ನವದೆಹಲಿ: ಲೌಡ್ ಸ್ಪೀಕರ್ ವಿವಾದದ ನಡುವೆಯೇ ಮಹಾರಾಷ್ಟ್ರದಲ್ಲಿ 1,500ಕ್ಕೂ ಅಧಿಕ ಮಸೀದಿಗಳ ಹಾಗೂ 1.300 ದೇವಸ್ಥಾನಗಳ ಧ್ವನಿವರ್ಧಕಗ ಬಳಸಲು ಅನುಮತಿ ನೀಡಲಾಗಿತ್ತು ಎಂದು ಮಹಾರಾಷ್ಟ್ರ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಮೂಡಿಗೆರೆ: ಕಾರಿನ ಮೇಲೆ ಬಿದ್ದ ಮರ; ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಪಾರು
“ರಾಜ್ಯದಲ್ಲಿ ಮುಂಬಯಿ ನಗರ ಹೊರತುಪಡಿಸಿ ಅಂದಾಜು 1,500ಕ್ಕೂ ಅಧಿಕ ಮಸೀದಿಗಳಿಗೆ ಹಾಗೂ 1,300 ದೇವಸ್ಥಾನಗಳಿಗೆ ಧ್ವನಿವರ್ಧಕಗಳ ಬಳಕೆಗೆ ಅನುಮತಿ ನೀಡಲಾಗಿದೆ. 2,300ಕ್ಕೂ ಅಧಿಕ ಜನರ ವಿರುದ್ಧ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿದೆ. ಅದೇ ರೀತಿ ಮೇ 3, 4ರಂದು 7,000 ಜನರಿಗೆ ಅಪರಾಧ ದಂಡ ಸಂಹಿತೆ ಸೆಕ್ಷನ್ 149ರ ಅಡಿ ನೋಟಿಸ್ ಜಾರಿ ಮಾಡಲಾಗಿದೆ ಎಂದು ಮಹಾರಾಷ್ಟ್ರ ಪೊಲೀಸರು ಮಾಹಿತಿ ನೀಡಿರುವುದಾಗಿ ವರದಿ ಹೇಳಿದೆ.
ನಾಸಿಕ್ ಜಿಲ್ಲೆಯಲ್ಲಿ ಕೋಮು ಉದ್ನಿಗ್ನತೆ ಸೃಷ್ಟಿಸಿದ್ದ ಆರೋಪದಡಿ ಮಹಾರಾಷ್ಟ್ರ ನವನಿರ್ಮಾಣ ಸೇನಾ ಪಕ್ಷದ 150 ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ವರದಿ ತಿಳಿಸಿದೆ. ಮಸೀದಿಗಳಲ್ಲಿನ ಲೌಡ್ ಸ್ಪೀಕರ್ ತೆರವುಗೊಳಿಸಲು ಎಂಎನ್ ಎಸ್ ವರಿಷ್ಠ ರಾಜ್ ಠಾಕ್ರೆ ಮಹಾರಾಷ್ಟ್ರ ಸರ್ಕಾರಕ್ಕೆ ಮೇ 3ರವರೆಗೆ ಅಂತಿಮ ಗಡುವು ನೀಡಿದ್ದರು.
ಮೇ 4ರಂದು ಮಸೀದಿಗಳಲ್ಲಿ ಆಜಾನ್ ಕೂಗಿದಾಗ ಲೌಡ್ ಸ್ಪೀಕರ್ ಬಳಸಿ ಹನುಮಾನ್ ಚಾಲೀಸಾ ಪ್ರಸಾರ ಮಾಡಿ ಎಂದು ರಾಜ್ ಠಾಕ್ರೆ ಕಾರ್ಯಕರ್ತರಿಗೆ ಕರೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಎಂಎನ್ ಎಸ್ ಕಾರ್ಯಕರ್ತರನ್ನು ಬಂಧಿಸಲಾಗಿತ್ತು ಎಂದು ವರದಿ ತಿಳಿಸಿದೆ.