Advertisement

ಫಡ್ನವೀಸ್‌ ಸರಕಾರದಿಂದ ರಾಜ್ಯದ ಆರ್ಥಿಕ ಶಿಸ್ತಿಗೆ ನಷ್ಟ: ಪವಾರ್‌

10:15 AM Dec 23, 2019 | Sriram |

ಪುಣೆ: ದೇವೇಂದ್ರ ಫಡ್ನವೀಸ್‌ ಅವರ ಸರಕಾರವು 2017-18ರ ಸಾಲಿನಲ್ಲಿ ವಿವಿಧ ಕೆಲಸಕ್ಕಾಗಿ ಬಳಿಸಿದ 65ಸಾವಿರ ಕೋಟಿ ರೂ. ಗಳ ಲೆಕ್ಕಾಚಾರ ದೊರೆಯಲಿಲ್ಲ ಎಂದು ಸಿಎಜಿ ತನ್ನ ವರದಿಯಲ್ಲಿ ಇಂತಹ ಆರೋಪಗಳನ್ನು ಮಾಡಿದೆ.

Advertisement

ಆದ್ದರಿಂದ, ರಾಜ್ಯದ ಆರ್ಥಿಕ ಶಿಸ್ತನ್ನು ನಷ್ಟಮಾಡುವ ಕಾರ್ಯವು ಫಡ್ನವೀಸ್‌ ಅವರ ಸರಕಾರದ ಅವಧಿಯಲ್ಲಿ ನಡೆದಿದೆ ಎಂದು ಎನ್‌ಸಿ ಪಿ ಅಧ್ಯಕ್ಷ ಶರದ್‌ ಪವಾರ್‌ ಹೇಳಿದ್ದಾರೆ.

ಪುಣೆಯಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಅವರು, ಈ ಬಗ್ಗೆ ತನಿಖೆ ನಡೆಸಲು ಮತ್ತು ಸತ್ಯವನ್ನು ಸಾರ್ವಜನಿಕರ ಮುಂದೆ ಪ್ರಸ್ತುತಪಡಿಸಲು ಪ್ರಸ್ತುತ ಸರ‌ಕಾರ ತಜ್ಞರ ಸಮಿತಿಯನ್ನು ನೇಮಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಫಡ್ನವಿಸ್‌ ಸರಕಾರ 2017-18ರ ಹಣಕಾಸು ವರ್ಷದಲ್ಲಿ ಸುಮಾರು 65,000 ಕೋಟಿ ರೂ. ದುರುಪಯೋಗಪಡಿಸಿದ ಬಗ್ಗೆ ಕಂಟ್ರೋಲ್‌ ಮತ್ತು ಆಡಿಟರ್‌ ಜನರಲ್‌ (ಸಿಎಜಿ) ಮಾಹಿತಿ ನೀಡಿದೆ. 2018ರ ಮಾರ್ಚ್‌ 31ರಂದು 65,921 ಕೋಟಿ ರೂ. ಗಳ ಉಪಯೋಗದ ಪ್ರಮಾಣಪತ್ರ ಸಲ್ಲಿಸಲಿಲ್ಲ. ಆದ್ದರಿಂದ ನಿಧಿಯ ದುರುಪಯೋಗ ಮಾಡಿದ ಅಥವಾ ಅಕ್ರಮ ವ್ಯವಹಾರದ ಅಪಾಯವಿದೆ ಎಂದು ಸಿಎಜಿ ವರದಿ ಮಾಡಿದೆ.

ಈ ದಾಖಲೆಗಳನ್ನು ಪಡೆಯುವ ಮೂಲಕ ಶರದ್‌ ಪವಾರ್‌ ಅವರು, ಫಡ್ನವೀಸ್‌ ಅವರನ್ನು ಗುರಿಯಾಗಿಸಿಕೊಂಡರು. ಆರ್ಥಿಕ ಶಿಸ್ತು ರಾಜ್ಯದ ಒಂದು ಲಕ್ಷಣವಾಗಿತ್ತು. ಆದರೆ ಫಡ್ನವೀಸ್‌ ಆಳ್ವಿಕೆಯಲ್ಲಿ ಅದು ನಾಶವಾಗಿದೆ. ಸಮಗ್ರ ತನಿಖೆಗೆ ಸರಕಾರವನ್ನು ಒತ್ತಾಯಿಸುತ್ತಿದೆ ಎಂದರು.

