ

07:25 AM Oct 09, 2017 | Team Udayavani |

ತಿರುವನಂತಪುರ:  ಲವ್‌ ಜೆಹಾದ್‌ ಕುರಿತು ಎನ್‌ಐಎ ತನಿಖೆ ಅಗತ್ಯವಿಲ್ಲ ಎಂದು ಕೇರಳ ಸರಕಾರ ಸುಪ್ರೀಂ ಕೋರ್ಟ್‌ಗೆ ಅಫಿದವಿತ್‌ ಸಲ್ಲಿಸಿದ ಬೆನ್ನಲ್ಲೇ ಕೇರಳದ ಮಹಿಳೆಯೊಬ್ಬರು ಸುಪ್ರೀಂನಕದ ತಟ್ಟಿದ್ದಾರೆ. ಲವ್‌ ಜೆಹಾದ್‌ ರೋಮಿಯೋಗಳ ಕುರಿತು ಸೂಕ್ತ ತನಿಖೆಯಾಗಬೇಕು ಎಂದು ಬಿಂದು ಕುಮಾರ್‌ ಎಂಬವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. 

Advertisement

ಅಲ್ಲದೆ, ಎನ್‌ಐಎ ತನಿಖೆಯ ಜೊತೆಗೆ ರಾ ಮತ್ತು ಗುಪ್ತಚರ ವಿಭಾಗವನ್ನೂ ಸೇರಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಬಿಂದು ಕುಮಾರ್‌ ಅವರ ಮಗಳು ನಿಮಿಷಾ ಮತ್ತು ಆಕೆಯ ಪತಿ ವಿನ್ಸೆಂಟ್‌ ಇಸ್ಲಾಂಗೆ ಮತಾಂತರಗೊಂಡು, ಅಫ್ಘಾನ್‌ಗೆ ತೆರಳಿ ಐಸಿಸ್‌ಗೆ ಸೇರ್ಪಡೆಯಾಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಕೋರ್ಟ್‌ ಮೆಟ್ಟಿಲೇರಿರುವ ಬಿಂದು, ತನ್ನ ಮಗಳು, ಅಳಿಯ ಮತ್ತು 10 ತಿಂಗಳ ಮಗುವನ್ನು ರಕ್ಷಿಸಿ ಎಂದೂ ಕೋರಿದ್ದಾರೆ. ಇನ್ನೊಂದೆಡೆ, ಸರಕಾರದ ಅಫಿದವಿತ್‌ ಕುರಿತು ಪ್ರತಿಕ್ರಿಯಿಸಿರುವ ಲವ್‌ ಜೆಹಾದ್‌ ಪ್ರಕರಣದ ಕೇಂದ್ರಬಿಂದು ಹದಿಯಾಳ ತಂದೆ, “ನ್ಯಾಯಾಂಗ ದಲ್ಲಿ ನಂಬಿಕೆಯಿದೆ. ನನ್ನ ಮಗಳು ಮಾನವಬಾಂಬ್‌ ಆಗುವುದು ನನಗಿಷ್ಟವಿಲ್ಲ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next