Advertisement
Related Articles
Advertisement
ತಂಗಾಳಿಯಲ್ಲಿ ನಡೆಯುವುದೇ ವಿಶಿಷ್ಟ ಅನುಭವ. ಬೆಟ್ಟ ಹತ್ತುತ್ತ, ಹಿಂದೆ ತಿರುಗಿ ನೋಡಿದಾಗ ದೂರದಲ್ಲಿ ಪಟ್ಟಣದ ಬೀದಿದೀಪಗಳು ಫಳ ಫಳ ಹೊಳೆಯುವುದು ನೋಡಲು ಬಲು ಸೊಗಸಾಗಿತ್ತು. ದಾರಿಯಲ್ಲಿ ನಮಗೆ ಯಾವುದೇ ಕೀಟಗಳು, ವಿಷ ಜಂತುಗಳು ಕಾಣಲಿಲ್ಲ. ಕೀಟಗಳ ಸದ್ದೂ ಕೇಳಿರಲಿಲ್ಲ. ಸದ್ದೆಲ್ಲ ಮನುಜರದ್ದೇ. ನಮ್ಮ ಮುಂದೆ ಸುಮಾರು ಮಂದೆ ಹತ್ತುತ್ತಿದ್ದವರ ಮಾತು ಬೊಬ್ಬೆ ಕೇಳುತ್ತಲಿತ್ತು. ನಾವು ತಲುಪಬೇಕಿರುವ ಗಮ್ಯದ ಅಂತರ ಎರಡು ಕಿಮೀ.ಅಲ್ಲವೇ ಅಲ್ಲ. ಎಷ್ಟು ದೂರವಿದೆಯೋ ಗೊತ್ತಿಲ್ಲ. ಇದಂತೂ ಸುಲಭದ ದಾರಿಯಲ್ಲ ಎಂದು ಕೆಲವರು ಉದ್ಗರಿಸಿದರು. ನಾವು ನಡೆದೆವು, ನಡೆದೆವು. ಕಾಲುದಾರಿಯುದ್ದಕ್ಕೂ ಎರಡೂ ಬದಿಗಳಲ್ಲಿ ಸಣ್ಣಪುಟ್ಟ ಪೊದೆಗಿಡಗಂಟಿಗಳಿವೆ. ಅಲ್ಲಲ್ಲಿ ಸಿಗುವ ಬೃಹತ್ ಬಂಡೆಗಲ್ಲುಗಳ ಮೇಲೆ ನಿಂತು ವಿರಮಿಸಬಹುದು. ಅಂತೂ ಬೆಳಗ್ಗೆ ಆರು ಗಂಟೆಗೆ ಸ್ಕಂದಬೆಟ್ಟದ ತುದಿ ತಲಪಿದೆವು.
ಬೆಳಕು ಇನ್ನೂ ಪಸರಿಸಿರಲಿಲ್ಲ. ಬೆಟ್ಟದಮೇಲೆ ಪಾಳುಬಿದ್ದ ಗುಡಿ ಇದೆ. ಗುಡಿಯೊಳಗೆ ಶಿವಲಿಂಗ, ಬಸವನ ಮೂರ್ತಿಗಳಿವೆ. ನಮಗಿಂತ ಮೊದಲು ಬಂದ ಬೇರೆ ಊರಿನವರು ಚಳಿ ತಡೆಯಲಾರದೆ ಶೂ ಧರಿಸಿಯೇ ಗುಡಿಯೊಳಗೆ ಕೂತಿದ್ದರು. ಬಾಳೆಹಣ್ಣು ತಿಂದು ಸಿಪ್ಪೆ ಕೂಡ ಅಲ್ಲೇ ಎಸೆದಿದ್ದನ್ನು ನೋಡಿ ವಿಷಾದವಾಯಿತು.
ಬೆಟ್ಟದ ಮೇಲೆ ಕುಳಿರ್ಗಾಳಿ ಬೀಸಿ ನರನಾಡಿಗಳಲ್ಲಿ ಸಂವೇದನೆ ಮೂಡಿಸುತ್ತಿತ್ತು. ಅಲ್ಲಿ ಕೆಲವರು ಅಲ್ಲಲ್ಲಿ ಬೆಂಕಿ ಹಾಕಿ ಚಳಿ ಕಾಯಿಸುತ್ತ ಕೂತಿದ್ದರು. ನಮ್ಮಲ್ಲೂ ಚಳಿ ತಡೆಯಲಾಗದವರು ಬೆಂಕಿ ಬಳಿ ಕೂತರು. ಬೆಳಗಿನ ಝಾವದಲ್ಲಿ ಬೆಟ್ಟದ ತುದಿಯಲ್ಲಿ ನಿಂತು ಸುತ್ತಲೂ ನೋಡುವುದು ನಿಜಕ್ಕೂ ಸುಂದರ ಅನುಭವ. ಸೂರ್ಯನ ದರ್ಶನ ಇನ್ನೂ ಆಗಿರಲಿಲ್ಲ. ಆಗಸ ನಸು ಕೆಂಬಣ್ಣದಲ್ಲಿ ಕಾಣುವಾಗ ಭಾಸ್ಕರ ಏಳಲು ತಯಾರಿ ನಡೆಸುತ್ತಿ¨ªಾನೆಂದು ಅರ್ಥ! ಆರೂವರೆಯಾಯಿತು. ಇನ್ನೂ ಸೂರ್ಯ ಮೇಲೇರಿರಲಿಲ್ಲ. ಯಾಕೋ ಸತಾಯಿಸುತ್ತೀಯಾ? ನಿನ್ನ ನೋಡಲೆಂದು ನಾವು ನಿದ್ರೆ ಬಿಟ್ಟು ಕಷ್ಟಪಟ್ಟು ರಾತ್ರೆ ಬೆಟ್ಟ ಹತ್ತಿ ಬಂದಿದ್ದೇವೆ. ಬೇಗ ಬಾರೋ ಎಂದು ಎಲ್ಲರೂ ಬೊಬ್ಬೆ ಹಾಕಿದರು. ಅಂತೂ 6.55ಕ್ಕೆ ಸೂರ್ಯ ಕೆಂಪುಚೆಂಡಿನಂತೆ ಕಂಡು ಮೆಲ್ಲನೆ ಇಣುಕಿ ನೋಡಲು ಶುರುಮಾಡಿದ. ಎಂಥ ಚಂದದ ನೋಟವದು. ಸಣ್ಣ ಮಗುವನ್ನು ನಿ¨ªೆಯಿಂದ ತಾಯಿ ಎಬ್ಬಿಸಿದಾಗ ಕಣ್ಣುಜ್ಜುತ್ತ ಮೇಲೆ ಏಳುತ್ತಲ್ಲ… ಹಾಗೆಯೇ ಈ ಬಾಲಸೂರ್ಯನೂ ಕಣ್ಣುಜ್ಜುತ್ತ ಎದ್ದಂತೆ ಭಾಸವಾಯಿತು. ಆಗಸದ ಬಣ್ಣ ಕ್ಷಣಕ್ಕೊಮ್ಮೆ ಬದಲಾಗುತ್ತ, ಸೂರ್ಯ ಸ್ವಲ್ಪ ಸ್ವಲ್ಪವೇ ಮೇಲೇರಿ ಬರುವ, ಮೇಲೆಬಂದಂತೆ ಪ್ರಖರತೆ ಜಾಸ್ತಿ ಆಗುತ್ತ ಹೋಗುವ ದೃಶ್ಯ ನೋಡುವುದೇ ಬಲು ಸೊಗಸು.
ಹೀಗೆ ರಾತ್ರಿ ನಿ¨ªೆಕೆಟ್ಟು, ಟಾರ್ಚ್ ಹಿಡಿದು ಬೆಟ್ಟ ಏರಿ ಸೂರ್ಯೋದಯ ನೋಡಲು ಹೋಗಬೇಕಾ? ನಿಮ್ಮೂರÇÉೇ ಸೂರ್ಯ ಉದಯ ಕಾಣುವುದಿಲ್ಲವೆ? ಎಂಬ ಪ್ರಶ್ನೆ ಬರಬಹುದು. ಆದರೆ, ತಂಗಾಳಿಯಲ್ಲಿ ನಡುಗುತ್ತ, ಹೀಗೆ ಒಟ್ಟಿಗೆ ನಿಂತು, ಹರಟುತ್ತ ಭಾಸ್ಕರನ ಆಗಮನಕ್ಕೆ ಕಾಯುವುದಿದೆಯಲ್ಲ? ಅದರಲ್ಲಿ ಸಿಗುವ ಆನಂದವನ್ನು ವರ್ಣಿಸಲು ಸಾಧ್ಯವಿಲ್ಲ. ಬೆಟ್ಟದ ತುದಿಯಲ್ಲಿ ಕುಳಿತು ಬೆಟ್ಟದ ಕೆಳಗೆ, ಸುತ್ತಲಿನ ಪ್ರಕೃತಿ ವೈವಿಧ್ಯವನ್ನು ನೋಡುತ್ತ ಕಾಲ ಕಳೆದೆವು.
ಭಾನು ಮೆಲ್ಲಮೆಲ್ಲನೆ ಮೇಲೆಬಂದು ತನ್ನ ಪ್ರಖರತೆಯನ್ನು ಹೆಚ್ಚುಗೊಳಿಸಿದ. ತೀಕ್ಷ$ಗೊಂಡ ಸೂರ್ಯನನ್ನು ನೋಡಲು ಯಾರಿಗೂ ಉಮೇದಿಲ್ಲ.
ಇನ್ನು ಹೊರಡೋಣವೆಂದು ಆಯೋಜಕರು ಎಲ್ಲರನ್ನೂ ಹೊರಡಿಸಿದರು. ನಮ್ಮ ತಂಡದ ಚಿತ್ರ ತೆಗೆಸಿಕೊಂಡು 7.30ಕ್ಕೆ ಬೆಟ್ಟ ಇಳಿಯಲು ತೊಡಗಿದೆವು. ಬೆಳಕು ಹರಿದಾಗ ನಾವು ಬಂದ ದಾರಿಯನ್ನು ನೋಡಿ ಓಹೋ ನಾವು ಇಂಥ ಸ್ಥಳದಲ್ಲಿ ಹತ್ತಿ ಬಂದಿದ್ದೇವಲ್ಲ ಎಂಥ ದೊಡ್ಡ ದೊಡ್ಡ ಬಂಡೆಗಲ್ಲುಗಳಿವೆ ಎಂದು ಉದ್ಧರಿಸಿದೆವು. ಕುರುಚಲು ಪೊದೆಗಳಿಂದ ಕೂಡಿದ ಸಸ್ಯಗಳಿದ್ದವು. ಬಂಡೆಗಳನ್ನು ಇಳಿಯಲು ಕೆಲವರಿಗೆ ತುಸು ಕಷ್ಟವಾಯಿತು. 9 ಗಂಟೆಗೆ ನಾವು ಪಾಪಾಗ್ನಿಮಠ ತಲಪಿದೆವು.
ರುಕ್ಮಿಣಿ ಮಾಲಾ