Advertisement

ರೈತರ ಸಾಲಮನ್ನಾ ವಿಷಯದ ಬಗ್ಗೆ ಪ್ರತಿಭಟನಾಕಾರರ ಟೀಕೆಗೆ ಪವಾರ್‌ ಪ್ರತಿಕ್ರಿಯಿಸಿದರು. ಐದು ವರ್ಷಗಳ ಕಾಲ ಸರಕಾರವನ್ನು ನಡೆಸುವವರು ಅಂತಹ ನಿರ್ಧಾರಗಳು ತಕ್ಷಣತೆಗೆದುಕೊಳ್ಳಲು ಸಾಧ್ಯವಿಲ್ಲ. ಇದನ್ನು ಅರಿತುಕೊಳ್ಳಬೇಕು ಎಂದು ಹೇಳಿದ ಶರದ್‌ ಪವಾರ್‌ ಅವರು, ಸರಕಾರ ಈ ನಿಟ್ಟಿನಲ್ಲಿ ತಕ್ಷಣದ ನಿರ್ಧಾರ ತೆಗೆದುಕೊಂಡಿದೆ ಎಂದರು. ವಿಧಾನಸಭೆಯ ಅಧಿವೇಶನದ ನಂತರ,ಮಹಾವಿಕಾಸ್‌ ಆಘಾಡಿಯ ಸರಕಾರದ ಕ್ಯಾಬಿನೆಟ್‌ ವಿಸ್ತರಿಸಲಿದೆ. ಧನಗಾರ ಮೀಸಲಾತಿ ಕುರಿತು ಕೇಂದ್ರ ಸರಕಾರದ ಪಾತ್ರ ಅನುಕೂಲಕರವಾಗಿಲ್ಲ ಎಂದರು.

ಮಹಾ ವಿಕಾಸ್‌ ಆಘಾಡಿಯು ಮತದಾರರನ್ನು ಮೋಸಗೊಳಿಸುತ್ತಿದೆ ಮತ್ತು ಈ ಸರಕಾರವು ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಎಂಎನ್‌ಎಸ್‌ ಅಧ್ಯಕ್ಷ ರಾಜ್‌ ಠಾಕ್ರೆ ಹೇಳಿದ್ದರು. ಈ ಸರ‌ಕಾರ ಬಂದು ಹದಿನೈದು ದಿನಗಳು ಆಗಲಿಲ್ಲ ಆವಾಗಲೇ ರಾಜ್‌ ಠಾಕ್ರೆ ತೀರ್ಮಾನಿಸಿದರು. ನನಗೆ ರಾಜ್‌ಠಾಕ್ರೆ ಅವರ ಬಗ್ಗೆ ಹೆಮ್ಮೆ ಏನಿಸುತ್ತದೆ ಎಂದು ಹೇಳಿದ ಶರದ್‌ ಪವಾರ್‌ ಅವರು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನೀರಾವರಿ ಹಗರಣದಲ್ಲಿ ಅಜಿತ್‌ ಪವಾರ್‌ ಅವರಿಗೆ ಕ್ಲೀನ್‌ ಚಿಟ್‌ ದೊರೆತ ನಂತರ, ಕೆಲವರೂ, ನನಗೂ ಮತ್ತು ದಾವೂದ್‌ ಜತೆ ಸ್ನೇಹವಿರುವ ಆರೋಪ ಹೊರಿಸಿದ್ದರು. ಇಂತಹ ಆರೋಪಗಳು ಅಗಾಧವಾಗಿದ್ದು ಏನೂ ಸಾಬೀತಾಗಿಲ್ಲ ಎಂದು ಶರದ್‌ ಪವಾರ್‌ ಹೇಳಿದ್ದಾರೆ. ಉದ್ಧವ್‌ ಠಾಕ್ರೆ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮೊದಲು ಅಜಿತ್‌ ಪವಾರ್‌ ಅವರು ‘ಕ್ಲೀನ್‌ ಚಿಟ್‌’ ಪಡೆದರು ಎಂದು ಶರದ್‌ ಪವಾರ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next