Advertisement

ಕೋವಿಡ್-19 ಸಂಕಷ್ಟ: ಬೆಳೆಗೆ‌ ಬೆಲೆ ಸಿಗದೇ‌ ಆತ್ಮಹತ್ಯೆಗೆ ಶರಣಾದ ರೈತ

02:26 PM May 16, 2020 | keerthan |

ಚಿಕ್ಕಬಳ್ಳಾಪುರ: ಮೂರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಹೂವು ಬೆಳೆಗೆ ಸೂಕ್ತ ಮಾರುಕಟ್ಟೆ ಸಿಗದೇ‌ ತೀವ್ರ ಆರ್ಥಿಕ ನಷ್ಟ ಅನುಭವಿಸಿದ ಹಿನ್ನೆಲೆಯಲ್ಲಿ ರೈತನೊಬ್ಬ ವಿಷ‌ ಸೇವಿಸಿ‌ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

Advertisement

ಚಿಕ್ಕಬಳ್ಳಾಪುರ ತಾಲೂಕಿನ ಕತ್ತರಿಗುಪ್ಪೆ ಗ್ರಾಮದ ನಿವಾಸಿ ರಾಮಪ್ಪ (55) ವಿಷ ಸೇವಿಸಿ ತನ್ನ ತೋಟದಲ್ಲಿ ಕಳೆದ‌ ಶುಕ್ರವಾರ ರಾತ್ರಿ ಆತ್ಮಹತ್ಯೆ ಗೆ ಶರಣಾಗಿದ್ದಾರೆ.

ತನ್ನ ಮೂರು ಎಕರೆ ಜಮೀನಲ್ಲಿ ಹೂವು ಬೆಳೆದಿದ್ದು ಕೋವಿಡ್-19 ಲಾಕ್ ಡೌನ್ ಪರಿಣಾಮ ತಾನು ಸಾಲ ಮಾಡಿ ಬೆಳೆದ ಹೂವುಗೆ ಸೂಕ್ತ ಬೆಲೆ ಹಾಗೂ ಮಾರುಕಟ್ಟೆ ಸಿಗಲಿಲ್ಲ ಎಂದು ರೈತ ರಾಮಪ್ಪ ಮನನೊಂದು ಆತ್ಮಹತ್ಯೆ ಮಾಡುಕೊಂಡಿದ್ದಾರೆ. ಪಕ್ಕದ‌ ದಿಬ್ಬೂರು ಗ್ರಾಮೀಣ ಬ್ಯಾಂಕ್ ನಲ್ಲಿ ಐದು ಲಕ್ಷ‌ ರೂ ಸಾಲ ಮಾಡಿದ್ದಾರೆಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next