ಕನಕಪುರ: ಮಹಿಳಾ ಸಂಘದಲ್ಲಿ ದುರ್ಬಳಕೆಯಾಗಿರುವ ಹಣವನ್ನು ವಸೂಲಿ ಮಾಡಲು ಮಹಿಳಾ ಶ್ರೀ ಶಕ್ತಿ ಸಂಘದ ಗ್ರಾಮೀಣ ಭಾಗದ ಮಹಿಳೆಯರು ಪರದಾಡುತ್ತಿದ್ದಾರೆ.
ತಾಲೂಕಿನ ಮರಳವಾಡಿ ಹೋಬಳಿಯ ಸಿಡಿ ದೇವರಹಳ್ಳಿ ಗ್ರಾಮದಲ್ಲಿ ಹಣ ಕಳೆದುಕೊಂಡಿರುವ ಶ್ರೀ ಶಕ್ತಿ ಸಂಘದ ಮಹಿಳೆಯರು ನ್ಯಾಯಕ್ಕಾಗಿ ಪೊಲೀಸ್ ಠಾಣೆಗೆ ಅಲೆದಾಡುತ್ತಿದ್ದಾರೆ. ಮಹಿಳಾ ಶ್ರೀ ಶಕ್ತಿ ಸಂಘಗಳ ಒಕ್ಕೂಟದವ್ಯವಸ್ಥಾಪಕ ಸತೀಶ್ ಮತ್ತು ಮಹಿಳಾ ಅಸೋಸಿಯೇಟೆಡ್ ಶಾಮೀಲಾಗಿ ಲಕ್ಷಾಂತರ ಹಣ ವಂಚಿಸಿರುವ ಆರೋಪ ಕೇಳಿಬಂದಿತ್ತು.
ಆರ್ಕಾವತಿ ಮಹಿಳಾ ಕಳಂಜಿಯಂ ಒಕ್ಕೂಟದ ಸದಸ್ಯರಾಗಿರುವ ಸಿಡಿದೇವರ ಹಳ್ಳಿ ಗ್ರಾಮದ ಮಹಿಳೆಯರು ಒಕ್ಕೂಟದ ವ್ಯವಸ್ಥಾಪಕ ಸತೀಶ್ ಮತ್ತು ಸಹಾಯಕಿಇಬ್ಬರು ಸೇರಿ ಸಂಘದ ಲಕ್ಷಾಂತರ ರೂ.ಹಣ ಲೂಟಿ ಮಾಡಿದ್ದಾರೆ. ಕಳೆದ ಡಿ.5ರಂದು ಗ್ರಾಮದಲ್ಲಿ ಸಭೆ ಸೇರಿ ಸಾರ್ವಜನಿಕವಾಗಿಯೇ ತರಾಟೆ ತೆಗೆದುಕೊಂಡಿದ್ದರು.
ವ್ಯವಸ್ಥಾಪಕ ಮತ್ತು ಅಸೋಸಿಯೇಟೆಡ್ ಇಬ್ಬರು ತಪ್ಪನ್ನು ಒಪ್ಪಿಕೊಳ್ಳದ ಹಿನ್ನೆಲೆ ಮಹಿಳೆಯರು ಹಾರೋಹಳ್ಳಿ ಠಾಣೆಗೆ ದೂರು ನೀಡಿದ್ದರು ಪ್ರಯೋಜನಆಗಿಲ್ಲ. ಕಸ್ತೂರಿ ಕರ್ನಾಟಕ ಜನಪರವೇದಿಕೆ ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ವರಲಕ್ಷ್ಮಿ ಮಹಿಳೆಯರಹೋರಾಟಕ್ಕೆ ಕೈಜೋಡಿಸಿದ್ದಾರೆ. ಸಂಘಗಳಲ್ಲಿ ವಂಚನೆ ಪ್ರಕರಣಗಳು ಬೆಳಕಿಗೆ ಬಂದಾಗ ಗ್ರಾಮೀಣ ಭಾಗದ ಮಹಿಳೆಯರಿಗೆ ಕಾನೂನು ಹೋರಾಟ ಮತ್ತು ಕಳೆದುಕೊಂಡ ಹಣ ಮರಳಿ ಪಡೆಯುವ ತಿಳಿವಳಿಕೆ ಇಲ್ಲದೇ ಇರುವುದು
ದಂಧೆಕೋರರಿಗೆ ಹಾಸಿಗೆ ಹಾಸಿ ಕೊಟ್ಟಂತಾಗಿದೆ. ಗ್ರಾಮೀಣ ಮಟ್ಟದಲ್ಲಿ ಸರ್ಕಾರಿ ಸೌಲಭ್ಯ ಬಳಸಿಕೊಳ್ಳುವ ಅರಿವಿರುವ ಮಹಿಳೆಯರಿಗೆ ಕಾನೂನು ಕೋಶಾಧಿಕಾರಿಗಳು, ಅಥವಾ ನ್ಯಾಯವಾದಿಗಳ ಬಳಿ ಈ ಬಗ್ಗೆ ಚರ್ಚಿಸಿದ್ದರೇ ಸಮಸ್ಯೆ ಇಷ್ಟು ಕಂಗ್ಗಟಾಗುತ್ತಿರಲಿಲ್ಲ ಎಂಬುದು ಕಾನೂನು ಬಲ್ಲವರ ಮಾತಾಗಿದೆ.