Advertisement

ಲಾರ್ಡ್ಸ್‌ ಟೆಸ್ಟ್‌: ಇಂಗ್ಲೆಂಡಿಗೆ 97 ರನ್‌ ಮುನ್ನಡೆ

03:05 AM Jul 09, 2017 | Team Udayavani |

ಲಂಡನ್‌: ಲಾರ್ಡ್ಸ್‌ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್‌ 97 ರನ್ನುಗಳ ಮೊದಲ ಇನ್ನಿಂಗ್ಸ್‌ ಮುನ್ನಡೆ ಸಾಧಿಸಿದೆ. ಆತಿಥೇಯರ 458 ರನ್ನಿಗೆ ಜವಾಬಿತ್ತ ದಕ್ಷಿಣ ಆಫ್ರಿಕಾ, ಪಂದ್ಯದ 3ನೇ ದಿನವಾದ ಶನಿವಾರ 361 ರನ್ನಿಗೆ ಆಲೌಟ್‌ ಆಯಿತು. 

Advertisement

ದಕ್ಷಿಣ ಆಫ್ರಿಕಾ 5ಕ್ಕೆ 214 ರನ್‌ ಗಳಿಸಿದಲ್ಲಿಂದ ದಿನದಾಟ ಮುಂದುವರಿಸಿತ್ತು. ಹರಿಣಗಳ ಸರದಿಯಲ್ಲಿ ಒಟ್ಟು 4 ಅರ್ಧ ಶತಕಗಳು ದಾಖಲಾದವು. ನಾಯಕ ಎಲ್ಗರ್‌ 54, ಬವುಮ 59, ಡಿ ಕಾಕ್‌ 51 ಮತ್ತು ಫಿಲಾಂಡರ್‌ 52 ರನ್‌ ಹೊಡೆದರು. ಇಂಗ್ಲೆಂಡ್‌ ಪರ ಅಲಿ 4 ವಿಕೆಟ್‌; ಆ್ಯಂಡರ್ಸನ್‌, ಬ್ರಾಡ್‌ ಮತ್ತು ಡಾಸನ್‌ ತಲಾ 2 ವಿಕೆಟ್‌ ಕಿತ್ತರು.

Advertisement

Udayavani is now on Telegram. Click here to join our channel and stay updated with the latest news.

Next