Advertisement
ಇದೀಗ ಮಲ್ಪೆ ಬೀಚ್‌ನಲ್ಲಿ ಹೇರಳ ಪ್ರಮಾಣದಲ್ಲಿ ಕಸ ಬಿದ್ದಿದೆ. ಮಲ್ಪೆ ಸೀವಾಕ್‌ನಿಂದ ಬೀಚ್‌ವರೆಗೂ ಹರಡಿಕೊಂಡಿದೆ. ಕೆಲವಡೆ ದಪ್ಪ ದಪ್ಪ ಪದರಾಗಿ ಬಿದ್ದಿದೆ. ಇದರಲ್ಲಿ ಕೊಳೆತ ಗಿಡ, ಮರಗಳ ಎಲೆಗಳು ಮಾತ್ರವಲ್ಲದೆ ನಾನಾ ರೀತಿಯ ಪ್ಲಾಸ್ಟಿಕ್ ವಸ್ತುಗಳು ಹೆಚ್ಚಿನ ಪ್ರಮಾಣದಲ್ಲಿ ಸೇರಿರುವುದು ಜನರಲ್ಲಿ ಆತಂಕ ಮೂಡಿಸಿದೆ. ಇತ್ತೀಚೆಗೆ ಬಿದ್ದಿರುವ ಭಾರೀ ಮಳೆಗಾಳಿಯಿಂದಾಗಿ ಈ ತಾಜ್ಯಗಳು ನದಿ ನೀರಿನೊಂದಿಗೆ ಸಮುದ್ರ ಸೇರಿತ್ತು. ಈಗ ಸಮುದ್ರ ಉಬ್ಬರದ ಸಮಯದಲ್ಲಿ ಸಾಗರ ಗರ್ಭ ಸೇರಿದ್ದ ಈ ಎಲ್ಲ ಕಸಕಡ್ಡಿಗಳು ಮಲ್ಪೆ ಬೀಚ್ ಕಡಲತೀರದಲ್ಲಿ ರಾಶಿಯಾಗಿ ಬಿದ್ದಿದೆ.
Related Articles
Advertisement
ಪ್ಲಾಸ್ಟಿಕ್‌ತ್ಯಾಜ್ಯದಿಂದ ಪರಿಸರ ಅತೀ ಹೆಚ್ಚು ಹಾನಿಗೀಡಾಗುತ್ತಿವೆ. ವಿವಿಧ ಸಂಘ, ಸಂಸ್ಥೆಗಳು, ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಆಗಾಗ ಬೀಚ್‌ಸ್ವತ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳುತ್ತಲೇ ಇರುತ್ತಾರೆ. ಆದರೆ ಪ್ರತಿ ಬಾರಿಯೂ ರಾಶಿಗಟ್ಟಲೆ ಪ್ಲಾಸ್ಟಿಕ್‌ತ್ಯಾಜ್ಯ ದೊರೆಯುತ್ತಿರುವುದು ಜನರ ನಿರ್ಲಕ್ಷಕ್ಕೆ ಸಾಕ್ಷಿಯಾಗಿದೆ ಎನ್ನಲಾಗುತ್ತಿದೆ.
ಮೀನುಗಾರರಿಗೂ ತಲೆನೋವಾದ ಪ್ಲಾಸ್ಟಿಕ್ ತ್ಯಾಜ್ಯ
ಸಮುದ್ರದಲ್ಲಿ ಮೀನಿನ ಬಲೆಗೆ ಪ್ಲಾಸ್ಟಿಕ್ ತ್ಯಾಜ್ಯಗಳು ಸಿಲುಕುತ್ತಿದೆ ಎನ್ನಲಾಗುತ್ತಿದೆ. ಕೆಲವೊಂದು ಸಲ ಮೀನುಗಾರಿಕೆ ನಡೆಸುವಾಗ ಮೀನಿಗಿಂತ ಹೆಚ್ಚಾಗಿ ಪ್ಲಾಸ್ಟಿಕ್ ತ್ಯಾಜ್ಯಗಳೇ ಬಲೆಗೆ ಬೀಳುತ್ತದೆ ಎನ್ನುತ್ತಾರೆ ಮೀನುಗಾರರು. ಇದರಿಂದ ಮೀನುಗಾರರಿಗೆ ತೊಂದರೆಯಾಗುತ್ತಿದೆ. ಇಷ್ಟೊಂದು ಪ್ಲಾಸ್ಟಿಕ್ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರೂ ಜನರ ನಿರ್ಲಕ್ಷದಿಂದಾಗಿ ಸಮುದ್ರದಲ್ಲಿ ಪ್ಲಾಸ್ಟಿಕ್ ಸಿಗುತ್ತಿರುವುದು ಆತಂಕಕಾರಿ ವಿಷಯವೇ ಸರಿ.
ತತ್‌ಕ್ಷಣ ತೆರವು ಮಾಡಬೇಕುಹೊಳೆಯ ಮೂಲಕ ಸಮುದ್ರ ಸೇರುವ ಪ್ಲಾಸ್ಟಿಕ್ ತಾಜ್ಯಗಳಲ್ಲದೆ ಸಮುದ್ರದಲ್ಲಿಯೂ ಬಲೆ ಇನ್ನಿತರ ತಾಜ್ಯಗಳು ಕಡಲತೀರವನ್ನು ಸೇರುತ್ತಿವೆ. ಆದರೆ ಅದು ಮತ್ತೆ ಕಡಲನ್ನು ಸೇರುವ ಮೊದಲು ತ್ಯಾಜ್ಯವನ್ನು ತೆರವು ಮಾಡಬೇಕಾಗಿದೆ. ಜಿಲ್ಲಾಡಳಿತ ಈಮಳೆಗಾಲದಲ್ಲಿ ಆಗಾಗ ಇಲ್ಲಿ ಬೀಳುವ ಕಸವನ್ನು ಸ್ವತ್ಛ ಮಾಡುವ ಮೂಲಕ ಅದರ ಸೌಂದರ್ಯವನ್ನು ಉಳಿಸಬೇಕಾಗಿದೆ.