ಉಪ್ಪಿನಂಗಡಿ: ತಣ್ಣೀರು ಪಂತ ಗ್ರಾಮ ಪಂಚಾಯತ್ ತ್ಯಾಜ್ಯ ನಿರ್ವಹಣೆ ಹೆಸರಿನಲ್ಲಿ ಪ್ರತೀ ಅಂಗಡಿ ಹಾಗೂ ಮನೆಗಳಿಂದ ಶುಲ್ಕ ಪಡೆದು ಸರಿಯಾಗಿ ನಿರ್ವಹಿಸದೆ ಹೊಂಡವೊಂದಕ್ಕೆ ಎಸೆದ ಪರಿಣಾಮ ದುರ್ನಾತಬೀರುತ್ತಿದೆ.
ಅಳಕೆ ಸಮೀಪದ ಪದೆಂಜಲಾಪು ಎಂಬಲ್ಲಿ ಈ ಘಟನೆ ನಡೆದಿದ್ದು ನಾಯಿ,ಕಾಗೆ, ಇತರ ಪಕ್ಷಿಗಳ ಸಹಿತ ಕಾಡು ಹಂದಿ ಕೂಡ ತ್ಯಾಜ್ಯ ಎಳೆದಾಡುವ ಸ್ಥಿತಿ ಮಾಮೂಲಾಗಿದೆ.
ಈ ಕುರಿತು ಗ್ರಾಮಸ್ಥರು ಪಂಚಾಯತ್‌ಗೆ ದೂರು ನೀಡಿದಾಗ ಅಲ್ಲಿ ಎಸೆದ ತ್ಯಾಜ್ಯಕ್ಕೆ ಮಣ್ಣ ಸುರಿದು ಅಲ್ಲೆ ಸನಿಹದ ಕೆರೆಯೊಂದನ್ನು ತ್ಯಾಜ್ಯ ಎಸೆಯಲುಆಯ್ಕೆ ಮಾಡಿಕೊಂಡಿರುವುದು ಈಗ ಸಾಂಕ್ರಾಮಿಕ ರೋಗ ಸೃಷ್ಟಿಸುವ ಕೇಂದ್ರವನ್ನಾಗಿ ಮಾರ್ಪಾಡಾಗಿದೆ. ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಲ್ಯ ಎಂಬಲ್ಲಿ ತ್ಯಾಜ್ಯ ಸಂಸ್ಕರಣ ಘಟಕವಿದ್ದರೂ ಅಲ್ಲಿ ಸರಿಯಾಗಿ ವಿಲೇವಾರಿ ಆಗುತ್ತಿಲ್ಲ.
ಕ್ರಮ ಕೈಗೊಳ್ಳುತ್ತಿಲ್ಲ
ಪದೆಂಜಲಾಪು ಜಾಗ ಪಂಚಾಯತ್‌ಗೆ ಸೇರಿದಾಗಿದ್ದು ಈ ಹಿಂದೆ ಇಲ್ಲಿ ಕೆಂಪು ಕಲ್ಲುಕೋರೆ ಇತ್ತು. ಕೋರೆ ಕೆಲಸ ಸ್ಥಗಿತದ ಬಳಿಕ ಅದು ಕೆರೆಯಾಗಿದೆ. ಇಲ್ಲಿನ ಸಮಸ್ಯೆ ಬಗ್ಗೆ ಗ್ರಾಪಂ ಗಮನಕ್ಕೆ ತಂದ್ದಿದ್ದೇನೆ. ಪರಿಶೀಲಿಸುವ ಭರವಸೆ ಮಾತ್ರ ಸಿಕ್ಕಿದೆ. ಕ್ರಮಕೈಗೊಳ್ಳುತ್ತಿಲ್ಲ.
– ಪ್ರಭಾಕರ, ಪೊಸಂದೋಡಿ