Advertisement
ಪಾಶ್ಚಿಮಾತ್ಯ ವಿದ್ವಾಂಸರು ಈ ಗಣಪತಿಯನ್ನು ಆರ್ಯರ ದೇವತೆಯೆಂದು ಪರಿಗಣಿಸದೆ, ಆರ್ಯರ ಪೂರ್ವದಲ್ಲಿದ್ದ ಭಾರತೀಯ ಆದಿವಾಸಿಗಳ ದೇವರೆಂದು ವಾದಿಸುತ್ತಾರೆ. ಕ್ರಮೇಣ ಈ ಮೂಲಜನರ ಸಂತೃಪ್ತಿಗಾಗಿ ಅವರೂ ಈ ಗಣಪತಿಯ ಪೂಜೆಯನ್ನು ಮಾಡಲಾರಂಭಿಸಿದರೆಂದು ಅವರು ವಾದಿಸುತ್ತಾರೆ. ಪಾಶ್ಚಿ ಮಾತ್ಯ ವಿದ್ವಾಂಸರ ಈ ವಾದಕ್ಕೆ ನಮ್ಮ “ಮಾನವ- ಗೃಹ್ಯ ಸೂತ್ರ’ ದಲ್ಲಿ ಹೇಳಲಾಗಿರುವ ಗಣಪತಿಯ ಚತುರ್ವಿಧ ನಾಮಾಂಕಿತಗಳೇ ಆಧಾರವೆನ್ನಲಾಗುತ್ತಿದೆ. ಈ ಚತುರ್ವಿಧ ಗಣಪತಿ ಗಳ ಹೆಸರು ಇಂತಿವೆ
Related Articles
Advertisement
ಕೊನೆಗೆ ಮಹಾವಿಷ್ಣುವೇ ಬಂದ. ಗಣಪತಿ- ವಿಷ್ಣು ಕಾದಾಡುತ್ತಿದ್ದಾಗಲೇ ಶಿವನೇ ಹಿಂದಿನಿಂದ ಬಂದು ಗಣಪತಿಯ ರುಂಡವನ್ನು ತನ್ನ ತ್ರಿಶೂಲದಿಂದ ಹಾರಿಸಿದ. ಇದರಿಂದ ಕುಪಿತಳಾದ ಪಾರ್ವತಿ ರಣಚಂಡಿಯಾಗಿ ಪ್ರತ್ಯಕ್ಷಳಾದಳು. ತನ್ನ ಮಗುವಿನ ಮೇಲೆ ಆಪತ್ತು ಬಂತೆಂದರೆ ಇಲಿ ಕೂಡಾ ಹುಲಿ, ದನ ಕೂಡಾ ಸಿಂಹವಾಗುತ್ತದಂತೆ! ಹೀಗೆ ಈ ಗಂಡ ಹೆಂಡಿರಲ್ಲಿ ಜಗಳವಾದರೆ ಪ್ರಳಯ ಸನ್ನಿಹಿತವೆಂದು ಬಗೆದು ದಿಗಿಲುಗೊಂಡ ಇಂದ್ರ- ನಾರದರೇ ಮೊದಲಾದ ದೇವ- ಋಷಿಗಣಗಳೆಲ್ಲ ನಾನಾ ವಿಧದಿಂದ ಪಾರ್ವತಿಯನ್ನು ಸಂತೈಸಲು ಆರಂಭಿಸಿದರು. ಕೊನೆಗೆ ಪಾರ್ವತಿಯ ಮನಃ ಪರಿವರ್ತನೆಯಾಗಿ ಗಣೇಶನೊಡನೆ ಯುದ್ಧ ನಿಲ್ಲಿಸುವಂತೆ ಹೇಳಿದಳು. ಆದರೆ ಈ ಗಣಪನಂತೂ ತನ್ನ ರುಂಡ ಕಳೆದು ಕೊಂಡುಬಿಟ್ಟಿದ್ದಾನೆ. ಆಗ ಮಹಾವಿಷ್ಣುವು ಎಲ್ಲಿಂದಲೋ ಒಂದು ದಂತವಿರುವ ಆನೆಯ ರುಂಡವನ್ನು ತಂದು ಆ ಗಣಪತಿಯ ಮೂರ್ತಿಗೆ ಜೋಡಿಸಿದನು. ಒಡನೆ ಗಣಪತಿ ಚಂಗನೆದ್ದು ಕುಳಿತನು. ಆಗ ಶಿವನು ಈ ಅಸಾಮಾನ್ಯ ಏಕದಂತನನ್ನು ತನ್ನ ಜೇಷ್ಠ ಪುತ್ರನೆಂದೂ, ತನ್ನೆಲ್ಲಾ ಗಣಗಳಿಗೆ ನಾಯಕನೆಂದೂ ನಿಯುಕ್ತಗೊಳಿಸಿದನು.
