Advertisement

ಪತಂಜಲಿಯಲ್ಲಿ 3,000 ಕೋಟಿ ಹೂಡುವ ಫ್ರೆಂಚ್‌ ಲಕ್ಷುರಿ ಸಮೂಹ

12:12 PM Jan 11, 2018 | udayavani editorial |

ಹೊಸದಿಲ್ಲಿ : ವಿಶ್ವ ವಿಖ್ಯಾತ ಯೋಗ ಗುರು ಬಾಬಾ ರಾಮ್‌ ದೇವ್‌ ಅವರ ಬಹು ಕೋಟಿ ಉದ್ಯಮ ”ಪತಂಜಲಿ ಆಯುರ್ವೇದ” ದಲ್ಲಿ 3,250 ಕೋಟಿ ರೂ.ಗಳನ್ನು ಹೂಡುವ ಆಸಕ್ತಿಯನ್ನು ಫ್ರೆಂಚ್‌ ಲಕ್ಷುರಿ ಸಮೂಹ ಎಲ್‌ವಿಎಂಎಚ್‌ ಮೊಯೆಟ್‌ ಹೆನ್‌ಸೇ – ಲೂಯಿಸ್‌ ವುಯಿಟನ್‌ ಸಂಸ್ಥೆ  ಪ್ರಕಟಿಸಿದೆ. 

Advertisement

ಪತಂಜಲಿ ವಕ್ತಾರ ಎಸ್‌ ಕೆ ಗುಪ್ತಾ ಅವರು ಈ ವಿಷಯವನ್ನು ಟ್ವಿಟರ್‌ ಮೂಲಕ ಬಹಿರಂಗಪಡಿಸಿದ್ದಾರೆ.

“ನಾವು ಹೇಗೆ ನಮ್ಮ ಅಭಿವೃದ್ಧಿಗಾಗಿ ವಿದೇಶಿ ತಂತ್ರಜ್ಞಾನವನ್ನು ಬಳಸುತ್ತೇವೋ ಹಾಗೆಯೇ ನಮ್ಮ ದೇಶದ ಲಾಭಕ್ಕಾಗಿ ನಾವು ವಿದೇಶಿ ಬಂಡವಾಳ ಬಳಸುವುದಕ್ಕೆ ಸಂಕೋಚ ಪಡುವುದಿಲ್ಲ ಎಂದು ಪತಂಜಲಿಯ ಅಧ್ಯಕ್ಷರಾಗಿರುವ ಆಚಾರ್ಯ ಬಾಲಕೃಷ್ಣ ಅವರು ಹೇಳಿದ್ದಾರೆ” ಎಂದು ಗುಪ್ತಾ ತಿಳಿಸಿದರು.  

“ನಮ್ಮಲ್ಲಿ ಬಂಡವಾಳ ಹೂಡಬಯಸುವ ಫ್ರೆಂಚ್‌ ವಿಲಾಸೀ ಸಂಸ್ಥೆಯ ಹೂಡಿಕೆಯನ್ನು ನಾವು ನಮ್ಮ ಶರತ್ತುಗಳ ನೆಲೆಯಲ್ಲಿ ಸ್ವೀಕರಿಸುತ್ತೇವೆ; ಹಾಗೆಂದು ಅವರಿಗೆ ನಮ್ಮ ಕಂಪೆನಿಯ ಶೇರುಗಳನ್ನಾಗಲೀ, ಹಿತಾಸಕ್ತಿಯ ಪಾಲನ್ನಾಗಲೀ ನಾವು ನೀಡುವುದಿಲ್ಲ’ ಎಂದು ಬಾಲಕೃಷ್ಣ ಹೇಳಿರುವುದಾಗಿ ಗುಪ್ತಾ ತಿಳಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next