Advertisement

ಕುದೂರಿನಲ್ಲಿ ಫ್ಲೆಕ್ಸ್‌, ಬ್ಯಾನರ್‌ಗಳ ದರ್ಬಾರ್

03:34 PM Jul 09, 2022 | Team Udayavani |

ಕುದೂರು: ಗ್ರಾಪಂ ವ್ಯಾಪ್ತಿಯ ರಸ್ತೆಯ ಬದಿ ಮತ್ತು ಬಸ್‌ ನಿಲ್ದಾಣದ ಎಲ್ಲೆಂದರಲ್ಲಿ ಫ್ಲೆಕ್ಸ್‌, ಬ್ಯಾನರ್‌ಗಳನ್ನು ಹಾಕಲಾಗಿದೆ. ಆದರೆ, ಗ್ರಾಪಂ ನಿರ್ಲಕ್ಷ್ಯದಿಂದ ಜನಸಾಮಾನ್ಯರು ತೊಂದರೆ ಅನುಭವಿಸುವಂತಾಗಿದೆ.

Advertisement

ಕುದೂರು ಪಟ್ಟಣದ ಖಾಸಗಿ ವ್ಯಕ್ತಿಗಳು ಹಾಗೂ ಸಂಘ-ಸಂಸ್ಥೆಗಳು ಪ್ರಚಾರಕ್ಕಾಗಿ ಬಸ್‌ ನಿಲ್ದಾಣ, ಸಾರ್ವಜನಿಕರು ಸಂಚಾರ ಮಾಡುವ ಜಾಗದಲ್ಲಿ ಬೇಕಾಬಿಟ್ಟಿಯಾಗಿ ಬ್ಯಾನರ್‌ಗಳನ್ನು ಅಳವಡಿಸಿದ್ದಾರೆ.

ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ತೊಂದರೆ ಉಂಟಾಗುತ್ತಿದೆ. ಆದರೆ, ಗ್ರಾಪಂ ಅಧಿಕಾರಿಗಳು ಇದಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂಬತ್ತೆ ನೋಡಿಯೂ ನೋಡದಂತೆ ದಿನವೀಡಿ ಇದೇ ರಸ್ತೆಗಳಲ್ಲಿ ಓಡಾಡುತ್ತಿದ್ದಾರೆ. ಆದ್ದರಿಂದ ಗ್ರಾಪಂ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೇಕಾಬಿಟ್ಟಿ ಬ್ಯಾನರ್ಹಾವಳಿ: ಯಾವುದೇ ಬ್ಯಾನರ್‌ಗಳನ್ನು ಅಳವಡಿಸಬೇಕಾದರೆ ಹಣ ಪಾವತಿ ಮಾಡಬೇಕು ಎಂಬ ನಿಯಮವಿದೆ. ಆದರೆ, ಪ್ರಭಾವಿ ವ್ಯಕ್ತಿಗಳು ತಮ್ಮ ರಾಜಕೀಯ ಪ್ರಭಾವ ಬಳಸಿ, ಬ್ಯಾನರ್‌ಗಳ ಟ್ಯಾಕ್ಸ್‌ ಕಟ್ಟದೆ ಹಾಗೇ ಹಾಕುತ್ತಾರೆ. ನಾವೂ ಏನೂ ಮಡಲು ಆಗುವುದಿಲ್ಲ. ಹೇಳಿದರೂ ಸಹ ಯಾರು ಕೇಳುವುದಿಲ್ಲ ಎಂದು ಅಧಿಕಾರಿಗಳು ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ.

ಗ್ರಾಪಂ ನಿರ್ಲಕ್ಷ್ಯ: ಖಾಸಗಿ ವ್ಯಕ್ತಿಗಳು ಬ್ಯಾನರ್‌ ಗಳನ್ನು ವಿದ್ಯುತ್‌ ಕಂಬ ಸೇರಿದಂತೆ ಇನ್ನತಿರ ಸ್ಥಳಗಳಲ್ಲಿ ಅಳವಡಿಸುತ್ತಾರೆ. ಇದರಿಂದ ಏನಾದರೂ ಅವಘಡಗಳು ಸಂಭವಿಸಿದರೆ ಇದಕ್ಕೆ ಯಾರು ಹೊಣೆ. ಇದು ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಹೀಗೆ ಆಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಗ್ರಾಪಂ ವ್ಯಾಪ್ತಿಯಲ್ಲಿ ಯಾರಾದರೂ ಬ್ಯಾನರ್‌ಗಳನ್ನು ಅಳವಡಿಸಿದರೆ, ಬ್ಯಾನರ್‌ ಹಾಕಲು ಅವರು ಪಾವತಿಸಿದ ರಶೀದಿಯ ಪ್ರತಿಯನ್ನು ಅದೇ ಬ್ಯಾನರ್‌ನ ಕೊನೆ ಭಾಗದಲ್ಲಿ ಪ್ರಿಂಟ್‌ ಬರಬೇಕು. ಅದರಲ್ಲಿ ಯಾವ ದಿನಾಂಕದಿಂದ ಎಲ್ಲಿಯವರೆಗೆ ಅಳವಡಿಸಲು ಅನುಮತಿ ನೀಡಲಾಗಿದೆ ಎಂದು ನಮೂದಿಸಿ ಹಾಗೂ ಅಳವಡಿಸುವಾಗ ಸಾರ್ವಜನಿಕರಿಗೆ ತೊಂದರೆಯಾಗದ ಜಾಗದಲ್ಲಿ ಅಳವಡಿಸದಂತೆ ಮುನ್ನೇಚರಿಕೆ ನೀಡಬೇಕು. ಇದರಿಂದ ಅಕ್ರಮವಾಗಿ ಅಳವಡಿಸುವ ಬ್ಯಾನರ್‌ಗಳಿಗೆ ಕಡಿವಾಣ ಬೀಳುತ್ತದೆ. ಗ್ರಾಪಂಗೆ ಆದಾಯವೂ ಹೆಚ್ಚಾಗುತ್ತದೆ. ಅಲ್ಲದೆ, ಸಾರ್ವಜನಿಕರಿಗೆ ತೊಂದರೆ ಆಗುವುದು ತಪ್ಪಿಸಬಹುದು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಕೆ

ಲವರು ಅನಧಿಕೃತವಾಗಿ ಗ್ರಾಪಂಗೆ ಮಾಹಿತಿ ಇಲ್ಲದಂತೆ ಜನರಿಗೆ ತೊಂದರೆಯಾಗುವ ಸ್ಥಳಗಳಲ್ಲಿ ಬ್ಯಾನರ್‌ ಅಳವಡಿಸುತ್ತಿದ್ದಾರೆ. ಅಂತಹ ಬ್ಯಾನರ್‌ ಗಳನ್ನು ತೆರವುಗೊಳಿಸಲಾಗುವುದು. – ಲೋಕೇಶ್‌, ಪಿಡಿಒ, ಕುದೂರು ಗ್ರಾಪಂ

– ಕೆ.ಎಸ್‌.ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.

Next