Advertisement

ಮನಸು ಸೋತಿದೆ ಮುನಿಸು ಗೆದ್ದಿದೆ…

12:05 PM Dec 12, 2017 | |

ಬೊಗಸೆ ತುಂಬ ಪ್ರೀತಿ ತಂದವನು, ಅದನ್ನು ನನ್ನ ಬೊಗಸೆಗೆ ಹಾಕದೇ ಅತ್ತ -ಇತ್ತ ಚೆಲ್ಲಿಬಿಟ್ಟೆಯಲ್ಲ. ಅದೇ ಕಾರಣದಿಂದ ; ಮಣ್ಣುಪಾಲಾಗಿದೆ ಪ್ರೀತಿ. ಖಾಲಿಯಾದ ನಿನ್ನ ಬೊಗಸೆಯಲ್ಲಿ ನನ್ನ ಕಣ್ಣೀರು ತುಂಬಿ ಹರಿದರೂ ನೀನು ಮಾತ್ರ ಕಲ್ಲಾಗಿದ್ಯಾಕೆ? ಅದರಲ್ಲೊಮ್ಮೆ ನಿನ್ನ ಪ್ರತಿಬಿಂಬ ನೋಡಿಕೊಂಡಿದ್ದರೆ ನನ್ನ ಪ್ರೀತಿ ಎಂಥದ್ದೆಂದು ತಿಳಿದಿರುತ್ತಿತ್ತು.

Advertisement

ನನ್ನ ಪ್ರೀತಿಯ ಹುಡುಗಾ..
ಮನಸು ಮುನಿಸುಗಳ ಯುದ್ಧದಲ್ಲಿ ಮನಸು ಗೆಲ್ಲುವ ಬದಲು ಮುನಿಸು ಗೆದ್ದಿತಲ್ಲಾ ಗೆಳೆಯಾ..ಅದಕ್ಕೇ ವಿಷಾದವೆನಿಸುತ್ತಿದೆ ನನಗೆ. ಮನಸು ಗೆದ್ದಿದ್ದರೆ ಪ್ರೀತಿ ಎನ್ನಬಹುದಿತ್ತು . ಮುನಿಸು ಗೆದ್ದಿದೆ. ಇದಕ್ಕೆ ಏನು ಹೇಳಲಿ ನೀನೇ ಹೇಳು? ಜೊತೆಯಾಗಿ ನಡೆದ ದಾರಿಯಲ್ಲಿ ನಿನ್ನ ಹೆಜ್ಜೆ ಗುರುತುಗಳಿವೆ, ನೀನಿಲ್ಲ.ನೀನಿಲ್ಲದೇ ಕ್ಷಣವೂ ಇರಲಾರದ ನಾನು ಯಶಸ್ವಿಯಾಗಿ ಎಷ್ಟೋ ದಿನಗಳನ್ನು ಪೂರೈಸಿದ್ದೇನೆ. ಆದರೆ ಕೇವಲ ನನ್ನ ಸ್ವಾಭಿಮಾನ, ಸ್ವಂತಿಕೆಗಳಿಗೆ ಮಾತ್ರ ಯಶಸ್ವಿ ದಿನಗಳನ್ನು ಪೂರೈಸಿದ ಸಂತೋಷವಿದೆ. ನನ್ನ ಮನಸ್ಸು, ಹೃದಯಕ್ಕಲ್ಲ. ನನ್ನ ತಲೆದಿಂಬಿಗೆ ಮಾತ್ರ ಗೊತ್ತು ನನ್ನ ನೋವು, ಸಂಕಟ ದುಃಖ ದುಮ್ಮಾನಗಳು.

 ಬೊಗಸೆ ತುಂಬ ಪ್ರೀತಿ ತಂದವನು, ಅದನ್ನು ನನ್ನ ಬೊಗಸೆಗೆ ಹಾಕದೇ ಅತ್ತ -ಇತ್ತ ಚೆಲ್ಲಿಬಿಟ್ಟೆಯಲ್ಲ. ಅದೇ ಕಾರಣದಿಂದ;  ಮಣ್ಣುಪಾಲಾಗಿದೆ ಪ್ರೀತಿ. ಖಾಲಿಯಾದ ನಿನ್ನ ಬೊಗಸೆಯಲ್ಲಿ ನನ್ನ ಕಣ್ಣೀರು ತುಂಬಿ ಹರಿದರೂ ನೀನು ಮಾತ್ರ ಕÇÉಾಗಿದ್ಯಾಕೆ? ಅದರಲ್ಲೊಮ್ಮೆ ನಿನ್ನ ಪ್ರತಿಬಿಂಬ ನೋಡಿಕೊಂಡಿದ್ದರೆ ನನ್ನ ಪ್ರೀತಿ ಎಂಥ¨ªೆಂದು ತಿಳಿದಿರುತ್ತಿತ್ತು.

