Advertisement
ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 427 ರನ್ ಪೇರಿಸಿದೆ. ಇದರಲ್ಲಿ ಅಟ್ಕಿನ್ಸನ್ ಗಳಿಕೆ 118 ರನ್. ಮೂಲತಃ ಬೌಲರ್ ಆಗಿರುವ ಅಟ್ಕಿನ್ಸನ್ ತಮ್ಮ ಕ್ರಿಕೆಟ್ ಬಾಳ್ವೆಯಲ್ಲಿ ಬಾರಿಸಿದ ಮೊದಲ ಶತಕ ಇದಾಗಿದೆ. 115 ಎಸೆತ ನಿಭಾಯಿಸಿದ ಅವರು 14 ಬೌಂಡರಿ ಹಾಗೂ 4 ಸಿಕ್ಸರ್ ಸಿಡಿಸಿ ಲಾರ್ಡ್ಸ್ ಅಂಗಳದಲ್ಲಿ ಮೆರೆದರು. ಈ ಐತಿಹಾಸಿಕ ಅಂಗಳದಲ್ಲಿ ಶತಕ ಬಾರಿಸಿದ ವಿಶ್ವದ ಕೇವಲ 6ನೇ ಬೌಲರ್ ಎಂಬುದು ಅಟ್ಕಿನ್ಸನ್ ಹೆಗ್ಗಳಿಕೆ. ಉಳಿದವರೆಂದರೆ ಗಾಬಿ ಅಲೆನ್, ರೇ ಇಲ್ಲಿಂಗ್‌ವರ್ತ್, ಬರ್ನಾರ್ಡ್ ಜೂಲಿಯನ್, ಸ್ಟುವರ್ಟ್ ಬ್ರಾಡ್ ಮತ್ತು ಅಜಿತ್ ಅಗರ್ಕರ್.ಜವಾಬು ನೀಡಿದ ಲಂಕಾ 196ಕ್ಕೆ ಆಲೌಟ್ ಆಯಿತು.