ಪಾಂಡವಪುರ: ವರ್ಷದ ಮೊದಲ ಮಳೆ ಅಶ್ವಿನಿತಾಲೂಕಿಗೆ ಕೃಪೆ ತೋರಿದ್ದು, ಎರಡು ದಿನಗಳಿಂದವಿವಿಧೆಡೆ ಧಾರಾಕಾರವಾಗಿ ಸುರಿದು ಕೆಲವು ರೈತರಮೊಗದಲ್ಲಿ ಸಂತಸ ತರಿಸಿದ್ದರೆ, ಇನ್ನು ಕೆಲವರಿಗೆ ತೀವ್ರನಷ್ಟ ತಂದೊಡ್ಡಿದೆ.ಆಲಿಕಲ್ಲು, ಬಿರುಗಾಳಿ ಸಹಿತ ಸುರಿದ ಮಳೆಯಿಂದತಾಲೂಕಿನ ಪ್ರಮುಖ ಬೆಳೆಯಾದ ಕಬ್ಬು, ತರಕಾರಿ,ತೋಟದ ಬೆಳೆಗಳಿಗೆ ತೀವ್ರ ಹಾನಿಯಾಗಿದೆ.
ಕೆಲವುದಿನಗಳು ಮಳೆ ಸುರಿಯದಿದ್ದರೆ ಫಸಲು ರೈತರಕೈಸೇರುತ್ತಿತ್ತು. ಆದರೆ, ಈಗ ಲಕ್ಷಾಂತರ ರೂ. ಖರ್ಚುಮಾಡಿ ಬೆಳೆದಿದ್ದ ಬೆಳೆ ಮಳೆಯಲ್ಲಿ ತೊಯ್ದುಹೋಗಿದ್ದು, ಕೈಬಂದ ತುತ್ತು ಬಾಯಿಗೆ ಬರದಂತಾಗಿರೈತರು ತಲೆಯ ಮೇಲೆ ಕೈಹೊತ್ತು ಕೂರುವಂತಹಪರಿಸ್ಥಿತಿ ನಿರ್ಮಾಣವಾಗಿದೆ.
ಟೊಮೆಟೋ, ಮೆಣಸಿನಕಾಯಿ ಬೆಳೆ ನಷ್ಟ:ತಾಲೂಕಿನ ಬೇವಿನಕುಪ್ಪೆ ಗ್ರಾಮದಲ್ಲಿ ಆಲಿಕಲ್ಲು ಮಳೆಸುರಿದ ಪರಿಣಾಮ ಗ್ರಾಮದ ಲಿಂಗರಾಜು ಎಂಬರೈತರು ತಮ್ಮ ಒಂದೂವರೆ ಎಕರೆ ಪ್ರದೇಶದಲ್ಲಿಬೆಳೆದಿದ್ದ ಟೊಮೆಟೋ ಹಾಗೂ ಒಂದೂವರೆ ಎಕರೆಜಮೀನಿನಲ್ಲಿ ಬೆಳೆದಿದ್ದ ದಪ್ಪ ಮೆಣಸಿನಕಾಯಿ ಬೆಳೆನಾಶವಾಗಿದ್ದು, ಸುಮಾರು ಒಂದು ಲಕ್ಷಕ್ಕೂ ಹೆಚ್ಚುನಷ್ಟ ಸಂಭವಿಸಿದೆ.
ಕಬ್ಬು ಧರೆಗೆ: ಕಟ್ಟೇರಿ ಗ್ರಾಮದ ಚಂದ್ರಶೇಖರ್‌ಎಂಬ ರೈತರಿಗೆ ಸೇರಿದ ಒಂದು ಎಕರೆ ಪ್ರದೇಶದಲ್ಲಿನಕಬ್ಬು ಬಿರುಗಾಳಿಗೆ ಧರೆಗುರುಳಿದ್ದು, ಬೆಳೆಗಾರರಿಗೆಲಕ್ಷಾಂತರ ರೂ. ನಷ್ಟ ಉಂಟಾಗಿದೆ.ಉರುಳಿದ ಮರ, ವಿದ್ಯುತ್ ಕಂಬ: ಮಳೆ,ಬಿರುಗಾಳಿ ಬೆಳೆಯನಷ್ಟೇ ನಾಶ ಮಾಡಿಲ್ಲ, ಮರ,ವಿದ್ಯುತ್‌ಗಳನ್ನೂ ನೆಲಕ್ಕೆ ಉರುಳಿಸಿದೆ. ಇದರಿಂದಮನೆ, ತಡೆಗೋಡೆಗೆ ಹಾನಿಯಾಗಿದೆ. ಪಾಂಡವಪುರಪಟ್ಟಣದಲ್ಲಿ ವಿಜಯ ಕಾಲೇಜಿನ ಪಕ್ಕದ ರಸ್ತೆಯಲ್ಲಿದ್ದಮರವೊಂದು ಬಿರುಗಾಳಿಗೆ ಮುರಿದು ಪುರಸಭೆಯಕ್ವಾಟ್ರಸ್ ಮನೆ ಹಾಗೂ ಕಾಂಪೌಂಡ್ ಮೇಲೆ ಬಿದ್ದಿದೆ.ಇದರಿಂದ ಕಟ್ಟಡಕ್ಕೆ ಅಲ್ಪ ಸ್ವಲ್ಪ ಹಾನಿ ಆಗಿದೆ.ಇದೇವೇಳೆ ಚಾಮುಂಡೇಶ್ವರಿ ವಿದ್ಯುತ್‌ಸರಬರಾಜು ನಿಗಮಕ್ಕೆ ಸೇರಿದ ತಾಲೂಕಿನ ಕೆಲಹಳ್ಳಿಗಳಲ್ಲಿ ವಿದ್ಯುತ್ ತಂತಿ ಮೇಲೆ ಮರದಕೊಂಬೆಗಳು ಮುರಿದು ಬಿದ್ದು, ಅಲ್ಪ ಪ್ರಮಾಣದಲ್ಲಿನಷ್ಟ ಉಂಟಾಗಿ ವಿದ್ಯುತ್ ಸರಬರಾಜುವಿನಲ್ಲಿವ್ಯತ್ಯಯ ಉಂಟಾಗಿತ್ತು. ಇದರಿಂದ ಕೆಲವುಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಇಲ್ಲದೆಪರದಾಡುವಂತಾಯಿತು.ಮಳೆಯಿಂದಾಗಿ ಕೆಲವು ಗ್ರಾಮಗಳಲ್ಲಿ ಇಡೀ ದಿನವಿದ್ಯುತ್ ಇಲ್ಲದೆ, ಮೊಬೈಲ್‌ಗಳು ಚಾರ್ಜಿಂಗ್‌ಇಲ್ಲದೆ, ಸ್ವಿಚ್‌ಆಫ್ ಆಗಿದ್ದವು. ಇದರಿಂದ ಆಲ್‌ಲೈನ್‌ತರಗತಿ ಕೇಳಲು ವಿದ್ಯಾರ್ಥಿಗಳಿಗೆ ತೊಂದರೆಯೂಆಗಿತ್ತು.