   ನನಗಿಂತ ತುಂಬಾ ಎತ್ತರವಿದ್ದ ನಿನ್ನ ಕಿರುಬೆರಳು ಹಿಡಿದು ನಾನು ನಿನ್ನೊಡನೆ ಹೊರಟಾಗೆಲ್ಲಾ, ಪರಿಚಯದವರು “ಏನೋ ಇಷ್ಟು ಪುಟ್ಟ ಹುಡುಗಿಯ ಕೈ ಹಿಡಿದುಬಿಟ್ಟೆ ನೀನು?’ ಎಂದು ನಿನ್ನನ್ನು ಅಣಕಿಸುತ್ತಿದ್ದರು. ಪಾರ್ಕ್‌ನಲ್ಲಿ ನಾವಿಬ್ಬರೂ ಯಾವಾಗಲೂ ಕೂರುತ್ತಿದ್ದುದು ಒಂದೇ ಬೆಂಚ್‌ ಮೇಲೆ. ಯಾರಾದರೂ ಕುಳಿತಿದ್ದರೆ ಅವರು ಎದ್ದು ಹೋಗುವವರೆಗೂ ಕಾದು, ಅದೇ ಬೆಂಚ್‌ ಮೇಲೆ ಹತ್ತು ನಿಮಿಷ ಕುಳಿತು ಹಳೆ ದಿನಗಳ ಮೆಲುಕು ಹಾಕುತ್ತಿ¨ªಾಗಿನ, ಆನಂದವನ್ನು ಹೇಗೆ ತಾನೇ ಮರೆಯಲಿ? ಆ ಬೆಂಚ್‌ ಈಗ ಖಾಲಿಯಿದ್ದರೂ ಕುಳಿತುಕೊಳ್ಳಬೇಕೆನಿಸುತ್ತಿಲ್ಲ ನನಗೆ. ನೀನಿಲ್ಲದೇ ಎಲ್ಲ ಶೂನ್ಯವೆನಿಸಿದೆ ಗೆಳೆಯಾ.

     ಹಸಿರು ಸೀರೆಯುಟ್ಟು ನಿನ್ನ ಕೈ ಹಿಡಿದು ಬರುವಾಗ ನೋಡುತ್ತಿದ್ದ ಮನೆ ಪಕ್ಕದಲ್ಲಿ ಹೂ ಮಾರುವಾಕೆ, “ಎಷ್ಟು ಚೆನ್ನಾಗಿದೆ ಜೋಡಿ!’ ಅಂತ ಯಾವಾಗಲೂ ಅನ್ನುತ್ತಿದ್ದಳು. ಈಗಲೂ ನೀನೆಲ್ಲಿ ಅಂತ ಕೇಳುತ್ತಾಳೆ ಹುಡುಗಾ. ಅರ್ಧದಾರಿಯಲ್ಲಿ ಬಿಟ್ಟು ಹೋದ ಎಂದು ಹೇಳಲಾ? ತಿಳಿಯುತ್ತಿಲ್ಲ.

Advertisement

      ಎಷ್ಟೋ ಬಾರಿ ನಮ್ಮಿಬ್ಬರಿಗೂ ಜಗಳವಾದಾಗ, ನಿನ್ನದೇ ತಪ್ಪಿದ್ದರೂ ನೀನು ನನ್ನೊಡನೆ ಮಾತು ಬಿಡುತ್ತಿ¨ªೆ. ಕೇವಲ….ಕೇವಲ… ಅರ್ಧ ಗಂಟೆ ನನ್ನಿಂದ ನಿನ್ನ ಜೊತೆ ಮಾತಿಲ್ಲದೆ ಬದುಕಲಾಗುತ್ತಿರಲಿಲ್ಲ ನನಗೆ. ಎಷ್ಟೋ ಬಾರಿ ನನ್ನ ಸ್ವಾಭಿಮಾನ, ಸ್ವಂತಿಕೆಗಳು ಅಡ್ಡ ಬಂದು ನನ್ನನ್ನು ತಡೆಯುತ್ತಿದ್ದರೂ ನಿಮಗಿಂತ ನನ್ನ ಹುಡುಗ ಮುಖ್ಯ ಎಂದು ಅವುಗಳನ್ನು ಒದ್ದು ನಿನ್ನ ಕಾಲಡಿಗೆ ಬಂದಿದ್ದೇನೆ ನಾನು. ನನ್ನ ಈ ಒಂದು ವೀಕ್‌ನೆಸ್‌ ನಿನ್ನನ್ನು ಇನ್ನೂ ಗಟ್ಟಿ ಕÇÉಾಗಿಸಿತ್ತು. ಈಗಲೂ ಅದನ್ನೇ ಮಿಸ್‌ಯೂಸ್‌ ಮಾಡಿಕೊಳ್ಳುತ್ತಿದಿಯಾ ಅಲ್ವಾ ನೀನು? ನಿನ್ನ ಪ್ರಕಾರ ಪ್ರೀತಿಯಂದರೆ ನನ್ನ ವೀಕ್‌ನೆಸ್‌ನ್ನು ಈ ರೀತಿ ಮಿಸ್‌ಯೂಸ್‌ ಮಾಡಿಕೊಳ್ಳವುದಾ? 

