Advertisement

ಇಂದು ನಟ ಲೂಸ್‌ ಮಾದ ಯೋಗಿ ಬರ್ತ್‌ಡೇ: ’ಲಂಕೆ’ ಚಿತ್ರದಿಂದ ಮೋಶನ್ ಪೋಸ್ಟರ್ ಗಿಫ್ಟ್

07:42 AM Jul 06, 2021 | Team Udayavani |

ನಟ ಲೂಸ್‌ ಮಾದ ಯೋಗೀಶ್‌ ಇಂದು ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಸದ್ಯ ಯೋಗಿ ನಾಯಕನಾಗಿ ನಟಿಸಿರುವ “ಲಂಕೆ’ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಇಂದು ಯೋಗಿ ಹುಟ್ಟುಹಬ್ಬದ ಪ್ರಯುಕ್ತ ಚಿತ್ರತಂಡ, “ಲಂಕೆ’ ಚಿತ್ರದ ಮೋಶನ್‌ ಪೋಸ್ಟರ್‌ನ ಹುಟ್ಟುಹಬ್ಬದ ಉಡುಗೊರೆಯಾಗಿ ನೀಡಲು ಸಿದ್ಧತೆ ಮಾಡಿಕೊಂಡಿದೆ. ಯೋಗಿ ಬರ್ತ್‌ಡೇ ಪ್ರಯುಕ್ತ ಇಂದು ಬೆಳಿಗ್ಗೆ “ಆನಂದ್‌ ಆಡಿಯೋ’ ಯು-ಟ್ಯೂಬ್‌ ಚಾನೆಲ್‌ನಲ್ಲಿ “ಲಂಕೆ’ ಮೋಶನ್‌ ಪೋಸ್ಟರ್‌ ಬಿಡುಗಡೆಯಾಗಲಿದೆ.

Advertisement

“ಲಂಕೆ’ ಚಿತ್ರದಲ್ಲಿ ನಾಯಕ ಯೋಗಿ ಜೊತೆಗೆ ಕೃಷಿ ತಾಪಂಡ, ಕಾವ್ಯ ಶೆಟ್ಟಿ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ನಿಧನರಾದ ನಟ ಸಂಚಾರಿ ವಿಜಯ್‌ ಕೂಡ ಚಿತ್ರದ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಉಳಿದಂತೆ ಶರತ್‌ ಲೋಹಿತಾಶ್ವ, ಶೋಭರಾಜ್‌, ಡ್ಯಾನಿ ಕುಟ್ಟಪ್ಪ, ಸುಚೇಂದ್ರ ಪ್ರಸಾದ್‌, ವಾಣಿಶ್ರೀ, ಗಾಯಿತ್ರಿ ಜಯರಾಂ, ಎಸ್ತಾರ್‌ ನರೋನ, ಪ್ರಶಾಂತ್‌ ಸಿದ್ದಿ ಮುಂತಾದವರು ಚಿತ್ರದ ಇತರ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಸಾಹಸ ಪ್ರಧಾನ ಕಥಾಹಂದರ ಹೊಂದಿರುವ “ಲಂಕೆ’ ಚಿತ್ರವನ್ನು ರಾಮ್‌ ಪ್ರಸಾದ್‌ ಎಂ.ಡಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. “ದಿ ಗ್ರೇಟ್‌ ಎಂಟರ್‌ಟೈನರ್‌’ ಬ್ಯಾನರ್‌ನಲ್ಲಿ ಪಟೇಲ್‌ ಶ್ರೀನಿವಾಸ್‌ (ನಾಗವಾರ) ಹಾಗೂ ಸುರೇಖ ರಾಮಪ್ರಸಾದ್‌ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಚಿತ್ರದ ಆರು ಹಾಡುಗಳಿಗೆ ಕಾರ್ತಿಕ್‌ ಶರ್ಮಾ ಸಂಗೀತ ಸಂಯೋಜಿಸಿದ್ದಾರೆ. “ಲಂಕೆ’ಗೆ ರಮೇಶ್‌ ಬಾಬು ಛಾಯಾಗ್ರಹಣ, ಶಿವರಾಜ್‌ ಮೇಹು ಸಂಕಲನವಿದೆ. ಸದ್ಯ “ಲಂಕೆ’ ಚಿತ್ರದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಥಿಯೇಟರ್‌ಗಳು ತೆರೆಯುತ್ತಿದ್ದಂತೆ ಚಿತ್ರ ತೆರೆಗೆ ಬರಲು ತಯಾರಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next