Advertisement

Bengaluru Rave Party; 86 ಜನರು ಡ್ರಗ್ ಸೇವೆನೆ ಮಾಡಿರುವುದು ರಕ್ತ ಪರೀಕ್ಷಯಲ್ಲಿ ದೃಢ

05:40 PM May 23, 2024 | Team Udayavani |

ಬೆಂಗಳೂರು: ಈ ವಾರದ ಆರಂಭದಲ್ಲಿ ಬೆಂಗಳೂರು ಹೊರ ವಲಯದಲ್ಲಿರುವ ಫಾರ್ಮ್‌ಹೌಸ್‌ನಲ್ಲಿ ರೇವ್ ಪಾರ್ಟಿ ನಡೆಸಿದ್ದ 104 ಜನರ ವಿರುದ್ಧ ಬೆಂಗಳೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Advertisement

ಎಲೆಕ್ಟ್ರಾನಿಕ್ ಸಿಟಿ ಪ್ರದೇಶದ ಸಿಂಗೇನಾ ಅಗ್ರಹಾರದ ಜಿಎಂ ಫಾರ್ಮ್ ಹೌಸ್ ನಲ್ಲ ‘ಸನ್ ಸೆಟ್ ಟು ಸನ್ ರೈಸ್ ವಿಕ್ಟರಿ’ ಎಂಬ ಹೆಸರಿನಲ್ಲಿ ರೇವ್ ಪಾರ್ಟಿ ನಡೆಸಲಾಗಿತ್ತು. ಆಂಧ್ರ ಪ್ರದೇಶ ಮತ್ತು ಕರ್ನಾಟಕದ ಹಲವು ಹೈಪ್ರೊಫೈಲ್ ಯುವಕ ಯುವತಿಯರು ಈ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ತೆಲುಗು ನಟಿಯರಾದ ಹೇಮಾ ಮತ್ತು ಆಶಿ ರಾಯ್ ಕೂಡಾ ಪಾರ್ಟಿಯಲ್ಲಿದ್ದರು.

ಪಾರ್ಟಿಯಲ್ಲಿ 73 ಪುರುಷರು ಮತ್ತು 30 ಮಹಿಳೆಯರು ಇದ್ದರು, ಅವರಲ್ಲಿ 59 ಪುರುಷರು ಮತ್ತು 27 ಮಹಿಳೆಯರು ಮಾದಕ ದ್ರವ್ಯ ಸೇವಿಸಿರುವುದು ಖಾಸಗಿ ಆಸ್ಪತ್ರೆಯಲ್ಲಿ ನಡೆಸಿದ ರಕ್ತ ಪರೀಕ್ಷೆಯಲ್ಲಿ ದೃಢಪಟ್ಟಿದೆ.

ರೇವ್ ಪಾರ್ಟಿಗೆ ದಾಳಿ ನಡೆಸಿದ್ದ ಸಿಸಿಬಿ ಪೊಲೀಸರು 14.4 ಗ್ರಾಂ ಎಂಡಿಎಂಎ ಮಾತ್ರೆಗಳು, 1.16 ಗ್ರಾಂ ಎಂಡಿಎಂಎ ಹರಳುಗಳು, ಆರು ಗ್ರಾಂ ಹೈಡ್ರೋ ಗಾಂಜಾ, ಐದು ಗ್ರಾಂ ಕೊಕೇನ್, ಕೊಕೇನ್ ಲೇಪನವಿರುವ 500 ಮುಖಬೆಲೆಯ ನೋಟುಗಳು, ಆರು ಗ್ರಾಂ ಹೈಡ್ರೋ ಗಾಂಜಾ, ಐದು ಮೊಬೈಲ್ ಫೋನ್‌ಗಳು, ಫೋಕ್ಸ್‌ವ್ಯಾಗನ್ ಮತ್ತು ಲ್ಯಾಂಡ್ ರೋವರ್ ಕಾರುಗಳು, ಧ್ವನಿ ಮತ್ತು ಬೆಳಕು ಸೇರಿದಂತೆ ಮತ್ತು ಡಿಜೆ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಎಫ್‌ಐಆರ್ ಪ್ರತಿಯಲ್ಲಿ ಉಲ್ಲೇಖಿಸಲಾಗಿದೆ.

ರೇವ್‌ ಪಾರ್ಟಿ ಪ್ರಕರಣ ಸಿಸಿಬಿಗೆ ವರ್ಗಾವಣೆ

Advertisement

ರೇವ್‌ ಪಾರ್ಟಿ ಪ್ರಕರಣವನ್ನು ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಅಲೋಕ್‌ ಮೋಹನ್‌ ಅಧಿಕೃತವಾಗಿ ಸಿಸಿಬಿಗೆ ವರ್ಗಾವಣೆ ಮಾಡಿದ್ದಾರೆ. ಸಿಸಿಬಿ ಮಾದಕ ವಸ್ತು ನಿಗ್ರಹ ದಳ ವಿಭಾಗ ಎಸಿಪಿ ನೇತೃತ್ವದಲ್ಲಿ ಇನ್‌ಸ್ಪೆಕ್ಟರ್‌ ಲಕ್ಷ್ಮೀಪ್ರಸಾದ್‌ ಅವರನ್ನು ತನಿಖಾಧಿಕಾರಿಗಳನ್ನಾಗಿ ನೇಮಿಸಲಾಗಿದೆ. ದಾಳಿ ಸಂಬಂಧ ಈ ಮೊದಲು ಎಲೆಕ್ಟ್ರಾನಿಕ್‌ ಸಿಟಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಬಳಿಕ ಠಾಣಾ ವ್ಯಾಪ್ತಿ ಹಿನ್ನೆಲೆಯಲ್ಲಿ ಹೆಬ್ಬಗೋಡಿ ಠಾಣೆಗೆ ವರ್ಗಾಯಿಸಲಾಗಿತ್ತು. ಆದರೆ, ಪಾರ್ಟಿಯಲ್ಲಿ ಡ್ರಗ್ಸ್‌ ಸೇವನೆ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಸಿಸಿಬಿಗೆ ವರ್ಗಾವಣೆ ಮಾಡಲಾಗಿ.ದೆ

Advertisement

Udayavani is now on Telegram. Click here to join our channel and stay updated with the latest news.

Next