Advertisement

Love Case; ಪೆಟ್ರೋಲ್ ಎರಚಿ ಬೆಂಕಿ: ನಾಲ್ವರಿಗೆ ಗಾಯ, ಮೂವರು ಗಂಭೀರ!

08:43 PM May 27, 2024 | Team Udayavani |

ಮುದ್ದೇಬಿಹಾಳ: ಜಿಲ್ಲೆ ಮುದ್ದೇಬಿಹಾಳದಲ್ಲಿ ಪ್ರೇಮ ಪ್ರಕರಣವೊಂದರಲ್ಲಿ ಪ್ರಿಯತಮೆಯ ಮನೆಯಲ್ಲಿಯೇ ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿ, ಮರಣಾಂತಿಕ ಹಲ್ಲೆಗೆ ಯತ್ನಿಸಿದ ಪರಿಣಾಮ ಪ್ರೇಮಿ ಮತ್ತು ಪ್ರಿಯತಮೆಯ ಕುಟುಂಬದ ಮೂವರು ಸೇರಿ ನಾಲ್ವರಿಗೆ ಸುಟ್ಟ ಗಾಯಗಳಾಗಿದ್ದು ಇವರಲ್ಲಿ ಪ್ರೇಮಿಯೂ ಸೇರಿ ಮೂವರ ಸ್ಥಿತಿ ಗಂಭಿರವಾಗಿದೆ.

Advertisement

ಘಟನೆಯಲ್ಲಿ ಪ್ರೇಮಿ ಢವಳಗಿ ಗ್ರಾಮದ ರಾಹುಲ್ ರಾಮನಗೌಡ ಬಿರಾದಾರಗೆ ತಲೆಗೆ ಭಾರೀ ಪೆಟ್ಟಾಗಿದ್ದು ಶೇ.80ರಷ್ಟು ಸುಟ್ಟ ಗಾಯಗಳಿಂದ ಜಿಲ್ಲಾಸ್ಪತ್ರೆಯ ಐಸಿಯುದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಪ್ರಿಯತಮೆ ಐಶ್ವರ್ಯ ಮದರಿ ಅವರ ಚಿಕ್ಕಪ್ಪ ಮುತ್ತು ಮದರಿ, ಚಿಕ್ಕಮ್ಮ ಸೀಮಾ ಮದರಿ, ಕೆಲಸಗಾರ ನೀಲಕಂಠ ಹರನಾಳ ಅವರಿಗೂ ಸುಟ್ಟ ಗಾಯಗಳಾಗಿವೆ.

ಇವರಲ್ಲಿ ಸೀಮಾ ಪ್ರಾಣಾಪಾಯದಿಂದ ಪಾರಾಗಿದ್ದು ಮುತ್ತು ಮತ್ತು ನೀಲಕಂಠ ಅವರ ಸ್ಥಿತಿ ಗಂಭಿರವಾಗಿದ್ದು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೊಳಗಾಗಿದ್ದಾರೆ.

ಘಟನೆ ಕುರಿತು ಎರಡೂ ಕಡೆಯವರಿಂದ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿ ದೂರು ದಾಖಲಾಗಿದೆ. ಘಟನಾ ಸ್ಥಳಕ್ಕೆ ಬಸವನ ಬಾಗೇವಾಡಿ ಡಿಎಸ್ಪಿ ಬಾಳಪ್ಪ ನಂದಗಾಂವ, ಸಿಪಿಐ ಮಲ್ಲಿಕಾರ್ಜುನ ತುಳಸೀಗೇರಿ, ಪಿಎಸೈಗಳಾದ ಸಂಜಯ್ ತಿಪ್ಪರಡ್ಡಿ, ಎಸ್.ಆರ್.ನಾಯಕ ಅವರು ಭೇಟಿ ನೀಡಿ ತನಿಖೆ ಕೈಕೊಂಡಿದ್ದಾರೆ.

ವಿಜಯಪುರದಿಂದ ಆಗಮಿಸಿದ್ದ ವಿಶೇಷ ತಂಡ ಘಟನಾ ಸ್ಥಳದಲ್ಲಿನ ಬೆರಳಚ್ಚು ಸೇರಿ ಹಲವು ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಈ ಘಟನೆಯಲ್ಲಿ ಯಾರು ಪೆಟ್ರೋಲ್ ಎರಚಿ ಯಾರ ಹತ್ಯೆಗೆ ಯತ್ನಿಸಿದರು ಅನ್ನೋದು ಪೊಲೀಸ್ ತನಿಖೆಯಿಂದ ಹೊರಬರಬೇಕಿದೆ.

Advertisement

ಕಳೆದ 5-6 ವರ್ಷಗಳಂದ ಪರಸ್ಪರ ಪ್ರೇಮಿಸುತ್ತಿದ್ದ ಐಶ್ವರ್ಯಾ ಮತ್ತು ರಾಹುಲ್ ಅವರ ಪ್ರೇಮ ಸಂಬಂಧ ಕಳೆದ ವರ್ಷದಿಂದ ಐಶ್ವರ್ಯಾಳ ನಿರಾಕರಣೆ ಹಿನ್ನೆಲೆ ಸ್ಥಗಿತಗೊಂಡಿದ್ದರಿಂದ ರಾಹುಲ್ ಕುಪಿತಗೊಂಡಿದ್ದು ಈ ಘಟನೆಗೆ ಕಾರಣ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next