Advertisement

ಕಮಲ ಜಾತ್ರೆ ಇಂದು ಉದ್ಘಾಟನೆ

11:02 AM Mar 03, 2018 | Team Udayavani |

ಕಲಬುರಗಿ: ನಗರದ ಏಷಿಯನ್‌ ಮಾಲ್‌ ಪಕ್ಕದ ಜಾಗೆಯಲ್ಲಿ ಆಯೋಜಿಸಲಾಗಿರುವ ಬಿಜೆಪಿ ದಕ್ಷಿಣ ಮತಕ್ಷೇತ್ರದ ಕಮಲ ಜಾತ್ರೆಯೇನೋ ಶುಕ್ರವಾರದಿಂದ ಆರಂಭವಾಯಿತು. ಆದರೆ, ಅದರ ಉದ್ಘಾಟನೆ ಸಮಾರಂಭ ಮಾತ್ರ ನೆರವೇರಲಿಲ್ಲ. ಉದ್ಘಾಟನೆಗೆ ಬಣ್ಣದೋಕುಳಿ ಕಾಡಿತು.

Advertisement

ಒಂದೆಡೆ ಬಣ್ಣದೋಕುಳಿ ಇನ್ನೊಂದೆಡೆ ದಿನ ಸರಿಯಾಗಿಲ್ಲ. ಇವತ್ತು ಜಾತ್ರೆ ಆರಂಭಿಸುವುದು ಸರಿಯಲ್ಲ ಎನ್ನುವ ನಂಬಿಕೆಯೋ ಅಥವಾ ಮೂಢನಂಬಿಕೆಯೋ ಒಟ್ಟಾರೆಯಾಗಿ ಜಾತ್ರೆಗೆ ಅಧಿಕೃತ ಉದ್ಘಾಟನೆ ಭಾಗ್ಯ ಸಿಗಲಿಲ್ಲ.. ಬದಲಿಗೆ ಮಾ. 3ರಂದು ಬೆಳಗ್ಗೆ 11:00ಕ್ಕೆ ಉದ್ಘಾಟನೆ ನೆರವೇರಿಸಲು ಆಯೋಜಕರು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

ಅದರ ಮಧ್ಯದಲ್ಲೂ ಜನರಂತೂ ಬಣ್ಣದೋಕುಳಿ ಮುಗಿಸಿಕೊಂಡು ಸಂಜೆ ಹೊತ್ತಿನಲ್ಲಿ ಜಾತ್ರೆ ಕಡೆಗೆ ಹರಿದು ಬಂದರು. ಜಾತ್ರೆಯಲ್ಲಿ ಮಕ್ಕಳಂತೂ ಪ್ರಧಾನಿಮೋದಿ ಭಾವಚಿತ್ರದೊಂದಿಗೆ ಸೆಲ್ಪಿ ಕ್ಲಿಕ್ಕಿಸಿಕೊಂಡರು. ಜಾತ್ರೆಯಲ್ಲಿ ಭರ್ಜರಿ ಆಟಿಕೆ ವಸ್ತುಗಳು ಹಾಕಲಾಗಿದೆ. ಜೋಕಾಲಿ, ಜಪ್ಪಿಂಗ್‌ ಬಲೂನ್‌, ಜಾದೂಗಾರರು, ಬಂದೂಕು ಆಟ, ಭವಿಷ್ಯ ಹೇಳುವವರು, ಇತರೆ ಆಟಗಳು ಸೇರಿದಂತೆ ಪಾನಿಪುರಿ, ವಿಶಿಷ್ಟ ಭಜಿಗಳು, ಚಾಟ್‌ ಮಸಾಲೆ ತಿನಿಸುಗಳು, ಚಹಾ ಮಾರಾಟ ವ್ಯವಸ್ಥೆ ಮಾಡಲಾಗಿದೆ.

ಚಹಾ ಮಾಡುವ ಸ್ಥಳದಲ್ಲಿ ಭವಿಷ್ಯದ ರಾಜಕೀಯ, ಬಿಜೆಪಿ ಕಾರ್ಯಸಾಧನೆಗಳು ಕುರಿತು ಮಾಹಿತಿ ವಿನಿಮಯ ಮಾಡಿಕೊಳ್ಳಬಹುದು. ಅಲ್ಲದೆ, ಕೇಂದ್ರದಲ್ಲಿರುವ ನರೇಂದ್ರ ಮೋದಿ ಅವರು ಬಿಜೆಪಿ ಸರಕಾರ ಮಾಡಿರುವ ಸಾಧನೆಗಳು ಕುರಿತು ಜನರು ಮಾಹಿತಿ ಪಡೆಯಬಹುದು. ಮುಖಂಡರಾದ ಜಿಡಿಎ ಮಾಜಿ ಅಧ್ಯಕ್ಷ ದಯಾಘನ್‌ ಧಾರವಾಡಕರ್‌, ಚಂದು ಪಾಟೀಲ, ವಿಜಯಕುಮಾರ ಸೇವಾಲಾನಿ, ಮಹಾದೇವ, ಶಿವಯೋಗಿ ನಾಗನಹಳ್ಳಿ, ಶ್ರೀನಿವಾಸ ದೇಸಾಯಿ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next