Advertisement
– ಎರಡೂ ದೇಶಗಳ ನಡುವಿನ ಯುದ್ಧ ವಿಚಾರ ದಲ್ಲಿ ಆರಂಭದಿಂದಲೂ ಅಲಿಪ್ತ ನೀತಿಯನ್ನು ಪಾಲಿ ಸಿರುವ ಭಾರತದ ನಿಲುವನ್ನು ಮತ್ತೂಮ್ಮೆ ಸಮರ್ಥಿಸಿ ಕೊಂಡು ಪ್ರಧಾನಿ ಮೋದಿ ಆಡಿರುವ ಮಾತಿದು.
Related Articles
ಇದೇ ವೇಳೆ ಜರ್ಮನಿಯಲ್ಲಿ ಜೂನ್ ತಿಂಗಳಲ್ಲಿ ನಡೆಯಲಿರುವ ಜಿ-7 ಶೃಂಗಕ್ಕೆ ಪ್ರಧಾನಿ ಮೋದಿಯವರನ್ನು ಓಲಾಫ್ ಆಹ್ವಾನಿಸಿದ್ದಾರೆ. ರಷ್ಯಾವನ್ನು ಏಕಾಂಗಿಯಾಗಿಸಲು ಐರೋಪ್ಯ ರಾಷ್ಟ್ರಗಳು ನಡೆಸುತ್ತಿರುವ ತೀವ್ರ ಪ್ರಯತ್ನದ ನಡುವೆ ಈ ಬೆಳವಣಿಗೆ ಕುತೂಹಲ ಮೂಡಿಸಿದೆ.
Advertisement
ಹಸುರು ಜಲಜನಕ ಕಾರ್ಯಪಡೆಭಾರತ ಮತ್ತು ಜರ್ಮನಿ ನಡುವೆ “ಹಸುರು ಜಲಜನಕ ಕಾರ್ಯಪಡೆ’ ರಚನೆಗೆ ಸಂಬಂಧಿಸಿದ ಒಪ್ಪಂದ ನಡೆದಿದೆ. ಹಸುರು ಜಲಜನಕದ ಉತ್ಪಾದನೆ, ಬಳಕೆ, ಸಂಗ್ರಹ ಮತ್ತು ವಿತರಣೆಯಲ್ಲಿ ಪರಸ್ಪರ ಸಹಕಾರವನ್ನು ವೃದ್ಧಿಸುವ ನಿಟ್ಟಿನಲ್ಲಿ ಈ ಕಾರ್ಯಪಡೆ ಕಾರ್ಯನಿರ್ವಹಿಸಲಿದೆ. ಇದಕ್ಕಾಗಿ 10 ಶತಕೋಟಿ ಯೂರೋಗಳನ್ನು ನೀಡುವುದಾಗಿ ಜರ್ಮನಿ ಘೋಷಿಸಿದೆ. ಎರಡೂ ದೇಶಗಳಲ್ಲಿ ಸುಲಭವಾಗಿ ಉದ್ಯೋಗ, ಉನ್ನತ ಶಿಕ್ಷಣ ಮತ್ತು ವೃತ್ತಿಪರ ತರಬೇತಿ ಕೈಗೊಳ್ಳಲು ಅನುಕೂಲವಾಗುವಂಥ ಒಪ್ಪಂದಕ್ಕೂ ಸಹಿ ಹಾಕಲಾಗಿದೆ. ಐರೋಪ್ಯ ಒಕ್ಕೂಟದ ಜತೆಗಿನ ಮುಕ್ತ ವ್ಯಾಪಾರ ಒಪ್ಪಂದದ ವಿಚಾರದಲ್ಲಿ ಕ್ಷಿಪ್ರ ಪ್ರಗತಿ ಸಾಧಿಸಲು ಭಾರತ ಬದ್ಧವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.