 ನಿನ್ನ ಅರ್ಥ ಮಾಡಿಕೊಳ್ಳುವ ಸಾಹಸದಲ್ಲಿ ನನ್ನತನವೆನ್ನುವುದನ್ನೇ ಎಷ್ಟೋ ದಿನಗಳು ಮರೆತಿ¨ªೆ. ತಪ್ಪುಗಳನ್ನು ಎಲ್ಲರೂ ಮಾಡುತ್ತಾರೆ. ಆದರೆ ತಿದ್ದಿ ನಡೆದರೆ ಅದಕ್ಕೊಂದು ಅರ್ಥವಿರುತ್ತದೆ.ನಿನ್ನ ತಪ್ಪನ್ನೂ ಸಮರ್ಥನೆ ಮಾಡಿಕೊಳ್ಳುವ ನೀನು, ನಿನಗಿರುವಂತೆ ನನಗೂ ಸ್ವಾಭಿಮಾನ ಸ್ವಂತಿಕೆಗಳಿವೆ ಎಂದೇಕೆ ಅರ್ಥ ಮಾಡಿಕೊಳ್ಳಲಿಲ್ಲ ….?

     ಕೇವಲ ನಿಟ್ಟುಸಿರುಗಳನ್ನು  ಬಳುವಳಿಯಾಗಿ  ಕೊಟ್ಟು ಹೋದೆ ನೀನು. ಕಾರಣ ಏನೇ ಇರಲಿ.. ನಾ ನಿನ್ನ ಪ್ರೀತಿಗೆ ದ್ರೋಹವನ್ನಂತೂ ಮಾಡಿಲ್ಲ.ಅದೂ ನಿನಗೆ ಗೊತ್ತು …ಸಂಬಂಧವನ್ನೇ ಮುರಿದುಕೊಳ್ಳುವ ಸನ್ನಾಹದಲ್ಲಿರುವ ನಿನಗೆ ಅದು ಹೇಗೆ ತಾನೇ ಅರ್ಥವಾಗುತ್ತದೆ? ನಿನ್ನ ಕಿರುಬೆರಳು ಹಿಡಿದು ನಡೆಯಲು ಹವಣಿಸುತ್ತಿದ್ದೇನೆ ನಾನು…ಪಾನಿಪುರಿ ಅಂಗಡಿಯ ಭಯ್ನಾ  ನಮಗೋಸ್ಕರ ಒಂದು ಪ್ಲೇಟ್‌ ಸ್ಪೆಷಲ… ಪಾನಿಪುರಿ ತಯಾರಿಸುತ್ತಿ¨ªಾನೆ…ಒಂದೇ ತಟ್ಟೆಯಲ್ಲಿ ನಾವಿಬ್ಬರೂ ಪಾನಿಪುರಿಯನ್ನ ಮತ್ತೆ ತಿನ್ನುವ ಆಸೆ ಹೊತ್ತು ಕಾಯುತ್ತಿದ್ದೇನೆ ನಾನು…ಪಾರ್ಕ್‌ನಲ್ಲಿ ನಾವು ಜೋಡಿಯಾಗಿ ಮೊದಲು ಕುಳಿತ ಬೆಂಚ… ಮೇಲೆ ಇನ್ನು  ಯಾರೂ ಬಂದು ಕುಳಿತಿಲ್ಲ, ನಮಗೋಸ್ಕರ  ಖಾಲಿಯಿದೆ. ನಮ್ಮ ನಗುವನ್ನು ಆನಂದಿಸಲು ಅದೂ ಕಾಯುತಿದೆ ಯಾರಾದರೂ ಬಂದು  ಕೂರುವ ಮುನ್ನ..ಬಾ.. ನಾವಿಬ್ಬರೂ ಕುಳಿತುಕೊಳ್ಳೋಣ… ಮುನಿಸು ಮರೆತು ಮನಸುಗಳ ಒಂದಾಗಿಸೋಣ. 

ಇಂತಿ
ನಿನ್ನವಳು..
ಮಮತಾ. ಚೆನ್ನಪ್ಪ.ಮ್ಯಾಗೇರಿ

Advertisement

Udayavani is now on Telegram. Click here to join our channel and stay updated with the latest news.

Next