Advertisement

ಟೆಂಪೋ ಟ್ರಾವೆಲರ್‌ಗೆ ಲಾರಿ ಡಿಕ್ಕಿ: ಮೂವರ ಸಾವು

09:18 AM Apr 23, 2019 | Team Udayavani |

ಚಿತ್ರದುರ್ಗ: ಟೈರ್‌ ಸಿಡಿದು ಕೆಟ್ಟು ನಿಂತಿದ್ದ ಟೆಂಪೋ ಟ್ರಾವೆಲರ್‌ನ ಹಿಂಬದಿಗೆ ಲಾರಿ ವೇಗವಾಗಿ ಡಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟು ಆರು ಜನ ಗಾಯಗೊಂಡ ಘಟನೆ ನಗರದ ಜೆಎಂಐಟಿ ವೃತ್ತದ ಸಮೀಪ ಸೋಮವಾರ ಬೆಳಗಿನ ಜಾವ ಸಂಭವಿಸಿದೆ.

Advertisement

ಬೆಂಗಳೂರು ಮೂಲದ ಕಾರ್ತಿಕ್‌ ಗೌಡ (20), ಹರ್ಷ (20) ಹಾಗೂ ಶ್ರೀನಿ  (20) ಮೃತಪಟ್ಟವರು. ಇವರೆಲ್ಲರೂ ಬೆಂಗಳೂರಿನ ಬಸವನಗುಡಿಯ ವಿಜಯ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಕಾಂ ಓದುತ್ತಿದ್ದರು. ಏ. 19 ರಂದು 13 ವಿದ್ಯಾರ್ಥಿಗಳು ಬೆಂಗಳೂರಿನಿಂದ ಗೋಕರ್ಣಕ್ಕೆ ಟೆಂಪೋ ಟ್ರಾವೆಲರ್‌ನಲ್ಲಿ ಪ್ರವಾಸಕ್ಕೆ ತೆರಳಿದ್ದರು.

ಪ್ರವಾಸ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್‌ ತೆರಳುತ್ತಿದ್ದಾಗ ಚಿತ್ರದುರ್ಗ ನಗರದ ಜೆಎಂಐಟಿ ಬಳಿ ವಾಹನದ ಟೈರ್‌ ಸಿಡಿದಿದೆ. ಇದನ್ನು ನೋಡಲೆಂದು ಕೆಳಕ್ಕೆ ಇಳಿದ ಮೂವರು ಲಾರಿ ಅಡಿಗೆ ಸಿಕ್ಕು ಮೃತಪಟ್ಟಿದ್ದಾರೆ. ವಾಹನದ ಒಳಗಡೆ ಕುಳಿತಿದ್ದ 6 ಮಂದಿಗೆ ಸಣ್ಣಪುಟ್ಟ ಗಾಯವಾಗಿದ್ದು, ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಈ ಕುರಿತು ಕೋಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next