ಇಸ್ಲಾಮಾಬಾದ್: ಪಾಕಿಸ್ಥಾನದ ವಾಯವ್ಯ ಭಾಗದ ಸ್ವಾತ್ ಜಿಲ್ಲೆಯಲ್ಲಿ 1,300 ವರ್ಷಗಳಷುc ಹಿಂದಿನದ್ದು ಎಂದು ನಂಬಲಾಗಿರುವ ದೇಗುಲ ಪತ್ತೆಯಾಗಿದೆ. ಪಾಕಿಸ್ಥಾನ ಮತ್ತು ಇಟಲಿಯ ಪ್ರಾಚ್ಯ ವಸ್ತು ಸಂಶೋಧಕರಿಗೆ ದೇಗುಲದ ಅವಶೇಷಗಳು ಸಿಕ್ಕಿವೆ ಎಂದು ಖೈಬರ್ ಪಖು¤ಂಖ್ವಾ ಪ್ರಾಂತ್ಯದ ಪ್ರಾಚ್ಯವಸ್ತು ಇಲಾಖೆಯ ಅಧಿಕಾರಿ ಫಝಲ್ ಖಾಲಿಕ್ ಹೇಳಿದ್ದಾರೆ.
ಅವಶೇಷಗಳನ್ನು ಪರಿಶೀಲಿಸಿದಾಗ ಅದು ವಿಷ್ಣು ದೇಗುಲ ಎಂದು ಖಚಿತವಾಗಿದೆ. ಅದನ್ನು ಕಾಬೂಲ್ ಶಾಹಿಗಳು ಅಥವಾ ಹಿಂದೂ ಆಳ್ವಿಕೆಯ ಅವಧಿಯಲ್ಲಿ ನಿರ್ಮಿಸಲಾಗಿದೆ. ಇತಿಹಾಸ ಕಾಲದ ಕಾಬೂಲ್ ಕಣಿವೆ (ಈಗಿನ ಪೂರ್ವ ಅಫ್ಘಾನಿಸ್ಥಾನ ಭಾಗ) ಮತ್ತು ಗಾಂಧಾರ (ಈಗಿನ ಪಾಕಿಸ್ಥಾನ)ವನ್ನು ಅವರು ಆಳುತ್ತಿದ್ದರು.
ಉತ್ಖನನದ ವೇಳೆ ಸಂಶೋಧಕರಿಗೆ ಸೈನಿಕರು ಇರುತ್ತಿದ್ದ ದಂಡು ಪ್ರದೇಶ ಮತ್ತು ಕಾವಲು ಗೋಪುರಗಳ ಅವಶೇಷಗಳು ಸಿಕ್ಕಿವೆ. ಇದರ ಜತೆಗೆ ದೇಗುಲದ ಹೊರ ಭಾಗದಲ್ಲಿ ಇದ್ದದ್ದು ಎಂದು ಹೇಳಲಾಗಿರುವ ನೀರಿನ ಟ್ಯಾಂಕ್ ಇದ್ದದ್ದು ಪತ್ತೆಯಾಗಿದೆ. ಅದರ ಮೂಲಕ ಭಕ್ತರು ದೇಗುಲ ಪ್ರವೇಶ ಮುನ್ನ ಸ್ನಾನ ಮಾಡುತ್ತಿದ್ದಿರಬಹುದು ಎಂದು ಖಾಲಿಕ್ ಹೇಳಿದ್ದಾರೆ. ಇದೇ ಮೊದಲ ಬಾರಿಗೆ ಸ್ವಾತ್ ಪ್ರದೇಶದಲ್ಲಿ ಹಿಂದೂ ಆಳ್ವಿಕೆ ಇದ್ದ ಬಗ್ಗೆ ಕುರುಹುಗಳು ಪತ್ತೆಯಾಗಿವೆ. ಒಂದು ಸಾವಿರ ವರ್ಷಗಳ ಕಾಲ ಹಿಂದೂಶಾಹಿ ವಂಶಸ್ಥರು ಈ ಪ್ರದೇಶದಲ್ಲಿ ಆಳ್ವಿಕೆ ನಡೆಸಿದ್ದಿರಬಹುದು ಎಂದು ಹೇಳಿದ್ದಾರೆ.
ಇಟಲಿಯ ತಂಡದ ನೇತೃತ್ವ ವಹಿಸಿದ್ದ ಡಾ| ಲೂಕಾ ಎಂಬುವರು ಮಾತನಾಡಿ ಗಾಂಧಾರ ಪ್ರದೇಶದಲ್ಲಿ ನಿರ್ಮಾಣಗೊಂಡ ಮೊದಲ ದೇಗುಲ ಇದಾಗಿದೆ ಎಂದು ಹೇಳಿದ್ದಾರೆ.
ಪಾಕಿಸ್ಥಾನದ ಸ್ವಾತ್ ಜಿಲ್ಲೆಯಲ್ಲಿ ಪ್ರವಾಸೋದ್ದಿಮೆಗೆ ಸಂಬಂಧಿಸಿದಂತೆ 20ಕ್ಕೂ ಹೆಚ್ಚು ಸ್ಥಳಗಳು ಇವೆ. ಪ್ರಾಕೃತಿಕ ಸೌಂದರ್ಯ, ಧಾರ್ಮಿಕ ಕ್ಷೇತ್ರ ಗಳಿಗೆ ಭೇಟಿಗೆ ಅವಕಾಶ ಸೇರಿದಂತೆ ಹಲವು ರೀತಿಯ ಪ್ರವಾಸೋದ್ಯಮಕ್ಕೆ ಅವಕಾಶಗಳಿವೆ.