ಹೀಗೆ ಸಂಘರ್ಷದಿಂದ ಜನಿಸಿ ಈ ಗಣಗಳ ದಳಪತಿಯಾದ ಗಣಪತಿಗೆ ಈ ಬರಡು ಜೀವನದಲ್ಲಿ ಸಂತೋಷ ಸಿಗಲಿಲ್ಲ. ವಿ-ನಾಯಕರೆಂದು ಕರೆಸಿಕೊಳ್ಳುವವರಿಗೆ ಪರಿಶ್ರಮ ಮಾಡದೆ ಸುಖ ಸಿಗದಿದ್ದರೆ ಹೇಗೆ? ಹೀಗೆ ಜಿಜ್ಞಾಸೆಗೆ ಒಳಗಾದ ಗಣಪತಿ ಒಡನೆ ತನ್ನದೊಂದು ಷರತ್ತನ್ನು ಶಿವ-ಪಾರ್ವತಿಯರ ಮುಂದೆ ಇಟ್ಟನು.
ಅದು: ತನ್ನ ಮದುವೆಯನ್ನು ಬೇಗ ನಡೆಸಿಕೊಡಬೇಕೆಂದು. ಗಣಪತಿ ಮದುವೆಯ ಪ್ರಸ್ತಾಪ ಮಾಡಿದಾಗ ಪರಮೇಶ್ವರನ ಪ್ರಥಮ ಪುತ್ರ ಷಣ್ಮುಖ ಕೂಡ ತನಗೆ ಮದುವೆ ಯಾಗಬೇಕೆಂದು ಪ್ರಾರ್ಥಿಸಿಕೊಂಡನು. ಆಗ ವಿನೋದವಾಗಿ ಶಿವನು- “ಆಗಬಹುದು. ಇಬ್ಬರಿಗೂ ಮದುವೆ ಮಾಡೋಣ. ಆದರೆ ನಿಮ್ಮಿಬ್ಬರಲ್ಲಿ ಯಾರು ಮೊದಲು ಭೂ ಪ್ರದಕ್ಷಿಣೆ ಮಾಡುವರೋ ಅವರಿಗೆ ಮೊದಲು ಮದುವೆ ಮಾಡುವೆ’ ಎಂದನು. ಡೊಳ್ಳು ಹೊಟ್ಟೆಯ ಗಣಪತಿಯ ಬುದ್ದಿ ಯೆಂದೂ ಟೊಳ್ಳಾಗಿರಲಿಲ್ಲ. ಒಡನೆ ಎದ್ದು ಶಿವ-ಪಾರ್ವತಿಯರಿಗೆ ಏಳು ಸುತ್ತು ಬಂದು ಪ್ರಣಾಮ ಸಲ್ಲಿಸಿದನು. ಷಣ್ಮುಖನಾದರೋ ಭೂಮಂಡಲ ಪ್ರದಕ್ಷಿಣೆಗೆ ಹೊರಟುಹೋದನು.
