Advertisement

Hyderabad; ಢಿಕ್ಕಿಯಾದ ಬಳಿಕ 2 ಕಿ.ಮೀ. ಬೈಕ್ ಎಳೆದೊಯ್ದ ಲಾರಿ: ಸವಾರ?

08:48 PM Apr 17, 2024 | Team Udayavani |

ಹೈದರಾಬಾದ್: ಲಾರಿಯೊಂದು ಢಿಕ್ಕಿ ಹೊಡೆದ ಎರಡು ಕಿಲೋಮೀಟರ್ ದೂರದವರೆಗೆ ಬೈಕ್ ಎಳೆದೊಯ್ದ ಘಟನೆಯ ವಿಡಿಯೋ ವೈರಲ್ ಆಗಿದೆ.

Advertisement

ಹೈದರಾಬಾದ್‌ನ ಓಲ್ಡ್ ಸಿಟಿಯಲ್ಲಿ ಮಂಗಳವಾರ ಸಂಜೆ ಘಟನೆ ನಡೆದಿದ್ದು. ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಢಿಕ್ಕಿ ಬಳಿಕ ಲಾರಿಯ ಕಿಟಕಿಯ ಬಳಿ ಹಿಡಿದು ನೇತಾಡಿದ್ದಾನೆ.

ವಿಚಾರವೆಂದರೆ, ಮೊದಲು ಲಾರಿ ಢಿಕ್ಕಿ ಹೊಡೆದಾಗ ಬೈಕ್ ಸವಾರ ಜಗಳವಾಡಿದ್ದಾನೆ. ಇದರಿಂದ ಕುಪಿತಗೊಂಡ ಲಾರಿ ಚಾಲಕ ಬೈಕ್‌ನ್ನು ಅಡಿಗೆ ಹಾಕಿ 2 ಕಿ.ಮೀ ದೂರದವರೆಗೆ ಎಳೆದೊಯ್ದಿದ್ದಾನೆ. ಎದುರಿಗೆ ಮತ್ತೊಂದು ವಾಹನ ಬಂದಾಗ ಲಾರಿ ನಿಂತಿದೆ. ಬೈಕ್ ಸವಾರನ ದೂರಿನ ಮೇರೆಗೆ ಪೊಲೀಸರು ಲಾರಿ ಚಾಲಕನನ್ನು ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next