ಅಫಜಲಪುರ: ಸರ್ಕಾರ ರೈತರಿಗೆ ಅನೂಕುಲವಾಗಲಿ ಎನ್ನುವ ಉದ್ದೇಶದಿಂದ ತೊಗರಿ ಖರೀದಿ ಕೇಂದ್ರಗಳನ್ನು ತೆರೆದಿದೆ. ಆದರೆ ಪ್ರಭಾವಿಗಳ ಪ್ರಭಾವದಿಂದಾಗಿ ಸಣ್ಣ ರೈತರು ವಾರಗಟ್ಟಲೇ ಕಾಯುವಂತಾಗಿದೆ. ಹೀಗಾಗಿ ತೊಗರಿ ಖರೀದಿ ಕೇಂದ್ರದಲ್ಲಿ ಗದ್ದಲ್ಲ ಸೃಷ್ಟಿಯಾಗಿ ಖರೀದಿಸ್ಥಗಿತಗೊಂಡಿದೆ.
ಪಟ್ಟಣದ ಎಪಿಎಂಸಿ ಯಾರ್ಡ್‌ನಲ್ಲಿರುವ ತೊಗರಿ ಖರೀದಿ ಕೇಂದ್ರದಲ್ಲಿ ಶನಿವಾರದಂದು ತೊಗರಿ ಮಾರಾಟ ಮಾಡಲು ರೈತರು ಸರತಿಯಲ್ಲಿನಿಂತಿದ್ದರು. ಆದರೆ ಖರೀದಿ ಕೇಂದ್ರದಲ್ಲಿ ಪ್ರಭಾವಿಗಳ ತೊಗರಿ ಖರೀದಿ ಮಾಡಲಾಗುತ್ತಿದೆ, ಟೊಕನ್ ಇದ್ದವರ ತೊಗರಿ ಖರೀದಿಸದೆ ನಿನ್ನೆ ಮೊನ್ನೆ ಬಂದ ಟೋಕನ್ ನಂಬರ್ ಪುನಃ ಪುನಃ ಬರುತ್ತದೆ.
ಸಣ್ಣ ರೈತರು ಸರತಿಯಲ್ಲೇ ನಿಲ್ಲುವಂತಾಗಿದೆ. ಹೀಗಾಗಿ ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿವೆ. ಮನೆ, ಮಕ್ಕಳನ್ನು ನೋಡಲಾಗುತ್ತಿಲ್ಲ ಎಂದುರೈತರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಸರಿಯಾಗಿ ಸರತಿ ಸಾಲಿನಲ್ಲಿ ನಿಂತು ರೈತರು ತೊಗರಿ ಮಾರಾಟ ಮಾಡಿದರೆ ನಮಗೂತೊಂದರೆಯಾಗುವುದಿಲ್ಲ, ರೈತರ ತೊಗರಿಯನ್ನು ವ್ಯವಸ್ಥಿತವಾಗಿ ಮಾರಾಟ ಮಾಡಬಹುದಾಗಿದೆ.
ಆದರೆ ಅಡ್ಡಾದಿಡ್ಡಿಯಾಗಿ ನಿಲ್ಲುವುದು ಮಾಡುತ್ತಿರುವುದರಿಂದ ತೊಗರಿ ಖರೀದಿ ನಿಲ್ಲಿಸಲಾಗಿದೆ ಎಂದು ಖರೀದಿ ಕೇಂದ್ರದ ಕೆ.ಜಿಮುರಾಳಕರ್ ಹೇಳುತ್ತಾರೆ. ಸ್ಥಳಕ್ಕೆ ಸಹಾಯಕ ಕೃಷಿ ನಿರ್ದೇಶಕ ಶರಣಗೌಡ ಪಾಟೀಲ ಭೇಟಿ ನೀಡಿ, ಸಮಸ್ಯೆ ಬಗೆಹರಿಸಿ ಖರೀದಿ ಪ್ರಾರಂಭಿಸುವಂತೆ ಸೂಚಿಸಿದರು.
ರೈತರಾದ ಸಂತೋಷ ಅಳ್ಳಗಿ, ಗುರು ಮ್ಯಾಳೇಸಿ,ಈರಣ್ಣ ಅಳ್ಳಗಿ, ಸಿದ್ರಾಮ ನಿಲಂಗಿ, ರುದ್ರಗೌಡ ಪಾಟೀಲ, ಶಾಂತಾಬಾಯಿ ಮಾಲಿಪಾಟೀಲ, ಹಣಮಂತ ಕಲಶೇಟ್ಟಿ, ಮಲ್ಲಿಕಾರ್ಜುನ ಸಾಂಪೂರ ಹಾಗೂ ಇತರರು ಇದ್ದರು.