Advertisement

ಚನ್ನಬಸವ ಪಟ್ಟದೇವರು ಕನ್ನಡಿಗರ ದೇವರು

12:40 PM Dec 23, 2021 | Team Udayavani |

ಕಲಬುರಗಿ: ನಿಜಾಮರ ಆಳ್ವಿಕೆಯಲ್ಲಿ ಅನೇಕ ತರಹದ ದಬ್ಟಾಳಿಕೆ-ವಿರೋಧದ ನಡುವೆಯೂ ಹೊರಗಡೆ ಉರ್ದು ನಾಮಫಲಕ ಹಾಕಿ ಒಳಗಡೆ ಕನ್ನಡ ಭಾಷೆ ಕಲಿಸುವುದರ ಮೂಲಕ ಕನ್ನಡ ಭಾಷೆ ಮತ್ತು ಸಂಸ್ಕೃತಿ ಜೀವಂತವಾಗಿರಿಸಿ, ಹನ್ನೇರಡನೆ ಶತಮಾನದ ಬಸವಾದಿ ಶರಣರ ತತ್ವಗಳನ್ನು ಅನುಸರಿಸಿಕೊಂಡು ಬಂದಿರುವ ಲಿಂ. ಡಾ| ಚನ್ನಬಸವ ಪಟ್ಟದ್ದೇವರು ಕನ್ನಡಿಗರ ಮನೆ ದೇವರಾಗಿದ್ದಾರೆ ಎಂದು ನಾಡಿನ ಹಿರಿಯ ಸಾಹಿತಿ ಡಾ| ಮ.ಗು. ಬಿರಾದಾರ ಹೇಳಿದರು.

Advertisement

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ನಗರದ ಅಕ್ಕಮಹಾದೇವಿ ಮಹಿಳಾ ಪದವಿ ಮಹಾವಿದ್ಯಾಲಯದ ಪ್ರಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಲಿಂ. ಡಾ| ಚನ್ನಬಸವ ಪಟ್ಟದ್ದೇವರ ಜಯಂತಿ, ಭಾವೈಕ್ಯತೆಯ ಚಿಂತನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅಂದಿನ ಸಮಾಜದಲ್ಲಿ ಬೇರೂರಿದ್ದ ಜಾತೀಯತೆ, ಮೂಢನಂಬಿಕೆ, ಮೇಲು-ಕೀಳು ಎಂಬ ಬೇಧ ಭಾವ ತೊಡೆದು ಹಾಕಿ ಕಲ್ಯಾಣ ರಾಜ್ಯದ ನಿರ್ಮಾಣ ಮಾಡಲು ಹನ್ನೇರಡನೆ ಶತಮಾನದಲ್ಲಿ ಬಸವಾದಿ ಶರಣರು ಶ್ರಮಿಸಿದ ಹಾಗೆಯೇ. 20ನೇ ಶತಮಾನದಲ್ಲಿ ಭಾಲ್ಕಿಯ ಚನ್ನಬಸವ ಪಟ್ಟದ್ದೇವರು ಅವಿರತವಾಗಿ ಶ್ರಮಿಸಿದ್ದಾರೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಮುಂದಿನ ದಿನಗಳಲ್ಲಿ ಈ ಭಾಗದ ವಿದ್ಯಾರ್ಥಿಗಳು, ಯುವ ಜನತೆಗಾಗಿ ಕಾವ್ಯ ಕಮ್ಮಟ, ವಿವಿಧ ಸ್ಪರ್ಧೆಗಳು, ಚಿಗುರು ಕವಿಗೋಷ್ಠಿ, ಮಕ್ಕಳ ಕಾವ್ಯ ಸೌರಭ ಸೇರಿದಂತೆ ಅನೇಕ ರಚನಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸಿ, ಸಾಹಿತ್ಯ ಸೌಗಂಧ ಪಸರಿಸಲಾಗುವುದು ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ| ಅಂಬಾರಾಯ ಹಾಗರಗಿ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ, ಗೌರವ ಕೋಶಾಧ್ಯಕ್ಷ ಡಾ| ಶರಣರಾಜ ಛಪ್ಪರಬಂದಿ ಮಾತನಾಡಿದರು.

Advertisement

ಪ್ರಮುಖರಾದ ಜಗದೀಶ ಮರಪಳ್ಳಿ, ರವೀಂದ್ರಕುಮಾರ ಭಂಟನಳ್ಳಿ, ಬಿ.ಎಂ.ಪಾಟೀಲ ಕಲ್ಲೂರ, ವಿಶ್ವನಾಥ ತೊಟ್ನಳ್ಳಿ, ಶ್ರೀಕಾಂತ ಪಾಟೀಲ ತಿಳಗೂಳ, ಪ್ರಬುಲಿಂಗ ಮೂಲಗೆ, ವಿದ್ಯಾಸಾಗರ ದೇಶಮುಖ, ಶರಣಪ್ಪ ದೇಸಾಯಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next