ಚೆನ್ನೈ : ಮಾಜಿ ಕೇಂದ್ರ ಹಣಕಾಸು ಸಚಿವ ಪಿ ಚಿದಂಬರಂ ಅವರ ಪುತ, ಕಾಂಗ್ರೆಸ್ ನಾಯಕ ಕಾರ್ತಿ ಚಿದಂಬರಂ ಅವರಿಗೆ ಇನ್ನಷ್ಟು ಸಂಕಷ್ಟಕಗಳು ಈಗ ಎದುರಾಗಿವೆ. ಫೆಮಾ ನಿಯಮ ಉಲ್ಲಂಘನೆ ಕೇಸ್‌ನಲ್ಲಿ ಕಾರ್ತಿ ಚಿದಂಬರಂ ವಿರುದ್ಧ ಲುಕ್ ಔಟ್ ನೊಟೀಸ್ ಜಾರಿಯಾಗಿದೆ.
ಹತ್ತು ದಿನಗಳ ಹಿಂದೆ ಕಾರ್ತಿ ಚಿದಂಬರಂ ಸಿಬಿಐ ತನ್ನ ವಿರುದ್ಧ ಸಿಬಿಐ ಜಾರಿಗೊಳಿಸಿದ್ದ ಲುಕ್ ನೊಟೀಸ್ ವಿರುದ್ಧ ಮದ್ರಾಸ್ ಹೈಕೋರ್ಟ್ ಗೆ ಮನವಿ ಸಲ್ಲಿಸಿದ್ದರು. ಆ ಮನವಿಯು ಇಂದು ವಿಚಾರಣೆಗೆ ಬಂದಾಗ ಹೈಕೋರ್ಟ್ ವಿಷಯಕ್ಕೆ ಸಂಬಂಧಿಸಿ ಕೇಂದ್ರ ಗೃಹ ಸಚಿವಾಲಯದ ವಿವರಣೆಯನು ಕೋರಿ ಪ್ರಕರಣದ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿತು.
ಇಂದ್ರಾಣಿ ಮತ್ತು ಪೀಟರ್ ಮುಖರ್ಜಿ ಅವರು ಒಡೆತನ ಹೊಂದಿದ್ದ ಸಂದರ್ಭದಲ್ಲಿ ಕುದುರಿದ್ದ ಐಎನ್‌ಎಕ್ಸ್ ಮೀಡಿಯಾ ವ್ಯವಹಾರಕ್ಕೆ ಸಂಬಂಧಿಸಿ ತನ್ನ ಮುಂದೆ ತನಿಖೆಗೆ ಹಾಜರಾಗುವಂತೆ ಸೂಚಿಸಿ ಕಾರ್ತಿ ಚಿದಂಬರಂ ಗೆ ಸಿಬಿಐ ಸಮನ್ಸ್ ಜಾರಿ ಮಾಡಿತ್ತು.
ಆದರೆ ಕಾರ್ತಿ ಆ ಸಮನ್ಸ್‌ಗೆ ಉತ್ತರಿಸದೆ ಮದ್ರಾಸ್ ಹೈಕೋರ್ಟ್ ಮೆಟ್ಟಲೇರಿದ್ದರು. ಕಾರ್ತಿ ಅವರು ಈ ತನಕವೂ ತನ್ನ ವಿರುದ್ಧ ಲುಕ್ ಔಟ್ ನೊಟೀಸ್ ಜಾರಿಯಾಗಿರುವುದನ್ನು ನಿರಾಕರಿಸಿದ್ದಾಗಲೀ ದೃಢೀಕರಿಸಿದ್ದಾಗಲೀ ಇಲ್ಲ. ಕೆಲವು ದಿನಗಳ ಹಿಂದಷ್ಟೇ ಕಾರ್ತಿಚಿದಂಬರಂ ನಿವಾಸದ ಮೇಲೆ ಸಿಬಿಐ ದಾಳಿ ನಡೆದಿತ್ತು.
“ಸದ್ಯ ನಾನು ದೇಶದೊಳಗೇ ಇದ್ದೇನೆ; ಎಲ್ಲೂ ಹೋಗಿಲ್ಲ; ತನಿಖೆಗೆ ನಾನು ಪೂರ್ತಿಯಾಗಿ ಸಹಕರಿಸುತ್ತೇನೆ’ ಎಂದು ಕಾರ್ತಿ ಅವರು ಇಕಾನಮಿಕ್ ಟೈಮ್ಸ್ ಗೆ ಹೇಳಿರುವುದಾಗಿ ವರದಿಯಾಗಿದೆ.