ತನ್ನ ಕಾರ್ಯಗೈದ ಗಣಪತಿ ಶಿವನೊಡನೆ ತನಗೆ ಬೇಗ ಮದುವೆ ಮಾಡುವಂತೆ ಕೇಳಿಕೊಂಡನು. ಆಗ ಶಂಕರ- “ನೀನು ಭೂಪ್ರದಕ್ಷಿಣೆ ಮಾಡಲಿಲ್ಲವಲ್ಲಾ’ ಎಂದನು. ಗಣಪತಿ ಕೂಡಲೇ, “ನಾನು ಏಳು ಬಾರಿ ಈ ಜಗತ್ತಿನ ಒಡೆಯನಾದ ನಿನಗೂ ಜಗದ್ಧಾತ್ರಿಯಾದ ತಾಯಿ ಪಾರ್ವತಿಗೂ ಪ್ರದಕ್ಷಿಣೆ ಮಾಡಿ ವಂದಿಸಿದ್ದೇನೆ. ನನ್ನ ಅಂತರಂಗದಲ್ಲಿ ಈ ತಣ್ತೀವನ್ನು ಹುಡುಕಿ ಸಾಧಿಸಿದ ಮೇಲೆ ಬಹಿರ್ ಜಗತ್ತಿನ ಪ್ರದಕ್ಷಿಣೆಯೇಕೆ ಬೇಕು?’ ಎಂದುತ್ತರಿಸಿದಾಗ, ಈಶ್ವರನಿಗೆ ಗಣಪತಿಯ ಚುರುಕುಬುದ್ದಿ ಕಂಡು ಆನಂದವಾಗಿ ಮದುವೆ ಮಾಡಲು ಒಪ್ಪಿ ಕನ್ಯಾನ್ವೇಷಣೆಗಾರಂಭಿಸಿದನು. ಪಾರ್ವತಿ- ಶಂಕರ ರಿ ಬ್ಬರೂ ತಮ್ಮ ಒಲವಿನ ಕುವರನಿಗೆ ಯೋಗ್ಯ ಕುವರಿಯನ್ನು ಅರಸುತ್ತ ಸ್ವರ್ಗಲೋಕಕ್ಕೆ ಬಂದು ಅಲ್ಲಿದ್ದ ವಿಶ್ವಕರ್ಮನ ಇಬ್ಬರು ಕನ್ಯೆಯರಾದ ಬುದ್ಧಿ ಮತ್ತು ಸಿದ್ಧಿಯರನ್ನು ಕಂಡು ತಮ್ಮ ಸೊಸೆ ಯರನ್ನಾಗಿಸಿಕೊಳ್ಳಲು ನಿರ್ಧರಿಸಿದರು. ಅಂತೂ ಗಣಪತಿಯ ಮದುವೆ ಬುದ್ದಿ- ಸಿದ್ದಿಯರೊಂದಿಗೆ ವೈಭವದಿಂದ ನೆರವೇರಿತು. ವಿವಾಹವಾಗಿ ಎರಡು ವರ್ಷಗಳೊಳಗೆ ವಿವಾಹ ಸುಖದ ಫಲ-ಪುತ್ರ ಸಂತಾನವನ್ನು ಪಡೆದರು. ಬುದ್ದಿಯಲ್ಲಿ ‘ಲಕ್ಷ್ಯ’ ಎಂಬ ಕುಮಾರನೂ, ಸಿದ್ದಿಯಲ್ಲಿ “ಲಾಭ’ ಎಂಬ ಕುವ ರನೂ ಜನಿಸಿದರು. ಹೀಗೆ ಈ ಲಂಬೋದರನು ತನ್ನ ಬುದ್ದಿ- ಸಿದ್ದಿ ಯರೊಡಗೂಡಿ, ಲಕ್ಷ್ಯ -ಲಾಭರೆಂಬ ಪುತ್ರರೊಂದಿಗೆ ಸುಖ ಮಯ ಜೀವನ ಮಾಡುತ್ತ, ಅಗ್ರಪೂಜೆ ಪಡೆಯ ತೊಡಗಿದನು.
(ಕೀರ್ತಿನಾಥ ಕುರ್ತಕೋಟಿ ಸಂಪಾದಿಸಿದ “ವಿಶ್ವವ್ಯಾಪಿ ಗಣೇಶ’ ಪುಸ್ತಕದಿಂದ ಆಯ್ದುಕೊಂಡ ಅಧ್ಯಾಯ)
-ಬಿ. ನಾರಾಯಣ ಜೋಗಿತ್ತಾಯ